ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೊಡುವ ಮುನ್ನ ಎಚ್ಚರ: ಬೆರಳು ಕಳೆದುಕೊಂಡ ಬಾಲಕ..!
ಸ್ಮಾರ್ಟ್‌ಫೋನ್ ಅನ್ನು ಮಕ್ಕಳಿಗೆ ಕೊಡಬೇಡಿ ಎನ್ನುವ ಮಾತನ್ನು ತಜ್ಞರೇ ಹೇಳುತ್ತಾರೆ. ಸ್ಮಾರ್ಟ್‌ಫೋನ್ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎನ್ನುವ ಕಾರಣಕ್ಕಾಗಿ. ಆಂಧ್ರದ ಕರ್ನೂರು ಜಿಲ್ಲೆಯಲ್ಲಿ ನಡೆದ ಒಂದು ಘಟನೆಯಲ್ಲಿ 10 ವರ್ಷದ ಬಾಲಕನೊರ್ವ ಸ್ಮಾರ್ಟ್‌ಫೋನ್ ಬ್ಲಾಸ್ಸ್ ನಿಂದಾಗಿ ತನ್ನ ಕೈ ಬೆರಳುಗಳನ್ನು ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ.

ಓದಿರಿ: ಜಿಯೋ ಸಿಮ್ ಯೂಸ್ ಮಾಡುವವರಿಗೆ ಈ ವಿಷಯ ತಿಳಿದರಬೇಕು..!
ಬಾಲಕ ಸ್ಮಾರ್ಟ್‌ಫೋನ್ ಹಾಡು ಕೇಳುತ್ತಿದ್ದ ವೇಳೆಯಲ್ಲಿ ಅದು ಬ್ಲಾಸ್ಟ್ ಆಗಿದ್ದು, ಇದರಿಂದಾಗಿ ಆತನ ಕೈನ ಮೂರು ಬೆರಳುಗಳು ಛಿದ್ರಗೊಂಡಿವೆ ಎಂದು ಮುಂಬೈ ಮಿರರ್ ವರದಿ ಮಾಡಿದೆ. ಬಾಲಕನಿಗೆ ಸದ್ಯ ಆಸ್ಪತ್ರೆಯೊಂದರಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ಬಾಲಕನೇ ವರದಿಗಾರರಿಗೆ ನೇರವಾಗಿ ಘಟನೆಯ ಕುರಿತು ಮಾಹಿತಿಯನ್ನು ನೀಡಿದ್ದಾನೆ ಎನ್ನಲಾಗಿದೆ.

ಹಾಡು ಕೇಳುತ್ತಿದ್ದೆ:
ನನ್ನ ಅಮ್ಮನ ಮೊಬೈಲಿನಲ್ಲಿ ಹಾಡು ಕೇಳುತ್ತಾ, ಕೈನಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ಮಂಚದ ಮೇಲೆ ಮಲಗಿದ್ದೆ. ಇದಕ್ಕಿದ್ದ ಹಾಗೆ ಮೊಬೈಲ್ ಬ್ಲಾಸ್ ಆಯಿತು, ನನ್ನ ಕೈನ ಬೆರಳುಗಳು ತುಂಡಾಗಿ ಆಗಿ ಗಾಳಿಯಲ್ಲಿ ಹಾರಿದವು ಎಂದು ಬಾಲಕನು ವಿವರಣೆಯನ್ನು ನೀಡಿದ್ದಾನೆ.

ಹೆಚ್ಚಿನ ಗಾಯ:
ಮಲಗಿದ್ದ ಸಂದರ್ಭದಲ್ಲಿ ಹೊಟ್ಟೆಯ ಮೇಲೆ ಕೈನಲ್ಲಿ ಮೊಬೈಲ್ ಇಟ್ಟುಕೊಂಡಿದ್ದ ಕಾರಣದಿಂದಾಗಿ ಬಾಲಕನ ಹೊಟ್ಟೆಯ ಭಾಗಕ್ಕೂ ಗಾಯಗಳಾಗಿದ್ದು, ಕೈನಲ್ಲಿ ಮೂರು ಬೆರಳುಗಳೇ ಕಟ್ ಆಗಿದೆ ಎನ್ನಲಾಗಿದೆ. ಬೆರಳು ತುಂಡಾಗಿರುವ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸೋರಿಕೆಯಾಗಿದೆ.

ಮರಳಿ ಜೋಡಿಸಲಿದ್ದಾರೆ:
ಕರ್ನೂಲ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ಕೈ ಬೆರಳುಗಳನ್ನು ಪ್ಲಾಸ್ಟಿಕ್ ಸರ್ಜರಿಯ ಮೂಲಕ ಮರುಜೋಡನೆ ಮಾಡಲು ವೈದ್ಯರು ಮುಂದಾಗಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದಾಗಿ ಮತ್ತೆ ಬಾಲಕನ ಬೆರಳುಗಳು ಜೋಡಣೆಯಾಗಲಿದೆ.

ಮೊಬೈಲ್ ಯಾವುದು..?
ಬಾಲಕ ಬಳಸುತ್ತಿದ್ದ ಮೊಬೈಲ್ ಯಾವುದು, ಯಾವ ಕಂಪನಿಯೂ ನಿರ್ಮಾಣ ಮಾಡಿದ್ದು ಎನ್ನುವ ವಿಷಯಗಳ ಕುರಿತು ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ. ಈ ಕುರಿತು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಎಚ್ಚರ:
ನಿಮ್ಮ ಮಕ್ಕಳ ಕೈಗೆ ಸ್ಮಾರ್ಟ್‌ಫೋನ್‌ಗಳನ್ನು ಕೊಡುವ ಮುನ್ನ ಎಚ್ಚರ. ಯಾವ ಕ್ಷಣದಲ್ಲಿ ಯಾವ ರೀತಿಯ ತೊಂದರೆಗಳು ಎದುರಾಗುತ್ತದೆಯೋ ತಿಳಿಯದು. ಏಕೆಂದರೆ ಸ್ಮಾರ್ಟ್‌ಫೋನ್ ಬಳಕೆಯಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ತೊಂದರೆಗಳೇ ಹೆಚ್ಚು. ಈ ಹಿನ್ನಲೆಯಲ್ಲಿ ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್ ಬಳಕೆ ಮಾಡುವ ಸಂದರ್ಭದಲ್ಲಿ ಅವರೊಂದಿಗೆ ನೀವು ಇರಿ. ಇಲ್ಲವಾದರೆ ಅವರಿಗೆ ಫೋನ್‌ಗಳನ್ನು ನೀಡಬೇಡಿ.


Click it and Unblock the Notifications