ಜಿಯೋ ಸಿಮ್ ಯೂಸ್‌ ಮಾಡುವವರಿಗೆ ಈ ವಿಷಯ ತಿಳಿದಿರಬೇಕು..!

|

ದೇಶಿಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಲ್ಲಿ ಚಿನ್ನದ ರೀತಿಯಲ್ಲಿ ಡೇಟಾ ಮಾರಾಟ ಮಾಡುತ್ತಾ ಅತೀ ಹೆಚ್ಚು ಆದಾಯವನ್ನುಗಳಿಸುತ್ತಾ, ಬಳೆದಾರರಿಂದ ಸಾಕಷ್ಟು ದುಡ್ಡು ಪೀಕುತ್ತಿದ್ದ ಟೆಲಿಕಾಂ ಕಂಪನಿಗಳಿಗೆ ಒಂದೇ ಹೊಡೆತದಲ್ಲಿ ಮೇಲೆ ಎಳಲಾಗದಂತೆ ಮಾಡಿದ ರಿಲಯನ್ಸ್ ಮಾಲೀಕತ್ವದ ಜಿಯೋ, ತಿಂಗಳಿಗೆ ಒಂದು GB ಬಳಕೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದವರಿಗೆ ದಿನಕ್ಕೆ ಅತೀ ವೇಗದಲ್ಲಿ 1 GB ಡೇಟಾವನ್ನು ಬಳಕೆ ಮಾಡಲು ಉಚಿತವಾಗಿ ನೀಡಿತ್ತು. ಇದೇ ಮಾದರಿಯಲ್ಲಿ ಇಂದಿಗೂ ತನ್ನ ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ನಿತ್ಯ 2 GB ಡೇಟಾವನ್ನು ನೀಡುತ್ತಾ ಬಂದಿದೆ.

ಜಿಯೋ ಸಿಮ್ ಯೂಸ್‌ ಮಾಡುವವರಿಗೆ ಈ ವಿಷಯ ತಿಳಿದಿರಬೇಕು..!

ಓದಿರಿ: ಸಣ್ಣ ಪ್ಲಾಸ್ಟಿಕ್ ಕವರ್‌ನಿಂದ ಇಷ್ಟೆಲ್ಲ: ವೈರಲ್ ಫೋಟೋ ನೋಡಿದ್ರೆ ಕಣ್ಣಲ್ಲಿ ನೀರು..!

ಈ ಹಿನ್ನಲೆಯಲ್ಲಿ ಜಿಯೋ ಬಳಕೆದಾರರೂ ಈ ತ್ರೈಮಾಸಿಕದಲ್ಲಿ ಬರೋಬ್ಬರಿ 642 ಕೋಟಿ GB ಡೇಟಾವನ್ನು ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ಲೆಕ್ಕ ಹಾಕಿದರೆ ಎಷ್ಟೊ ದೇಶಗಳಲ್ಲಿ ಇಷ್ಟು ಪ್ರಮಾಣದ ಡೇಟಾವನ್ನು ಒಂದು ವರ್ಷದಲ್ಲಿಯೂ ಬಳಕೆ ಮಾಡುತ್ತಿಲ್ಲ ಎನ್ನಲಾಗಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು ಮೊಬೈಲ್ ಡೇಟಾವನ್ನು ಬಳಕೆ ಮಾಡುತ್ತಿರುವ ದೇಶ ಎಂದರೆ ಭಾರತವೇ, ಆದರೆ ವೇಗದ ವಿಚಾರದಲ್ಲಿ ಕೊಂಚ ಪ್ರಮಾಣದಲ್ಲಿ ಹಿನ್ನಡೆಯನ್ನು ಅನುಭವಿಸಿದರೂ ಸಹ ವಿಶ್ವದಲ್ಲಿ ಅತೀ ಹೆಚ್ಚು ಡೇಟಾವನ್ನು ಬಳಕೆ ಮಾಡಿಕೊಳ್ಳುತ್ತಿದೆವೆ.

ಪ್ರತಿಯೊಬ್ಬ ತಿಂಗಳಿಗೆ 10.6 GB ಡೇಟಾ:

ಪ್ರತಿಯೊಬ್ಬ ತಿಂಗಳಿಗೆ 10.6 GB ಡೇಟಾ:

ಜಿಯೋ ಮಾರುಕಟ್ಟೆಯಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯನ್ನು ಮಾಡಿಕೊಳ್ಳುತ್ತಿದೆ. ಸದ್ಯ ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರದಲ್ಲಿ ಪ್ರತಿ ಜಿಯೋ ಬಳಕೆದಾರರು ಪ್ರತಿ ತಿಂಗಳು 10.6 GBವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಿಮಗೆ ಕೇವಲ 10 GB ಎನ್ನಿಸಬಹುದು ಆದರೆ ಮಾರುಕಟ್ಟೆಯಲ್ಲಿ ಇದು ಅತೀ ದೊಡ್ಡ ಪ್ರಮಾಣದಾಗಿದೆ.

44,871 ಕೋಟಿ ನಿಮಿಷಗಳ ಮಾತುಕತೆ:

44,871 ಕೋಟಿ ನಿಮಿಷಗಳ ಮಾತುಕತೆ:

ಜಿಯೋ ಬಳಕೆದಾರರು ಕೇವಲ ಡೇಟಾ ಬಳಕೆಯನ್ನು ಮಾತ್ರವೇ ಮುಂದಿಲ್ಲ, ಪ್ರತಿ ತಿಂಗಳು 44,871 ಕೋಟಿ ನಿಮಿಷಗಳ ಮಾತುಕತೆ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಜಿಯೋ ದಲ್ಲಿ ಔಟ್ ಗೋಯಿಂಗ್ ಮತ್ತು ರೋಮಿಂಗ್ ಫುಲ್ ಪ್ರೀ ಇರುವುದು. ಇದರಲ್ಲಿ ಪ್ರತಿಯೊಬ್ಬ ಬಳಕೆದಾರು ಪ್ರತಿ ತಿಂಗಳು 744 ನಿಮಿಷಗಳಷ್ಟು ಸಮಯ ಜಿಯೋದಲ್ಲಿ ಔಟ್ ಗೋಯಿಂಗ್ ಮಾಡಿರುತ್ತಾರೆ ಎನ್ನಲಾಗಿದೆ.

ವಿಡಿಯೋ ನೋಡುವ ಸಂಖ್ಯೆ:

ವಿಡಿಯೋ ನೋಡುವ ಸಂಖ್ಯೆ:

ಇದಲ್ಲದೇ ಜಿಯೋ ವೇಗದ 4G ನೀಡುತ್ತಿರುವ ಹಿನ್ನಲೆಯಲ್ಲಿ ಬಳಕೆದಾರರು ವಿಡಿಯೋ ನೋಡುವ ಸಂಖ್ಯೆಯೂ ಉತ್ತಮವಾಗಿದೆ. ಪ್ರತಿ ತಿಂಗಳು ಜಿಯೋ ಬಳಕೆದಾರರು 340 ಕೋಟಿ ನಿಮಿಷಗಳ ವಿಡಿಯೋವನ್ನು ನೋಡುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಲೆಕ್ಕ ಹಾಕಿದರೆ ಪ್ರತಿಯೊಬ್ಬರು ತಿಂಗಳಿನಲ್ಲಿ 15.4 ಗಂಟೆಗಳ ಕಾಲ ವಿಡಿಯೋವನ್ನು ನೋಡುತ್ತಿದ್ದಾರೆ.

215 ಮಿಲಿಯನ್ ಬಳಕೆದಾರರು:

215 ಮಿಲಿಯನ್ ಬಳಕೆದಾರರು:

ಜಿಯೋ ಸೇವೆಯನ್ನು ಆರಂಭಿಸಿದ 22 ತಿಂಗಳ ನಂತರದಲ್ಲಿ 215 ಮಿಲಿಯನ್ ಬಳಕೆದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ ಎನ್ನಲಾಗಿದೆ. ಅಲ್ಲದೇ ಈ ಸಂಖ್ಯೆಯೂ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಜಿಯೋ ಸೇವೆಯ ಲಾಭವು ಬಳಕೆದಾರರಿಗೆ ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಇಳಿಕೆ ಹಾದಿಯಲ್ಲಿ ಏರ್‌ಟೆಲ್:

ಇಳಿಕೆ ಹಾದಿಯಲ್ಲಿ ಏರ್‌ಟೆಲ್:

ಜಿಯೋ ಆರಂಭದ ನಂತರದಲ್ಲಿ ಬಳಕೆದಾರರ ಸಂಖ್ಯೆಯಲ್ಲಿ ಏರ್‌ಟೆಲ್ ಇಳಿಕೆ ಹಾದಿಯಲ್ಲಿ ಸಾಗಿದೆ. ಇಂದು ಏರ್‌ಟೆಲ್ 344 ಮಿಲಿಯನ್ ಬಳಕೆದಾರರನ್ನು ಮಾತ್ರವೇ ಹೊಂದಿದೆ. ಆದರೆ ಶಾರ್ಟ್ ಟೈಮಿನಲ್ಲಿ ಬಳಕೆದಾರರ ಸಂಖ್ಯೆಯೂ ಏರಿಕೆಯಾಗುವ ಬದಲು ಇಳಿಕೆಯಾಗುತ್ತಿರುವುದು ಏರ್‌ಟೆಲ್‌ಗೆ ತಲೆನೋವು ತಂದಿದೆ.

ಪೋಸ್ಟ್‌ಪೇಯ್ಡ್ ನಲ್ಲಿಯೂ:

ಪೋಸ್ಟ್‌ಪೇಯ್ಡ್ ನಲ್ಲಿಯೂ:

ಇದೇ ಮಾದರಿಯಲ್ಲಿ ಪೋಸ್ಟ್ ಪೇಯ್ಡ್ ಮಾರುಕಟ್ಟೆಯಲ್ಲಿ ಏರ್‌ಟೆಲ್‌ 940.4 ಕೋಟಿ ನಷ್ಟವನ್ನು ಅನುಭವಿಸಿದೆ ಎನ್ನಲಾಗಿದೆ. ಇದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಜಿಯೋ ರೂ.612 ಕೋಟಿ ಲಾಭವನ್ನು ಮಾಡಿಕೊಂಡಿದೆ. ಇದರಿಂದಾಗಿ ಬಳಕೆದಾರರಿಗೆ ಜಿಯೋನೆ ಬೆಸ್ಟ್‌..!

Best Mobiles in India

English summary
Jio Users Consumed 642 Crore GB Data During Q1 FY19. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X