Home
ಸುದ್ದಿಜಾಲ

ಮೊಬೈಲ್‌ ಫೋನ್‌ ಕಂಡುಹಿಡಿದ ಮಾರ್ಟಿನ್‌ ಪ್ರತಿ ವರ್ಷ ತಮ್ಮ ಫೋನ್‌ ಬದಲಾಯಿಸುತ್ತಾರೆ ಯಾಕೆ?

ಇಂದು ನಾವು ನೀವೆಲ್ಲರೂ ಫೋನ್ ಬಳಕೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಮಾರ್ಟಿನ್ ಕೂಪರ್ ಪರಿಶ್ರಮ ಕಾರಣ. ಕೆಲವು ದಿನಗಳ ಹಿಂದೆ ಇವರು ಸಮಾಜಕ್ಕೆ ಒಂದು ದೊಡ್ಡ ಸಂದೇಶದ ಮೂಲಕ ಎಚ್ಚರಿಕೆ ನೀಡಿದ್ದರು. ಇಂದಿನ ದಿನಗಳಲ್ಲಿ ಜನ ರಸ್ತೆ ದಾಟುವಾಗಲೂ ಕೂಡ ಮೊಬೈಲ್‌ ಬಳಸುತ್ತಿರುವುದು ನೋಡಿ ನನಗೆ ಬೇಸರವಾಗಿದೆ ಎಂದಿದ್ದರು. ಈ ನಡುವೆ ಕೂಪರ್ ಬಗ್ಗೆ ಅಚ್ಚರಿಯ ವಿಷಯ ಸಹ ತಿಳಿದುಬಂದಿದೆ.

ಹೌದು, ಕಳೆದ ಐದು ದಶಕಗಳಲ್ಲಿ ತಂತ್ರಜ್ಞಾನವು ಗಮನಾರ್ಹ ಪ್ರಗತಿ ಕಂಡಿದ್ದು, ಇದೀಗ ಭಾವನೆಗಳನ್ನೇ ಅರ್ಥ ಮಾಡಿಕೊಳ್ಳುವ ಎಐಯನ್ನು ಬಳಕೆ ಮಾಡುವಷ್ಟು ಬೆಳೆದಿದ್ದೇವೆ. ಆದರೆ, 50 ವರ್ಷಗಳ ಹಿಂದೆ ಮಾರ್ಟಿನ್ ಕೂಪರ್ ಕಂಡುಹಿಡಿದ ಮೊಬೈಲ್ ಫೋನ್ ಇಡೀ ಜಗತ್ತಿನಾದ್ಯಂತ ಸಂಚಲನ ಉಂಟುಮಾಡಿತ್ತು. ಅದು ಇಂದಿನ ಈ ರೀತಿಯ ಸ್ಮಾರ್ಟ್‌ಲೋಕಕ್ಕೆ ಬುನಾದಿ ಹಾಕಿಕೊಟ್ಟಿತ್ತು.

ಮೊಬೈಲ್‌ ಕಂಡುಹಿಡಿದ ಮಾರ್ಟಿನ್‌ ಪ್ರತಿ ವರ್ಷ ತಮ್ಮ ಫೋನ್‌ ಬದಲಾಯಿಸುತ್ತಾರೆ ಯಾಕೆ?

ಈ ನಡುವೆ ಸಮಾಜದಲ್ಲಿ ಯಾರಾದರೂ ವಿಶೇಷವಾಗಿ ಸಾಧನೆ ಮಾಡಿದಾಗ ಅವರ ಹಿನ್ನೆಲೆಯ ಬಗ್ಗೆ ಜನ ಇಣುಕಿ ನೋಡುವುದು ಸಹಜ. ಅದರಲ್ಲೂ ಯಾರು ಏನನ್ನಾದರೂ ಹೊಸದಾಗಿ ತಯಾರು ಮಾಡಿದರೆ ಅಥವಾ ಕಂಡುಹಿಡಿದರೆ ಅವರು ಅದನ್ನೇ ಬಳಕೆ ಮಾಡುತ್ತಾರಾ ಅಥವಾ ಬೇರೆ ವಸ್ತುವನ್ನು ಬಳಕೆ ಮಾಡುತ್ತಾರಾ ಎನ್ನುವ ಸಾಮಾನ್ಯ ಪ್ರಶ್ನೆ ಮೂಡುತ್ತದೆ. ಅದರಂತೆ ಮೊಬೈಲ್ ಕಂಡುಹಿಡಿದ ಮಾರ್ಟಿನ್ ಕೂಪರ್ ಇಂದು ಯಾವ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಿ.

ಪ್ರತಿ ವರ್ಷ ಹೊಸ ಫೋನ್‌ ಖರೀದಿ ಮಾಡುತ್ತಾರೆ: ನಾವು ನೀವೆಲ್ಲಾ ಮೂರು ಅಥವಾ ನಾಲ್ಕು ಹಾಗೂ ಅದಕ್ಕೂ ಹೆಚ್ಚಿನ ವರ್ಷಗಳ ನಂತರ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡುತ್ತೇವೆ. ಆದರೆ, ಕೂಪರ್ ಅವರು ಪ್ರತಿ ವರ್ಷ ಹೊಸ ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ ಎನ್ನುವುದು ಹಲವು ಜನರಿಗೆ ತಿಳಿಯದ ವಿಷಯ. ಇದರಲ್ಲಿ ಗಮನಿಸಬೇಕಾದ ವಿಷಯ ಎಂದರೆ ಇವರು ಬಳಕೆ ಮಾಡುವುದು ಸಾಮಾನ್ಯವಾದ ಸ್ಮಾರ್ಟ್‌ಡಿವೈಸ್‌ಗಳಲ್ಲ.

ಯಾವ ಫೋನ್‌ಗಳು ಇವರಿಗೆ ಅಚ್ಚು ಮೆಚ್ಚು?: ಸದ್ಯಕ್ಕೆ ಜಗತ್ತಿನಲ್ಲಿ ಆಪಲ್‌ ಡಿವೈಸ್‌ಗಳು ಭಾರೀ ಬೇಡಿಕೆ ನಿರ್ಮಾಣ ಮಾಡಿದ್ದು, ಪ್ರತಿಷ್ಟಿತರು ಬಳಕೆ ಮಾಡುವ ಡಿವೈಸ್‌ಗಳಂತೆ ಗುರುತಿಸಿಕೊಂಡಿವೆ. ಹಾಗೆಯೇ ಕೂಪರ್‌ ಸಹ ಪ್ರತಿವರ್ಷ ಟಾಪ್‌ ಎಂಡ್‌ ಐಫೋನ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಮೊಮ್ಮಕ್ಕಳಂತೆ ಸ್ಮಾರ್ಟ್‌ಫೋನ್ ಬಳಕೆ ಮಾಡುವುದರಲ್ಲಿ ನಾನು ಎಂದಿಗೂ ಪ್ರವೀಣನಲ್ಲ ಎಂದೂ ಸಹ ತಿಳಿಸಿದ್ದಾರೆ.

ಇನ್ನು ಕೂಪರ್‌ ಅವರು ಹಲವಾರು ಅಪ್ಲಿಕೇಶನ್‌ಗಳ ಬಳಕೆಯನ್ನು ಮಾಡುತ್ತಾರೆ. ಅದೆಲ್ಲಕ್ಕೂ ಮಿಗಿಲಾಗಿ ಫೋನ್ ಅನ್ನು ಸಂವಹನಕ್ಕಾಗಿ ಬಳಸುತ್ತಿದ್ದಾರೆ. ಇದರೊಂದಿಗೆ ಸಂದೇಶಗಳನ್ನು ಕಳುಹಿಸುವುದು ಮತ್ತು ಶ್ರವಣ ಸಾಧನಗಳನ್ನು ಕಂಟ್ರೋಲ್‌ ಮಾಡುವ ಕಾರ್ಯಕ್ಕೆ ತಮ್ಮ ಫೋನ್‌ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಜೊತೆಗೆ ಆಪಲ್‌ ವಾಚ್‌ ಅನ್ನು ಸಹ ಬಳಕೆ ಮಾಡುತ್ತಿರುವುದು ವಿಶೇಷವಾದ ಸಂಗತಿ.

ಆಪಲ್‌ ಡಿವೈಸ್‌ಗಳಿಗೆ ಯಾಕಿಷ್ಟು ಒಲವು?: ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ಆಪಲ್‌ ಡಿವೈಸ್‌ಗಳು ಸುಧಾರಿತ ಫೀಚರ್ಸ್‌ಗಳೊಂದಿಗೆ ಕೆಲಸ ಮಾಡುತ್ತವೆ. ಜೊತೆಗೆ ಅತ್ಯುತ್ತಮ ಕಾರ್ಯಕ್ಷಮತೆ ಸಹ ಹೊಂದಿದ್ದು, ಅದರಲ್ಲೂ ಆಪಲ್‌ ವಾಚ್‌ ಅಂತೂ ಜೀವ ಉಳಿಸುವ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಹಾಗೆಯೇ ಸೆಕ್ಯೂರಿಟಿ ಫೀಚರ್ಸ್‌ ಸಹ ಉತ್ತಮವಾಗಿದ್ದು, ಈ ಎಲ್ಲಾ ಕಾರಣಕ್ಕೆ ಕೂಪರ್‌ ಅವರು ಈ ಫೋನ್‌ಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎನ್ನಬಹುದು.

ಮೊಬೈಲ್‌ ಕಂಡುಹಿಡಿದ ಮಾರ್ಟಿನ್‌ ಪ್ರತಿ ವರ್ಷ ತಮ್ಮ ಫೋನ್‌ ಬದಲಾಯಿಸುತ್ತಾರೆ ಯಾಕೆ?

ಏಪ್ರಿಲ್ 3, 1973 ರಂದು ಕೂಪರ್ ಅವರು ಮೊಟೊರೊಲಾ ಪ್ರಯೋಗಾಲಯದಿಂದ ಬೆಲ್ ಸಿಸ್ಟಮ್ಸ್‌ನಲ್ಲಿ ಮೊದಲ ಕರೆ ಮಾಡಿದ್ದರು. ಅಂದು ತಾಂತ್ರಿಕ ಕಾಲಘಟ್ಟದ ಯುಗ ಆರಂಭವಾಗಿತ್ತು. ಈಗ ಕೂಪರ್‌ ಅವರಿಗೆ 94 ವರ್ಷ. ಇಂದಿಗೂ ಲವಲವಿಕೆಯಿಂದ ಹೊಸ ಹೊಸ ಸ್ಮಾರ್ಟ್‌ಡಿವೈಸ್‌ಗಳ ಬಗ್ಗೆ ಕಣ್ಣಾಡಿಸುತ್ತಾರಂತೆ. ಹಾಗೆಯೇ ಅವುಗಳ ಫೀಚರ್ಸ್‌ಗಳ ಬಗ್ಗೆ ವಿಶ್ಲೇಷಣೆ ಸಹ ಮಾಡಿಕೊಂಡು ಬಂದಿದ್ದಾರೆ.

ನಿಮಗೆ ತಿಳಿದಿದೆಯಾ? ಆರಂಭದಲ್ಲಿ ಮೊಬೈಲ್ ಫೋನ್‌ಗಳು ದುಬಾರಿಯಾಗಿದ್ದವು. ಅಂದರೆ, ಸುಮಾರು $5,000 (4,10,527ರೂ. ಗಳು) ಬೆಲೆಯಿತ್ತು. ಇದಾದ ನಂತರ ಮಾನವನಿಗೆ ಫೋನ್‌ಗಳು ಸಾಕಷ್ಟು ಪ್ರಯೋಜನಗಳನ್ನು ಒದಗಿಸಿವೆ. ಆ ಸೇವೆ ಇಂದಿಗೂ ವಿಸ್ತಾರವಾಗುತ್ತಲೇ ಸಾಗಿದೆ. ಜೊತೆಗೆ ಕೂಪರ್ ಪ್ರಕಾರ ಪ್ರತಿ ಪೀಳಿಗೆಯು ಈ ಹಿಂದಿನದಕ್ಕಿಂತ ಬುದ್ಧಿವಂತವಾಗಿದೆ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ನಮಗೆ ನಾವೇ ಈ ಸಂಬಂಧ ಕೆಲವು ನಿರ್ಬಂಧಗಳನ್ನು ಹಾಕಿಕೊಳ್ಳಬೇಕಿದೆ.

Best Mobiles in India

English summary
Martin Cooper revolutionized the world by inventing the mobile phone. In the meantime, find out which phone they buy every year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+