ವಿಶ್ವದ ಜನಸಂಖ್ಯೆಯನ್ನು ಮೀರಿಸಲಿದೆ ಮೊಬೈಲ್‌ ಗ್ರಾಹಕರ ಸಂಖ್ಯೆ

Posted By:

ವಿಶ್ವದಲ್ಲಿ ಮೊಬೈಲ್‌ ಕ್ರಾಂತಿಯಾಗಿದೆ. ವಿಶ್ವದ ಜನಸಂಖ್ಯೆಗಿಂತ ಮೊಬೈಲ್‌ ಬಳಸುವ ಗ್ರಾಹಕರ ಸಂಖ್ಯೆ ಹೆಚ್ಚಾಗಲಿದೆ. ಮುಂದಿನ ವರ್ಷದ ಅಂತ್ಯಕ್ಕೆ ಮೊಬೈಲ್‌ ಬಳಸುವ ಗ್ರಾಹಕರ ಸಂಖ್ಯೆ ವಿಶ್ವದ ಜನಸಂಖ್ಯೆಯನ್ನು ಮೀರಿಸಲಿದೆ ಎಂದು ವಿಶ್ವಸಂಸ್ಥೆಯ ಸಂಸ್ಥೆಯೊಂದು ವರದಿ ನೀಡಿದೆ.

ಇಂಟರ್‌ನ್ಯಾಷನಲ್‌ ಟೆಲಿಕಾಂ ಯುನಿಯನ್‌ ಪ್ರಿಡಿಕ್ಷನ್‌ (International Telecoms Union prediction) ವರದಿ ಪ್ರಕಾರ ವಿಶ್ವದ ಜನಸಂಖ್ಯೆ 710 ಕೋಟಿ ಇದ್ದು, ಸದ್ಯ ಮೊಬೈಲ್‌ ಚಂದದಾರರ ಸಂಖ್ಯೆ 680 ಕೋಟಿ ಇದೆ. ಈ ವರ್ಷದ ಅಂತ್ಯಕ್ಕೆ ಮೊಬೈಲ್‌ ಚಂದದಾರರ ಸಂಖ್ಯೆ 700 ಕೋಟಿಗೆ ತಲುಪಲಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ.

ವಿಶ್ವದ ಜನಸಂಖ್ಯೆಯನ್ನು ಮೀರಿಸಲಿದೆ ಮೊಬೈಲ್‌ ಗ್ರಾಹಕರ ಸಂಖ್ಯೆ

ರಷ್ಯಾದಲ್ಲಿ ಹೆಚ್ಚು ಮೊಬೈಲ್‌ ಚಂದದಾರರಿದ್ದಾರೆ ತನ್ನ ವರದಿಯಲ್ಲಿ ತಿಳಿಸಿದೆ. ಅತೀ ಕಡಿಮೆ ಮೊಬೈಲ್‌ ಚಂದದಾರರಿವುದು ಆಫ್ರಿಕಾ ಖಂಡದಲ್ಲಿ ಎಂದು ವರದಿಯಲ್ಲಿ ಹೇಳಿದ್ದು ಇಲ್ಲಿ ನೂರು ಜನರಲ್ಲಿ 63 ಮಂದಿ ಮೊಬೈಲ್‌ ಹೊಂದಿದ್ದಾರೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಇಷ್ಟೇ ಅಲ್ಲದೇ ವಿಶ್ವದ ಶೇ. 40 ಮಂದಿ ಆನ್‌ಲೈನ್‌ ಬಳಸುತ್ತಿದ್ದಾರೆ ಎಂದು ಹೇಳಿದೆ. ಅನ್‌ಲೈನ್‌ ಬಳಸುವ ದೇಶಗಳಲ್ಲಿ ಯುರೋಪ್‌ನಲ್ಲಿ(ಶೇ.75), ಅಮೆರಿಕ(ಶೇ.61), ಏಷ್ಯಾ(ಶೇ.32),ಆಫ್ರಿಕಾ (ಶೇ.16 ) ಜನ ಆನ್‌ಲೈನ್‌ ಬಳಸುತ್ತಿದ್ದಾರೆ ಎಂದ ತನ್ನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ನಿಮ್ಮಲ್ಲಿರುವ ಮೊಬೈಲ್‌ ಹೇಗಿದೆ ? ಪರೀಕ್ಷಿಸಿಕೊಳ್ಳಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot