ಗ್ರಾಹಕರಿಗೆ ಕಾದಿದೆ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆಯ ಬಿಸಿ!
ಸ್ಮಾರ್ಟ್‌ಫೋನ್ ಪ್ರತಿಯೊಬ್ಬರಿಗೂ ಅಗತ್ಯ ಡಿವೈಸ್ ಆಗಿದ್ದು, ಈ ನಿಟ್ಟಿನಲ್ಲಿ ಮಾರುಕಟ್ಟೆಗೆ ತರಹೇವಾರಿ ಹೊಸ ಸ್ಮಾರ್ಟ್‌ಫೋನ್‌ಗಳುಎಂಟ್ರಿ ನೀಡುತ್ತಿವೆ. ಆದರೆ ಇನ್ನುಂದೆ ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಫೋನ್‌ಗಳ ದರ ಹೆಚ್ಚಳದ ಹೊರೆ ಆಗಲಿದೆ. ಏಕೆಂದರೇ ಮೊಬೈಲ್ ಫೋನ್‌ಗಳ ಮೇಲಿನ ತೆರಿಗೆಯನ್ನು ಶೇ.12% ನಿಂದ ಶೇ.18 ಪರ್ಸೆಂಟ್‌ಗೆ ಏರಿಕೆ ಮಾಡಲಾಗಿದೆ.

ಹೌದು, ಇದೇ ಮಾರ್ಚ್ 14 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಮೊಬೈಲ್ ಫೋನ್‌ಗಳು ಮತ್ತು ಸ್ಮಾರ್ಟ್‌ಫೋನ್ ನಿರ್ದಿಷ್ಟ ಬಿಡಿ ಭಾಗಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು 18 ಪರ್ಸೆಂಟ್‌ಗೆ ಏರಿಸಲಾಗಿದೆ. ಈ ಮೊದಲು ಮೊಬೈಲ್ ಫೋನ್‌ಗಳ ಜಿಎಸ್‌ಟಿ ಶುಲ್ಕವು ಶೇ.12% ಇತ್ತು.

ಮಾರಾಟಕ್ಕೆ ರೆಡಿ ಇರುವ ಉತ್ಪನ್ನಗಳ ಮೇಲಿನ ತೆರಿಗೆಯು ಆ ಉತ್ಪನ್ನಗಳ ತಯಾರಿಕೆಗೆ ಅಗತ್ಯ ಇರುವ ಬಿಡಿ ಭಾಗಗಳ ತೆರೆಗಿಗಿಂತ ಕಡಿಮೆ ಇದ್ದಾಗ ಸರ್ಕಾರವೇ ಹೆಚ್ಚುವರಿಯಾಗಿ ಹಣವನ್ನು ಮರಳಿ ನೀಡಬೇಕಾಗಿರುತ್ತದೆ. ಮೊಬೈಲ್ ತೆರಿಗೆಯಲ್ಲಿ ಈ ರೀತಿ ಕಂಡುಬಂದಿದ್ದು ಜಿಎಸ್‌ಟಿ ಏರಿಕೆಯ ನಿರ್ಧಾರಕ್ಕೆ ಕಾರಣವಾಗಿದೆ. ಮೊಬೈಲ್ ಫೋನ್‌ಗಳ ತೆರೆಗೆಯಲ್ಲಿ ಇನ್ನು ಶೇ. 6 ಪರ್ಸೆಂಟ್ ಹೆಚ್ಚಳವಾಗಲಿದ್ದು, ಇದರಿಂದ ಸ್ಮಾರ್ಟ್‌ಫೋನ್‌ಗಳ ಬೆಲೆಗಳು ಸಹ ದುಬಾರಿಯಾಗಲಿದೆ ಎನ್ನಲಾಗಿದೆ.

ಇನ್ನು ಮೊಬೈಲ್ ಫೋನ್‌ಗಳಿಗೆ ಹೆಚ್ಚಿಸಿಸಿರುವ ಈ ಪರಿಷೃತ ಹೊಸ ಜಿಎಸ್‌ಟಿ ದರವು ಇದೇ ಏಪ್ರಿಲ್ 1ರಿಂದ ಜಾರಿಯಾಗಲಿದೆ ಎಂದು ಹೇಳಲಾಗಿದೆ. ಹಾಗೆಯೇ ಜಿಎಸ್‌ಟಿ ವೆಬ್‌ಸೈಟ್ ನಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗುವುದು ಮತ್ತು ನಿರ್ವಹಣೆಯನ್ನು ಚುರುಕಾಗಿಯು ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಸದ್ಯ ರೆಡ್ಮಿ ನೋಟ್ 9 ಪ್ರೊ, ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ ಫೋನ್‌ಗಳು ಹೊಸದಾಗಿ ಮಾರುಕಟ್ಟೆಗೆ ಎಂಟ್ರಿ ಪಡೆದಿವೆ. ಹಾಗೆಯೇ ರಿಯಲ್ ಮಿ 6i, ಸ್ಯಾಮ್‌ಸಂಗ್ ಎಂ21, ವಿವೋ ವಿ19, ಒನ್‌ಪ್ಲಸ್ 8 ಸರಣಿ ಸ್ಮಾರ್ಟ್‌ಫೋನ್‌ಗಳು, ರಿಲಾಯನ್ಸ್ ಜಿಯೋ 3 ಫೋನ್, ಸೇರಿದಂತೆ ಇನ್ನೂ ಹಲವು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಪ್ರವೇಶ ಪಡೆಯಲಿವೆ. ಈ ಸ್ಮಾರ್ಟ್‌ಫೋನ್‌ಗಳು ಗ್ರಾಹಕರಲ್ಲಿ ನಿರೀಕ್ಷೆಗಳನ್ನು ಮೂಡಿಸಿವೆ.


Click it and Unblock the Notifications








