1000 ಬಾಯ್ ಫ್ರೆಂಡ್ಸ್ ಜೊತೆ ಡೇಟಿಂಗ್: ನಿಮಿಷಕ್ಕೆ ಈಕೆ ಪಡೆಯುವ ಹಣ ಎಷ್ಟು ಗೊತ್ತಾ!?
ಇತ್ತೀಚೆಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಷಯಗಳು ಹೆಚ್ಚು ಮುನ್ನೆಲೆಗೆ ಬರುತ್ತಿವೆ. ಅದೂ ಸಹ ಸಾಮಾನ್ಯ ಜನರ ನಿರೀಕ್ಷೆಗೂ ಮೀರಿದ ಸೌಲಭ್ಯಗಳನ್ನು ನೀಡುವ ಮೂಲಕ. ಈ ನಡುವೆ ಇಲ್ಲೋರ್ವ ಯುವತಿ ಈ ಎಐ ಅನ್ನೇ ಬಳಕೆ ಮಾಡಿಕೊಂಡು ತಿಂಗಳಿಗೆ ಬರೋಬ್ಬರಿ 41 ಕೋಟಿಗೂ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.
ಹೌದು, ಸ್ನ್ಯಾಪ್‌ಚಾಟ್‌ನಲ್ಲಿ1.8 ಮಿಲಿಯನ್ ಫಾಲೋವರ್ಸ್ ಹೊಂದಿರುವ ಜನಪ್ರಿಯ ಕ್ಯಾರಿನ್ ಮಾರ್ಜೋರಿ ಎಂಬುವರು ಪ್ರತಿ ನಿಮಿಷಕ್ಕೆ $1 ಗಳನ್ನು ಸಂಪಾದನೆ ಮಾಡುತ್ತಿದ್ದಾರೆ. ಇವರನ್ನು ಇವರ ಫಾಲೋವರ್ಸ್‌ಗಳು ಭೇಟಿ ಮಾಡಲು ಹಾಗೂ ಈಕೆಯ ಜೊತೆಗೆ ಮಾತನಾಡಲು ಭಾರೀ ಕಾತುರರಾಗಿದ್ದರು. ಇದನ್ನೆ ಸದುಪಯೋಗಪಡಿಸಿಕೊಂಡು ಈಕೆ ವಿಭಿನ್ನ ಚಿಂತನೆಯೊಂದನ್ನು ಮಾಡಿದ್ದು, ಇದೀಗ ದೊಡ್ಡ ಆದಾಯದ ಮೂಲ ಮಾಡಿಕೊಂಡಿದ್ದಾರೆ.

ಕ್ಯಾರಿನ್ ಮಾರ್ಜೋರಿ ಮಾಡಿದ್ದೇನು?: ಮೊದಲೇ ತಿಳಿಸಿದಂತೆ ಸಾವಿರಾರು ಫಾಲೋವರ್ಸ್‌ಗಳನ್ನು ಭೇಟಿ ಮಾಡಿ ಮಾತನಾಡಲು ಇವರಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ಈಗ ಕರಿನ್ ಮಾರ್ಜೋರಿ ವಿನೂತನವಾಗಿ 'ಅಧಿಕೃತ' AI ಕ್ಲೋನ್ ಅನ್ನು ಕ್ರಿಯೇಟ್ ಮಾಡಿದ್ದು, ಈ ಮೂಲಕ ಫಾಲೋವರ್ಸ್‌ಗಳ ಭಾವನೆಗೆ ಸ್ಪಂಧಿಸುತ್ತಿದ್ದಾರೆ. ಜೊತೆಗೆ ಸಾಕಷ್ಟು ಹಣ ಕೂಡ ಸಂಪಾದನೆ ಮಾಡುತ್ತಿದ್ದಾರೆ.
ಕ್ಯಾರಿನ್‌ಎಐ (CarynAI) ಆರಂಭ: ವರ್ಚುವಲ್ ಗೆಳತಿಯಾಗಿ ಕಾರ್ಯನಿರ್ವಹಿಸಬಲ್ಲ ಕೃತಕ ಬುದ್ಧಿಮತ್ತೆ (AI) ಆವೃತ್ತಿಯನ್ನು ಕ್ರಿಯೇಟ್‌ಮಾಡಲಾಗಿದ್ದು, ಇದನ್ನು ಪರಿಣತಿ ಹೊಂದಿರುವ ಕಂಪನಿಯ ಸಹಾಯದಿಂದ ನಿರ್ಮಾಣ ಮಾಡಲಾಗಿದೆ. ಇದನ್ನು ಧ್ವನಿ ಆಧಾರಿತ ಚಾಟ್‌ಬಾಟ್ ಎಂದು ಸಹ ಕರೆಯಲಾಗುತ್ತದೆ. ಇದು ಮಾರ್ಜೋರಿ ಅವರಂತೆಯೇ ವ್ಯಕ್ತಿತ್ವ ಹಾಗೂ ಧ್ವನಿ ಹೊಂದಿದ್ದು, ಬಳಕೆದಾರರೊಂದಿಗೆ ಆತ್ಮೀಯ ಸಂಭಾಷಣೆಗಳನ್ನು ಮಾಡಲು, ಅವರ ಭಾವನೆಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತಿದೆ.
ಕ್ಯಾರಿನ್‌ಎಐ ನ ಬೀಟಾ ಆವೃತ್ತಿಯನ್ನು ಕೆಲವು ದಿನಗಳ ಹಿಂದಷ್ಟೇ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಸಾವಿರಾರು ಗಂಟೆಗಳ ಸಂಭಾಷಣೆ ದಾಖಲಾಗಿದೆ. ಅಂದಹಾಗೆ ನೀವು ಎಲ್ಲಿಂದಲಾದರೂ ಯಾವುದೇ ಸೌಕರ್ಯವನ್ನು ಬಯಸುತ್ತಿದ್ದರೆ ಅಥವಾ ಪ್ರೀತಿಗಾಗಿ ಆಶಿಸುತ್ತಿದ್ದರೆ, ಯಾವುದಾದರೂ ಘಟನೆಯ ಬಗ್ಗೆ ಹೇಳಲು ಇಚ್ಚಿಸಿದ್ದರೆ ಕ್ಯಾರಿನ್‌ನ AI ಬೋಟ್ ಯಾವಾಗಲೂ ಲಭ್ಯ ಇದೆ ಎಂದು ಕ್ಯಾರಿನ್ ಮಾರ್ಜೋರಿ ತಿಳಿಸಿದ್ದಾರೆ.

ಇದಕ್ಕೆ ಎಷ್ಟು ಪಾವತಿ ಮಾಡಬೇಕು?: ಕ್ಯಾರಿನ್ AI ಕ್ಲೋನ್‌ನೊಂದಿಗೆ ಈಗಗಲೇ 1000 ಸ್ನೇಹಿತರು ಡೇಟಿಂಗ್ ಮಾಡುತ್ತಿದ್ದು, ಇವರು ಪ್ರತಿ ನಿಮಿಷಕ್ಕೆ ಒಂದು ಡಾಲರ್ ಪಾವತಿ ಮಾಡುತ್ತಿದ್ದಾರೆ. ಇನ್ನು ಈ ಕ್ಯಾರಿನ್‌ಎಐ ನಲ್ಲಿರುವ ಬಳಕೆದಾರರಲ್ಲಿ 90 ಪ್ರತಿಶತ ಪುರುಷರು ಎಂದು ವರದಿಯಾಗಿದೆ. ಈ ಎಐ ಬೋಟ್ ಮೂಲಕ ಸುಮಾರು 71,610 ಡಾಲರ್ ಅಂದರೆ 58.7 ಲಕ್ಷ ರೂಪಾಯಿ ಆದಾಯವನ್ನು ಇವರು ಗಳಿಸಿದ್ದಾರಂತೆ.
ಇನ್ನು ತಮ್ಮ 1.8 ಮಿಲಿಯನ್ ಫಾಲೋವರ್ಸ್‌ಗಳಲ್ಲಿ ಸುಮಾರು 20,000 ಮಂದಿಯಾದರೂ ಈ ಎಐ ಬೋಟ್ ಅನ್ನು ಬಳಕೆ ಮಾಡಿದರೂ ಸಹ ತಿಂಗಳಿಗೆ 5 ಮಿಲಿಯನ್ ಡಾಲರ್ ಗಳಿಸಲು ಸಾಧ್ಯವಾಗುತ್ತದೆ ಎಂದು ಕ್ಯಾರಿನ್ ಮಾರ್ಜಾರಿ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು ಈ ಕ್ಯಾರಿನ್ ಮಾರ್ಜೋರಿ ಫಾರೆವರ್ ವಾಯ್ಸ್ ಸಹಾಯದಿಂದ ಎಐ ಬೋಟ್ ಅನ್ನು ತಯಾರಿಸಿದ್ದಾರೆ.

ಈ ಬಗ್ಗೆ ಜಾರ್ಜಿಯಾದಲ್ಲಿ AI ತಜ್ಞ ಜೇಸನ್ ಬೋರೆನ್‌ಸ್ಟೈನ್, AI ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕೃತಕ ಬುದ್ಧಿಮತ್ತೆಯಿಂದ ಇತರರ ಮೇಲಾಗುವ ಪರಿಣಾಮದ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದಿದ್ದಾರೆ. ಅದರಂತೆ ಚೀನಾದ ಪ್ರಾಥಮಿಕ ಶಾಲೆಯೊಂದು ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆಯ ಹೆಡ್‌ಬ್ಯಾಂಡ್‌ಗಳನ್ನು ಬಳಕೆ ಮಾಡುತ್ತಿದ್ದು, ಈ ಬ್ಯಾಂಡ್‌ಗಳಿಂದ ವಿದ್ಯಾರ್ಥಿ ತರಗತಿಯಲ್ಲಿ ಎಷ್ಟು ಕ್ರಿಯಾಶೀಲನಾಗಿದ್ದಾನೆ ಎಂಬುದನ್ನು ತಿಳಿಯಬಹುದಾಗಿದೆ.


Click it and Unblock the Notifications








