Just In
- 12 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 13 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 14 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 16 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್ ಸ್ಟೋಕ್ಸ್ ಟೀಕೆ
- Movies
ಸ್ಯಾಂಡಲ್ವುಡ್ ಜೋಡಿ ಹರಿಪ್ರಿಯಾ, ವಸಿಷ್ಠ ಸಿಂಹ ಅದ್ಧೂರಿ ಆರತಕ್ಷತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚೀನಾದ ಈ ಜೈಲಿನಲ್ಲಿ ಮಾತ್ರ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ!!
ಎಂತೆಂತಹ ಜೈಲುಗಳನ್ನೇ ಹಾರಿ ಪರಾರಿಯಾದ ಖದೀಮರಿದ್ದಾರೆ. ನೆಲವನ್ನೇ ಕೊರೆದು, ಬಾತ್ ರೂಮಿನ ಟಬ್ ಒಳಗೆಯೇ ನುಗ್ಗಿ, ಗೋಡೆಯನ್ನೇ ಹಾರಿ ಹೀಗೆ ಖದೀಮರು ಜೈಲಿನಿಂದ ಹಾರಿದ ಸಾಹಸಗಾಥೆಗಳನ್ನು ನೀವು ಕೇಳಿರುತ್ತೀರಾ ಅಲ್ಲವೇ?. ಆದರೆ, ಇನ್ಮುಂದೆ ಅಂತಹ ಘಟನೆಗಳು ನಡೆಯುವುದು ಸಾಧ್ಯವಿಲ್ಲ. ಏಕೆಂದರೆ, ಚೀನಾದಲ್ಲಿರುವ ಯಾನ್ಚೆಂಗ್ ಎಂಬ ಜೈಲಿನಿಂದ ಕೈದಿಗಳು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯನ್ನು ಇದೀಗ ಕ್ರಿಮಿನಲ್‌ಗಳಿಗೆ ತಂದಿಟ್ಟಿದೆ.
ಚೀನಾದ ಯಾನ್ಚೆಂಗ್ ಜೈಲಿನಲ್ಲಿ ಕೈದಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಪ್ರತಿ ಸೆಲ್ನಲ್ಲೂ ಹೈ ಟೆಕ್ ಸೆಕ್ಯೂರಿಟಿ ಒದಗಿಸಲಾಗಿದೆ. ಜಗತ್ತಿನ ವಿವಿಧ ಜೈಲುಗಳಿಂದ ಕೈದಿಗಳು ತಪ್ಪಿಸಿಕೊಂಡಿರೋ ಸಾಕಷ್ಟು ಪ್ರಕರಣಗಳನ್ನು ಕೇಳಿದ ಕೈದಿಯೋರ್ವ, ನಾನೂ ಕೂಡ ಜೈಲಿನಿಂದ ಪರಾರಿಯಾಗಬೇಕು ಎಂದು ಅಂದುಕೊಂಡಂರೆ ಅದು ಇಲ್ಲಿ ಅಸಾಧ್ಯವೇ ಸರಿ ಎಂಬಂತಹ ಹೈ ಟೆಕ್ ಸೆಕ್ಯೂರಿಟಿ ಇದೆ. ಹಾಗಾದರೆ, ಅಲ್ಲಿ ಅಂದೆಂತಹ ಹೈ ಟೆಕ್ ಸೆಕ್ಯೂರಿಟಿ ಇದೆ ಎಂಬುದಕ್ಕೆ ಉತ್ತರ ತಂತ್ರಜ್ಞಾನ.!

ಹೌದು, ಚೀನಾದ ಯಾನ್ಚೆಂಗ್ ಜೈಲಿನಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತಹ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಪ್ರತಿ ಕೈದಿಯ ಬಗ್ಗೆ ನಿಗಾ ಇಡಲು ಎಲ್ಲಾ ಸೆಲ್ಗಳಲ್ಲೂ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಕ್ಯಾಮೆರಾ ಅಳವಡಿಸೋದ್ರಲ್ಲೇನಿದೆ ಅಂಥಹ ವಿಶೇಷ ಎಂದು ತಲೆಗೆ ಬಂದರೆ ನಾವು ಮೂರ್ಖರಾಗಬಹುದು. ಏಕೆಂದರೆ, ಅಲ್ಲಿನ ಪ್ರತಿ ಸೆಲ್ನಲ್ಲೂ ಅಳವಡಿಸಿರುವ ಕ್ಯಾಮೆರಾಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನಿಂದ ಬಿಡುವಿಲ್ಲದಂತೆ ಕಾರ್ಯ ನಿರ್ವಹಿಸುತ್ತವೆ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನಿಂದ ಕಾರ್ಯ ನಿರ್ವಹಿಸುವ ಈ ಹೈ -ಟೆಕ್ ಕ್ಯಾಮೆರಾಗಳಲ್ಲಿ ಹಿಡನ್ ಸೆನ್ಸಾರ್ಗಳನ್ನ ಅಳವಡಿಸಲಾಗಿದ್ದು, ಈ ಕ್ಯಾಮೆರಾಗಳು ಕೈದಿಗಳ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿರುತ್ತವೆ. ಏನಾದರೂ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಕೂಡಲೇ ಅಲಾರಾಂ ಹೊಡೆದುಕೊಳ್ಳುತ್ತದೆ. ಉದಾಹರಣೆಗೆ ಖೈದಿಯೋರ್ವನ ಕೈ, ಕಣ್ಣು ಕಣ್ಣು ಏನನ್ನಾದರೂ ಅನುಮಾನಸ್ಪದವಾಗಿ ನೋಡಿ ಅಥವಾ ಮಾಡುತ್ತಿದ್ದಾರೆ ಅದನ್ನು ಕೂಡ ಗುರುತಿಸಿ ಪೊಲೀಸರಿಗೆ ಕ್ಷಣಾರ್ಧದಲ್ಲಿ ತಿಳಿಸುತ್ತದೆ.

ಫೇಶಿಯಲ್ ರೆಕಗ್ನಿಷನ್ ಹಾಗೂ ಮೂವ್ಮೆಂಟ್ ಅನಾಲಿಸಿಸ್ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಯಾಮೆರಾ ಹಾಗೂ ಸೆನ್ಸಾರ್ಗಳು ಕೈದಿಗಳ ಮೇಲೆ ನಿಗಾ ವಹಿಸುವುದರಿಂದ ಈ ಜೈಲಿನಿಂದ ಕೈದಿಗಳು ತಪ್ಪಿಸಿಕೊಳ್ಳೋದು ಅಸಾಧ್ಯವಂತೆ. ಪ್ರತಿ ಕ್ಯಾಮೆರಾ ಏಕಕಾಲಕ್ಕೆ ಸುಮಾರು 200 ಮುಖಗಳನ್ನು ಟ್ರ್ಯಾಕ್ ಮಾಡಬಲ್ಲದು. ಇದರಿಂದ ಅಲ್ಲಿನ ಖೈದಿ ಯಾರ ಸಹಾಯದಿಂದಲೂ, ತನ್ನದೇ ಬುದ್ದಿವಂತಿಕೆಯಿಂದಲೂ ಯಾಮಾರಿಸಲು ಪ್ರಯತ್ನಿಸಿದರೆ ಅವರು ಈ 'ಎಐ' ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಓದಿರಿ: 1999ರ ಮೊದಲು ಹುಟ್ಟಿದವರು ಮಾತ್ರ ಈ ಮೀಮ್ಸ್ ನೋಡಿ!..ಬೇರೆಯವರಿಗೆ ಇವು ಅರ್ಥವಾಗಲ್ಲ!!

ಭೂಮಿ ಬಿಟ್ಟು ಇತರೆ ಗ್ರಹಗಳಲ್ಲಿ ಸೂರ್ಯ ಹೇಗೆ ಕಾಣಿಸುತ್ತಾನೆ ಗೊತ್ತಾ?
ವಿಜ್ಞಾನದ ಪ್ರಪಂಚದಲ್ಲಿ ಹುಟ್ಟುವ ಪ್ರಶ್ನೆಗಳು ಮತ್ತು ಯೋಚನೆಗಳು ಇನ್ನೆಲ್ಲಿಯೂ ಹುಟ್ಟುವುದಿಲ್ಲ ಎನ್ನುವುದಕ್ಕೆ ವಿಜ್ಞಾನ ಪ್ರಪಂಚದ ಅನಂತತೆಯೇ ಕಾರಣ ಎನ್ನಬಹುದು. ಎಲ್ಲರಿಗೂ ಕೌತುಕವಾಗಿರುವ, ಬಿಡಿಸಲು ಒಗಟಾಗಿರುವ ಈ ವಿಜ್ಞಾನ ಪ್ರಪಂಚವು ಮಾನವ ಬಿಡಿಸಿದಷ್ಟು ತೆರೆದುಕೊಳ್ಳುವ ಪುಸ್ತಕವಿದ್ದಂತೆ.
ಈ ವಿಜ್ಞಾನ ಪುಸ್ತಕದಲ್ಲಿ ಮಾನವ ಪ್ರತಿದಿನವೂ ಒಂದೊಂದು ಹಾಳೆಯನ್ನು ತೆರೆಯುತ್ತಿದ್ದಾನೆ. ಹಾಳೆಗಳನ್ನು ತೆರೆದಷ್ಟು ಮತ್ತಷ್ಟು ಕುತೋಹಲಗಳು ಉಂಟಾಗುತ್ತವೆ. ಅವುಗಳಲ್ಲಿ ಒಂದು ಸೂರ್ಯೋದಯ. ಭೂಮಿಯ ಮೇಲೆ ಸೂರ್ಯೋದಯವನ್ನು ನೀವು ನೋಡಿದ್ದೀರಾ ಆದರೆ, ಇತರೆ ಗ್ರಹಗಳಿಂದ ಸೂರ್ಯ ಹೇಗೆ ಕಾಣಿಸುತ್ತದೆ ಗೊತ್ತಾ.?
ಹೌದು, ಭೂಮಿ ಬಿಟ್ಟು ಇತರೆ ಗ್ರಹಗಳಿಂದ ಸೂರ್ಯ ಹೇಗೆ ಕಾಣಿಸುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಮಂಗಳ, ಬುಧ ಮತ್ತು ಶುಕ್ರಗ್ರಹಗಳ ಬಗ್ಗೆ ವಿಜ್ಞಾನಿಗಳು ಖಚಿತವಾಗಿ ಹೇಳಿದ್ದಾರೆ. ಹಾಗಾದರೆ, ಇತರೆ ಗ್ರಹಗಳಲ್ಲಿ ಸೂರ್ಯ ಹೇಗೆ ಕಾಣಿಸುತ್ತದೆ ಎಂಬುದನ್ನು ಮುಂದೆ ತಿಳಿಯಿರಿ.

1. ಬುಧ ಗ್ರಹ
ಸೂರ್ಯನಿಗೆ ಅತ್ಯಂತ ಹತ್ತಿರದಲ್ಲಿರುವ ಬುಧ ಗ್ರಹದಲ್ಲಿ ಸೂರ್ಯೋನನ್ನು ಭೂಮಿಯಲ್ಲಿ ಕಾಣಿಸುವುದಕ್ಕಿಂತ ಮೂರು ಪಟ್ಟು ಹೆಚ್ಚು ಪ್ರಕಾಶಮಾನವಾಗಿ ನಾವು ಕಾಣಬಹುದು. ಪ್ರಕಾಶಮಾನವಾಗಿ ಮಾತ್ರವಲ್ಲದೇ ಭೂಮಿಗಿಂತ ಮೂರುಪಟ್ಟು ದೊಡ್ಡದಾಗಿಯೂ ಕಾಣುತ್ತಾನೆ.

2. ಶುಕ್ರ ಗ್ರಹ
ಭೂಮಿಗಿಂತಲೂ ಸೂರ್ಯನಿಗೆ ಹತ್ತಿರವಾಗಿರುವ ಮತ್ತೊಂದು ಗ್ರಹ ಶುಕ್ರದಲ್ಲಿ ಸೂರ್ಯ ಪ್ರಕಾಶಮಾನವಾಗಿರುವುದಿಲ್ಲ. ಸೂರ್ಯ ಮತ್ತು ಶುಕ್ರಗಳ ನಡುವೆ ಅನಿಲಗಳ ದಟ್ಟವಾದ ಮೋಡ ಇರುವುದರಿಂದ ಶುಕ್ರದಿಂದ ಸೂರ್ಯ ಪ್ರಕಾಶಮಾನವಾಗಿ ಕಾಣುವುದಿಲ್ಲ.

3. ಮಂಗಳ ಗ್ರಹ
ಸೂರ್ಯ ಮತ್ತು ಮಂಗಳ ಗ್ರಹಗಳ ನಡುವೆ ಸುಮಾರು 230 ದಶಲಕ್ಷ ಕಿಲೋಮೀಟರ್ ದೂರವಿದೆ. ಜತೆಗೆ ಮಂಗಳನಲ್ಲಿ ಹೆಚ್ಚು ಧೂಳಿನ ಅಸ್ತಿತ್ವ ಇರುವುದರಿಂದ ಮಂಗಳದಿಂದ ಸೂರ್ಯನ ಗೋಚರತೆ ಅಸ್ಪಷ್ಟತೆಯಿಂದ ಕಾಣುತ್ತದೆ.

4. ಗುರು ಗ್ರಹ
ನಮ್ಮ ಸೌರವ್ಯೂಹದ ಅತಿ ದೊಡ್ಡ ಗ್ರಹವಾದ ಗುರು ಗ್ರಹದ ಮೂಲಕ ಸೂರ್ಯ ಬಹಳ ಸುಂದರವಾಗಿ ಕಾಣುತ್ತಾನಂತೆ. ಸೂರ್ಯನಿಂದ ಬಹಳ ದೂರದಲ್ಲಿ ಗುರುಗ್ರಹವಿದ್ದರೂ ಕೂಡ ಅಲ್ಲಿನ ವಾತವರಣದಿಂದ ಸೂರ್ಯ ತಂಪಾಗಿ ಮತ್ತು ಸುಂದರವಾಗಿ ಕಾಣುತ್ತಾನೆ.

5. ಶನಿ ಗ್ರಹ
ಶನಿ ಗ್ರಹದಿಂದ ಕೂಡ ಸೂರ್ಯ ಅದ್ಭುತವಾಗಿ ಕಾಣುತ್ತಾನಂತೆ. ಶನಿಯ ವಾಯುಮಂಡಲದ ಪದರದಲ್ಲಿ ನೀರು ಮತ್ತು ಕೆಲವು ಅನಿಲಗಳ ಉಪಸ್ಥಿತಿಯಿಂದಾಗಿ ಸೂರ್ಯ ವಿಸ್ಮಯಕರವಾಗಿ ಕಾಣುತ್ತಾನಂತೆ. ಸೂರ್ಯನ ಕಿರಣಗಳು ಅಲ್ಲಿನ ವಾತಾವರಣಕ್ಕೆ ಅನೇಕ ಸೂರ್ಯಗಳ ಭ್ರಮೆಯನ್ನು ಉಂಟುಮಾಡುತ್ತದೆ.

6. ಏರಿಯಲ್, ಯುರೇನಸ್
ಏರಿಯಲ್ ಯುರೇನಸ್ ಗ್ರಹದ ಒಂದು ಚಂದ್ರನಾಗಿದ್ದು, ಇದು ಸೂರ್ಯನಿಂದ 2.8 ಶತಕೋಟಿ ಕಿಲೋಮೀಟರ್ ದೂರದಲ್ಲಿದೆ. ಏರಿಯಲ್ ಉಪಗ್ರಹದಿಂದ ಸೂರ್ಯ ಒಂದು ಸಣ್ಣ ನಕ್ಷತ್ರದಂತೆ ನಮಗೆ ಕಾಣುತ್ತಾನಂತೆ.

7. ಟ್ರಿಟಾನ್, ನೆಪ್ಚೂನ್
ನಾವು ಸೌರವ್ಯೂಹದಲ್ಲಿ ಮತ್ತಷ್ಟು ದೂರಕ್ಕೆ ಚಲಿಸಿದಾಗ ನೆಪ್ಚೂನ್ ಗ್ರಹದ ಅತಿದೊಡ್ಡ ಚಂದ್ರನ ಟ್ರೈಟಾನ್ ಅನ್ನು ತಲುಪುತ್ತೇವೆ. ಟೈಟಾನ್ ವಾತಾವರಣದಲ್ಲಿಯೂ ಧೂಳು ಇರುವುದರಿಂದ ಸೂರ್ಯನು ಟ್ರೈಟಾನ್‌ನಿಂದ ಅಸ್ಪಷ್ಟ ಸಣ್ಣ ಸಕ್ಷತ್ರದಂತೆ ಕಾಣುತ್ತಾನೆ.

8.ಫ್ಲೊಟೊ
ವಿಜ್ಞಾನಿಗಳು ಫ್ಲೊಟೊವನ್ನು ಒಂದು ಗ್ರಹವೆಂದು ಪರಿಗಣಿಸುವುದಿಲ್ಲ. ಆದರೂ, ಸೂರ್ಯನಿಂದ 6 ಶತಕೋಟಿ ಕಿಲೋಮೀಟರ್ ದೂರದಲ್ಲಿರುವ ಫ್ಲೊಟೊ ಗ್ರಹದಿಂದ ಸೂರ್ಯಪ್ರಕಾಶಮಾನವಾದ ಚಂದ್ರನಂತೆ ಕಾಣುತ್ತಾನಂತೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470