ಧ್ವಜದೊಂದಿಗೆ ನಿಮ್ಮ ಫೋಟೋ ವಿನಂತಿಸಿದ ಮೋದಿ.. ಅಪ್‌ಲೋಡ್ ಮಾಡೋದು ಹೇಗೆ?
ಸ್ವಾತಂತ್ರ್ಯ ಸಂಭ್ರಮಕ್ಕೆ (Independence celebration) ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈಗಾಗಲೇ ದೇಶದ ಜನರ ಮನೆ ಮನಸ್ಸಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ. ಈ ನಡುವೆ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮನವಿಯೊಂದನ್ನು ಮಾಡಿದ್ದು, ಈ ಮೂಲಕ ಈ ಬಾರಿಯ ಸ್ವಾತಂತ್ರ್ಯ ಸಂಭ್ರಮವನ್ನು ಇನ್ನಷ್ಟು ಸ್ಮರಣಿಯವಾಗಿಸಿಕೊಳ್ಳಬಹುದಾಗಿದೆ.
ಹೌದು, ಆಗಸ್ಟ್ 13 ರಿಂದ 15 ರ ನಡುವೆ 'ಹರ್ ಘರ್ ತಿರಂಗಾ' ಆಂದೋಲನದ (Har Ghar Tiranga movement) ಭಾಗವಾಗಿ ನಿಮ್ಮ ಫೋಟೋಗಳನ್ನು ಧ್ವಜದೊಂದಿಗೆ ಅಪ್‌ಲೋಡ್ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ನಾಗರಿಕರನ್ನು ಕೇಳಿಕೊಂಡಿದ್ದಾರೆ. ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಿದ್ರೆ, ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡುವುದು ಹೇಗೆ?, ಮೋದಿ ದೇಶದ ಜನರನ್ನು ಉದ್ದೇಶಿಸಿ ಏನು ಹೇಳಿದ್ದಾರೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ತಿರಂಗದೊಂದಿಗೆ ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಿ ಎಂದು ಕೇಳಿಕೊಂಡಿರುವ ಮೋದಿ ಅವರು ಈ ಸಂಬಂಧ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದು, ತಿರಂಗವು ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಏಕತೆಯ ಚೈತನ್ಯವನ್ನು ಸಂಕೇತಿಸುತ್ತದೆ. ಪ್ರತಿಯೊಬ್ಬ ಭಾರತೀಯನು ತ್ರಿವರ್ಣ ಧ್ವಜದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾನೆ. ಇದು ಮತ್ತಷ್ಟು ರಾಷ್ಟ್ರೀಯ ಪ್ರಗತಿಗೆ ಶ್ರಮಿಸಲು ನಮ್ಮನ್ನು ಪ್ರೇರೇಪಿಸುತ್ತದೆ'
'ಆಗಸ್ಟ್ 13 ರಿಂದ 15 ರ ನಡುವೆ #HarGharTiranga ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮನ್ನು ಕೋರುತ್ತೇನೆ. ತಿರಂಗದೊಂದಿಗೆ ನಿಮ್ಮ ಫೋಟೋಗಳನ್ನು ಇಲ್ಲಿ ಅಪ್‌ಲೋಡ್ ಮಾಡಿ... https://hargartiranga.com,' ಎಂದು ಪೋಸ್ಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಇನ್ನು ಈ 'ಹರ್ ಘರ್ ತಿರಂಗ' ಎಂಬುದು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಗುರುತಿಸಲು 2022 ರಲ್ಲಿ ಸಂಸ್ಕೃತಿ ಸಚಿವಾಲಯದ ಉಪಕ್ರಮವಾಗಿದೆ.
ಸಚಿವಾಲಯವು ಈಗಾಗಲೇ ಹರ್ ಘರ್ ತಿರಂಗಾ ವೆಬ್‌ಸೈಟ್ (Har Ghar Tiranga Website) ಅನ್ನ ಪ್ರಾರಂಭಿಸಿದ್ದು, ಇದು ಭಾರತೀಯ ನಾಗರಿಕರಿಗೆ ರಾಷ್ಟ್ರೀಯ ಧ್ವಜದೊಂದಿಗೆ ಸಂಭ್ರಮಿಸಲು ಹಾಗೂ ತಿರಂಗದೊಂದಿಗೆ ತಮ್ಮ ಸೆಲ್ಫಿಗಳನ್ನು ಶೇರ್ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹಾಗಿದ್ರೆ ತಿರಂಗಾದೊಂದಿಗಿನ ಸೆಲ್ಫಿಗಳನ್ನು ಅಪ್‌ಲೋಡ್ ಮಾಡುವುದು ಹೇಗೆ ಎಂದು ಸರಳ ಹಂತದ ಮೂಲಕ ತಿಳಿಸಿಕೊಡಲಾಗಿದೆ ನೋಡಿ.
ಹಂತ 1 : ನೀವು ರಾಷ್ಟ್ರಧ್ವಜದೊಂದಿಗೆ ಸೆಲ್ಫಿ ತೆಗೆದುಕೊಂಡು ಅಪ್‌ಲೋಡ್ ಮಾಡಲು ಮೊದಲು ಮೋದಿ ಅವರು ಉಲ್ಲೇಖಿಸಿರುವ https://hargartiranga.com ಸೈಟ್‌ಗೆ ಭೇಟಿ ನೀಡಬೇಕು. ಇದನ್ನೂ ಮೊದಲು ಚೆಂದದ ಫೋಟೋಗಳು ನಿಮ್ಮ ಫೋನ್‌ನಲ್ಲಿ ಇರಲಿ. ಬಳಿಕ 'ಅಪ್‌ಲೋಡ್ ಸೆಲ್ಫಿ ವಿತ್ ಫ್ಲಾಗ್' ಎಂಬ ಬಟನ್ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ.
ಹಂತ 2 : ಇದಾದ ನಂತರದಲ್ಲಿ ನಿಮಗೆ ಪಾಪ್-ಅಪ್ ತೆರೆದುಕೊಳ್ಳುತ್ತದೆ, ಅದರಲ್ಲಿ ನಿಮ್ಮ ಹೆಸರನ್ನು ಬರೆಯಿರಿ ಬಳಿಕ ನಿಮ್ಮ ತಿರಂಗಾ ಸೆಲ್ಫಿಯನ್ನು ಅಪ್‌ಲೋಡ್ ಮಾಡಿ. ಬಳಿಕ ಸಲ್ಲಿಸು ಅಥವಾ ಸಬ್‌ಮಿಟ್ ಎಂದು ಕಾಣಿಸಿಕೊಳ್ಳುವ ಬಟನ್ ಮೇಲೆ ಕ್ಲಿಕ್ ಮಾಡಿ. ಇದಕ್ಕೂ ಮೊದಲು ಈ ಸೆಲ್ಫಿಯನ್ನು ಅಪ್‌ಲೋಡ್ ಮಾಡಲು harghartiranga.com ವೆಬ್‌ಸೈಟ್‌ನಲ್ಲಿ ನಿಮ್ಮ ಹೆಸರು ಮತ್ತು ಫೋಟೋಗಳನ್ನು ಬಳಕೆ ಮಾಡಲು ನೀವು ಒಪ್ಪಿಗೆಯನ್ನು ನೀಡಬೇಕಾಗುತ್ತದೆ.

ಈ ಪೇಜ್ ಓಪನ್ ಮಾಡಿ ನೀವು ಯಾವಾಗಲಾದರೂ ನಿಮ್ಮ ಫೋಟೋ ನೋಡಿಕೊಳ್ಳಬಹುದು. ಅದಾಗ್ಯೂ ನಿಮ್ಮ ಸೆಲ್ಪಿ ಸದ್ಯಕ್ಕೆ ಕಾಣಿಸಲಿಲ್ಲ ಎಂದರೂ ಚಿಂತೆ ಬೇಡ. 16 ಆಗಸ್ಟ್ 2023ರ ಬೆಳಿಗ್ಗೆ 8:00 ರಿಂದ ನಿಮ್ಮ ಸೆಲ್ಫಿಯನ್ನು ನೋಡಲು ನಿಮಗೆ ಅವಕಾಶ ಸಿಗುತ್ತದೆ ಎಂದು ತಿಳಿಸಲಾಗಿದೆ. ಈಗಾಗಲೇ ಸಾಕಷ್ಟು ಜನರು ಈ ಕಾರ್ಯದಲ್ಲಿ ಬ್ಯೂಸಿಯಾಗಿದ್ದಾರೆ. ಮತ್ಯಾಕೆ ತಡ ನೀವು ಒಂದು ಫೋಟೋ ಅಪ್‌ಲೋಡ್ ಮಾಡಿ.


Click it and Unblock the Notifications








