ಜಿಯೋ ಮೇಲೆ ಕಣ್ಣಿಟ್ಟ ಶಿಯೋಮಿ: ಆಚ್ಚರಿಯ ಬೆಲೆಯಲ್ಲಿ 4G ಫೀಚರ್ ಫೋನ್ ಲಾಂಚ್...!

|

ಭಾರತೀಯ ಮಾರುಕಟ್ಟೆಯಲ್ಲಿ ಬೆಜೆಟ್ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುತ್ತಲೇ ನಂಬರ್ ಒನ್ ಪಟ್ಟಕ್ಕೆ ಏರಿರುವ ಶಿಯೋಮಿ, ಸದ್ಯ ಜಿಯೋ ಮೇಲೆ ಕಣ್ಣಿಟ್ಟಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದೆ. ಆದರೆ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಪ್ರಥಮ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಫೀಚರ್ ಫೋನ್ ಮಾರುಕಟ್ಟೆಯಲ್ಲಿಯೂ ತನ್ನ ಪ್ರಭಾವವನ್ನು ಬೀರಲು ಯೋಜನೆಯನ್ನು ರೂಪಿಸಿದೆ. ಇಲ್ಲಿಯೂ ತನ್ನದೇ ಅಧಿಪತ್ಯವನ್ನು ಸ್ಥಾಪಿಸಲು ಮುಂದಾಗಿದೆ.

ಜಿಯೋ ಮೇಲೆ ಕಣ್ಣಿಟ್ಟ ಶಿಯೋಮಿ: ಆಚ್ಚರಿಯ ಬೆಲೆಯಲ್ಲಿ 4G ಫೀಚರ್ ಫೋನ್ ಲಾಂಚ್...!

ಇದೇ ಮೊದಲ ಬಾರಿಗೆ ಫೀಚರ್ ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. 4G VoLTE ಸಪೋರ್ಟ್ ಮಾಡುವ ಫೀಚರ್ ಫೋನ್‌ ಅನ್ನು ಜಿಯೋ ಫೋನಿಗೆ ಸೆಡ್ಡು ಹೊಡೆಯುವ ಸಲುವಾಗಿ ಲಾಂಚ್ ಮಾಡುತ್ತಿದೆ ಎನ್ನಲಾಗಿದೆ. ಎಂಟ್ರಿ ಲೆವೆಲ್ ಫೀಚರ್ ಫೋನ್ ಆಗಿದ್ದರೂ ಸಹ ಫೇಸ್‌ಬುಕ್-ವಾಟ್ಸ್ಆಪ್ ಸೇರಿದಂತೆ ಎಲ್ಲಾ ಮಾದರಿಯ ಹೊಸ ಆಯ್ಕೆಗಳನ್ನು ಹೊಂದಿರಲಿದೆ ಎನ್ನಲಾಗಿದೆ.

ಕ್ವಿನ್ ಎಐ ಫೋನ್‌ ಗ್ಯಾಲರಿ

ಶಿಯೋಮಿ Qin Ai ಪೋನ್:

ಶಿಯೋಮಿ Qin Ai ಪೋನ್:

ಶಿಯೋಮಿ ಬಿಡುಗಡೆ ಮಾಡಲಿರುವ ಶಿಯೋಮಿ Qin Ai ಪೋನ್ ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಳ್ಳಲಿದೆ. ಮೊದಲಿಗೆ ಕ್ರೌಡ್ ಫಂಡಿಂಗ್‌ನಲ್ಲಿ ಮಾರಾಟವಾಗಲಿದೆ. ಇದಾದ ನಂತರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿಯೂ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಚೀನಾದಲ್ಲಿ ಇದು ರೂ.2000ಕ್ಕೆ ಮಾರಾಟವಾಗಲಿದ್ದು, ಭಾರತಕ್ಕೆ ಬಂದರೆ ಬೆಲೆಯಲ್ಲಿ ಭಾರೀ ಕಡಿಮೆಗೆ ಮಾರಾಟ ಮಾಡಲಿದೆ. ಅದರಲ್ಲೂ ಜಿಯೋಗೆ ಸೆಡ್ಡು ನೀಡಲು ರೂ.1000ಕ್ಕೆ ಮಾರಾಟ ಮಾಡಿದರೂ ಆಶ್ವರ್ಯ ಪಡಬೇಕಾಗಿಲ್ಲ.

ವಿಶೇಷತೆಗಳು:

ವಿಶೇಷತೆಗಳು:

ಶಿಯೋಮಿ Qin Ai ಪೋನ್ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 4G LET ಮತ್ತು oLTE ನೆಟ್‌ವರ್ಕ್‌ಗಳಿಗೆ ಸಪೋರ್ಟ್ ಮಾಡಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ದೊರೆಯುವ ಜಿಯೋ ಸಿಮ್ ಸೇರಿದಂತೆ ಎಲ್ಲಾ ಮಾದರಿಯ ಸಿಮ್‌ಗಳಿಗೂ ಇದು ಸಪೋರ್ಟ್ ಮಾಡಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್:

ಆಂಡ್ರಾಯ್ಡ್:

ಶಿಯೋಮಿ Qin Ai ಪೋನಿನಲ್ಲಿ ಆಂಡ್ರಾಯ್ಡ್ OSನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದಕ್ಕಾಗಿ ಮಾಕೊರ್ 5 OS ಅನ್ನು ಇದರಲ್ಲಿ ಕಾಣಬಹುದಾಗಿದೆ. ಇದರಿಂದಾಗಿ ಫೀಚರ್ ಫೋನ್ ಆದರು ಸಹ ಸ್ಮಾರ್ಟ್‌ ಆಪ್‌ಗಳಿಗೆ ಸಪೋರ್ಟ್ ಮಾಡಲಿದೆ.

ಶಿಯೋಮಿ Qin Ai ಪೋನ್ ಚಿಪ್ ಸೆಟ್:

ಶಿಯೋಮಿ Qin Ai ಪೋನ್ ಚಿಪ್ ಸೆಟ್:

ಶಿಯೋಮಿ Qin Ai ನಲ್ಲಿ 2.8 ಇಂಚಿನ ಕಲರ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರೊಂದಿಗೆ 256 MB RAM ಮತ್ತು 512 MB ಸ್ಟೋರೆಜ್ ಅನ್ನು ನೀಡಲಾಗಿದೆ. ಎರಡು ಸಿಮ್ ಗಳನ್ನು ಹಾಕಬಹುದಾಗಿದೆ. ಇದಲ್ಲದೇ ಮೈಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ರಿಯಲ್ ಟೈಮ್ ಟ್ರಾನ್ಸ್‌ಲೇಷನ್:

ರಿಯಲ್ ಟೈಮ್ ಟ್ರಾನ್ಸ್‌ಲೇಷನ್:

ಶಿಯೋಮಿ Qin Ai ಪೋನ್ ಫೀಚರ್ ಫೋನ್ ಎನ್ನಿಸಿಕೊಂಡರೂ ಸಹ ರಿಯಲ್ ಟೈಮ್ ನಲ್ಲಿ 17 ಭಾಷೆಗಳಿಗೆ ಟ್ರಾನ್ಸ್‌ಲೇಷನ್ ಮಾಡುವ ಶಕ್ತಿಯನ್ನು ಹೊಂದಿದೆ. ಇದರಿಂದಾಗಿ ಫೀಚರ್ ಫೋನ್ ಆದರೂ ಬಳಕೆದಾರರಿಗೆ ಸ್ಮಾರ್ಟ್‌ ಆಯ್ಕೆಗಳನ್ನು ನೀಡಲಿದೆ.

Best Mobiles in India

English summary
Xiaomi launches the Qin Ai Phone with 4G LTE and Android OS for Rs 1,999, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X