Home
ಸುದ್ದಿಜಾಲ

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಇಲ್ಲದೆಯೂ ATM ನಲ್ಲಿ ಹಣ ಡ್ರಾ ಮಾಡಬಹುದು!!

By Bhaskar N J

ಭಾರತದ ಅತಿದೊಡ್ಡ ಮೊಬೈಲ್ ಫೋನ್ ಆಧಾರಿತ ಪಾವತಿ ಕಂಪೆನಿಗಳಲ್ಲಿ ಒಂದಾದ ಮನಿಆನ್ ಮೊಬೈಲ್ ಇಂಕ್ ಕಂಪೆನಿ ಹೊಸ ಬಯೋಮೆಟ್ರಿಕ್ ಆಧಾರಿತ ಎಟಿಎಂ ನಗದು ಔಟ್‌ಲೇಟ್ ಅನ್ನು ಪ್ರಾರಂಭಿಸಿದೆ. ಮೊಬೈಲ್ ಫೋನ್ ಮೂಲಕ ಪಾವತಿ ಸೇವೆಯನ್ನು ನೀಡುತ್ತಿರುವ ಮನಿಆನ್ ಇದೀಗ ಬಯೋಮೆಟ್ರಿಕ್ ಯೋಜನೆಗೆ ಮುಂದಾಗಿದೆ.

ಮನಿಆನ್ ಮೊಬೈಲ್ ಇಂಕ್ ಕಂಪೆನಿ ಸ್ಥಾಪಿಸಿರುವ ಈ ಬಯೋಮೆಟ್ರಿಕ್ ಆಧಾರಿತ ಎಟಿಎಂ, ಗ್ರಾಹಕರಿಗೆ ತಮ್ಮ ಬ್ಯಾಂಕ್ ಖಾತೆಯಿಂದ ಯಾವುದೇ ದಾಖಲೆಯನ್ನು ಒದಗಿಸದೆ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಹಾಗಾಗಿ, ಇನ್ಮುಂದೆ ಮುಂದೆ ಬಳಕೆದಾರರು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡದೇ ಎಟಿಎಂನಲ್ಲಿ ಹಣ ಡ್ರಾ ಮಾಡಬಹುದಾಗಿದೆ.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಇಲ್ಲದೆಯೂ ATM ನಲ್ಲಿ ಹಣ ಡ್ರಾ ಮಾಡಬಹುದು!!

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡದೇ ಕೇವಲ ಬಯೊ ಮೆಟ್ರಿಕ್ (ಬೆರಳಚ್ಚು) ಮೂಲಕ ಇನ್ನು ಎಟಿಎಂಗಳಲ್ಲಿ ಹಣ ಪಡೆಯಬಹುದಾಗಿದೆ. ಇದಕ್ಕೆ ಬಳಕೆದಾರರು ಆಧಾರ್ ಕಾರ್ಡ್ಅನ್ನು ಕಡ್ಡಾಯವಾಗಿ ಹೊಂದಿರಬೇಕಿದ್ದು, ಬ್ಯಾಂಕ್‌ನಲ್ಲಿ ಆಧಾರ್ ಅನ್ನು ನೀಡಿ ರಿಜಿಸ್ಟರ್ ಆಗಿರುವ ಎಲ್ಲಾ ಬಳಕೆದಾರರು ಎಟಿಎಂನಲ್ಲಿ ಬಯೊ ಮೆಟ್ರಿಕ್ (ಬೆರಳಚ್ಚು) ಮೂಲಕ ಹಣ ಪಡೆಯಬಹುದಾಗಿದೆ.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಇಲ್ಲದೆಯೂ ATM ನಲ್ಲಿ ಹಣ ಡ್ರಾ ಮಾಡಬಹುದು!!

ಇನ್ನು ಬಯೊ ಮೆಟ್ರಿಕ್ (ಬೆರಳಚ್ಚು) ಮೂಲಕ ಗ್ರಾಹಕರನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಸುಲಭ ಮತ್ತು ತ್ವರಿತ ಪ್ರವೇಶವನ್ನು ಹೊಂದಲು ಅವಕಾಶವನ್ನು ಮನಿಆನ್ ಮೊಬೈಲ್ ಇಂಕ್ ಕಂಪೆನಿ ಮಾಡಿಕೊಡುತ್ತದೆ. ಯಾವುದೇ ಬ್ಯಾಂಕುಗಳಲ್ಲೂ ಕೂಡ ಯಾವುದೇ ದಾಖಲೆ (ಚೆಕ್, ಡಿಡಿ) ಇಲ್ಲದೆ ತ್ವರಿತವಾಗಿ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು ಎಂದು ಹೇಳಿದೆ.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಇಲ್ಲದೆಯೂ ATM ನಲ್ಲಿ ಹಣ ಡ್ರಾ ಮಾಡಬಹುದು!!

ಮನಿಆನ್ ಮೊಬೈಲ್ ಇಂಕ್ ಕಂಪೆನಿಯು ದೇಶದಾದ್ಯಂತ ಈಗಾಗಲೇ 3,000 ಎಂಟಿಎಂಗಳನ್ನು ಸಕ್ರಿಯಗೊಳಿಸಿದೆ. ಮತ್ತೆ ಮೂರು ಸಾವಿರ ಬಯೊಮೆಟ್ರಿಕ್ ಎಟಿಎಂ ಕೇಂದ್ರಗಳನ್ನು ತೆರೆಯಲು ಕಂಪನಿ ಸಿದ್ಧತೆ ನಡೆಸಿದ್ದು, ದೇಶದ ಮುಖ್ಯ ಬ್ಯಾಂಕ್‌ಗಳಲ್ಲೂ ಬಯೊಮೆಟ್ರಿಕ್ ಮೂಲಕ ಹಣ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಓದಿರಿ: ಮತ್ತೆ ಕೆಲ ಮೊಬೈಲ್‌ಗಳಲ್ಲಿ ವಾಟ್ಸ್‌ಆಪ್ ಸೇವೆ ಸ್ಥಗಿತ..ನಿಮ್ಮ ಮೊಬೈಲ್ ಈ ಲೀಸ್ಟ್‌ನಲ್ಲಿದೆಯಾ?

Best Mobiles in India

English summary
one of India's largest mobile phone-based payment networks, has launched a new biometric-based ATM cash-out solution. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+