Samsung: ಸ್ಯಾಮ್‌ಸಂಗ್‌ನ ಈ ಫೋನ್ ಬಳಕೆದಾರರಿಗೆ ಬ್ಯಾಡ್ ನ್ಯೂಸ್! ಈ ಪ್ರಯೋಜನ ಪ್ರತಿ ತಿಂಗಳು ಸಿಗೋಲ್ಲ
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು (Samsung smartphone) ಭಿನ್ನ ಫೀಚರ್ಸ್ ಆಯ್ಕೆ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿವೆ. ಈ ನಡುವೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಸರಣಿ (Samsung Galaxy S20 series) ಬಳಕೆದಾರರಿಗೆ ಬೇಸರದ ಸುದ್ದಿಯೊಂದನ್ನು ನೀಡಲಾಗಿದೆ.
ಹೌದು, ಸ್ಯಾಮ್‌ಸಂಗ್ ಫೋನ್‌ಗಳು ಉತ್ತಮ ಪ್ರೊಸೆಸರ್, ಭದ್ರತಾ ಫೀಚರ್ಸ್ ಹಾಗೂ ಕ್ಯಾಮೆರಾಗಳಿಗೆ ಹೆಸರುವಾಸಿ. ಈ ಕಾರಣಕ್ಕೆ ಈ ಫೋನ್‌ಗಳನ್ನು ಜನರು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಆದರೆ ಈಗ ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಸರಣಿ ಸ್ಮಾರ್ಟ್‌ಫೋನ್ ಬಳಕೆದಾರರು ಹಾಗೂ ಗ್ಯಾಲಕ್ಸಿ ನೋಟ್ 20 ಸರಣಿ (Galaxy Note 20 series) ಬಳಕೆದಾರರಿಗೆ ಈ ಸೌಲಭ್ಯವನ್ನು ಸ್ಥಗಿತ ಮಾಡಲಾಗುತ್ತಿದೆ. ಹಾಗಿದ್ರೆ, ಏನದು ಹೊಸ ವಿಚಾರ ಬನ್ನಿ ತಿಳಿಯೋಣ.

ಭದ್ರತಾ ನವೀಕರಣ ಇನ್ಮುಂದೆ ಇಲ್ಲ: ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಸರಣಿಯನ್ನು 2020 ರಲ್ಲಿ ಲಾಂಚ್ ಮಾಡಲಾಗಿದ್ದು, ಈ ಫೋನ್‌ಗಳಿಗೆ ನೀಡಲಾಗುತ್ತಿದ್ದ ಮಾಸಿಕ ಭದ್ರತಾ ನವೀಕರಣಕ್ಕೆ ಫುಲ್‌ಸ್ಟಾಪ್ ಇಟ್ಟಿದೆ. ಸಾಮಾನ್ಯ ಮಾಸಿಕ ನವೀಕರಣಗಳನ್ನು ಪಡೆಯುವ ಬದಲು ಇನ್ಮುಂದೆ ತ್ರೈಮಾಸಿಕ ನವೀಕರಗಳನ್ನು ಪಡೆಯಲಿದ್ದಾರೆ ಎಂದು ಸ್ಯಾಮ್‌ಸಂಗ್ ಮಾಹಿತಿ ನೀಡಿದೆ. ಇದೇ ನಿಯಮ ಗ್ಯಾಲಕ್ಸಿ ನೋಟ್ 20 ಸರಣಿಗೂ ಅನ್ವಯ ಆಗಲಿದೆ.
ಆಂಡ್ರಾಯ್ಡ್ ಅಥಾರಿಟಿ ಈ ಸಂಬಂಧ ವರದಿ ಮಾಡಿದೆ. ಈ ವರದಿಯಲ್ಲಿ ಉಲ್ಲೇಖ ಮಾಡಿದಂತೆ, ಸ್ಯಾಮ್‌ಸಂಗ್ ಭದ್ರತಾ ನವೀಕರಣಗಳನ್ನು ಸ್ಥಗಿತಗೊಳಿಸುತ್ತಿಲ್ಲ. ಆದರೆ, ಮಾಸಿಕದಿಂದ ತ್ರೈಮಾಸಿಕಕ್ಕೆ ಮುಂದೂಡುತ್ತಿದೆ. ಇದು ಗ್ಯಾಲಕ್ಸಿ S20, ಗ್ಯಾಲಕ್ಸಿ S20+, ಗ್ಯಾಲಕ್ಸಿ S20 ಅಲ್ಟ್ರಾ, ಮತ್ತು ಗ್ಯಾಲಕ್ಸಿ S20 FE ಸೇರಿದಂತೆ ಸಂಪೂರ್ಣ ಶ್ರೇಣಿಗೆ ಅನ್ವಯ ಆಗಲಿದೆ ಎಂದು ತಿಳಿಸಲಾಗಿದೆ.

ಇನ್ನು ಸ್ಯಾಮ್‌ಸಂಗ್ ಮಾರ್ಚ್ 2024 ರ ಭದ್ರತಾ ನವೀಕರಣಗಳನ್ನು ಈಗಾಗಲೇ ಹೊರತಂದಿದ್ದು ಇದಾದ ಮೂರು ತಿಂಗಳಲ್ಲಿ ಮುಂದಿನ ನವೀಕರಣವನ್ನು ಪಡೆಯಬಹುದಾಗಿದೆ. ಈ ಮೂಲಕ ನಿಮ್ಮ ಫೋನ್ ಇನ್ನೂ ಭದ್ರತಾ ನವೀಕರಣಗಳನ್ನು ಪಡೆಯುತ್ತಿದೆ ಎಂದು ಇದು ಖಚಿತಪಡಿಸುತ್ತದೆ. ಅಲ್ಲದೆ ಸಂಪೂರ್ಣವಾಗಿ ರಕ್ಷಿಸಲ್ಪಡುವುದಿಲ್ಲ ಎಂದು ತಿಳಿಸಲಾಗುತ್ತದೆ. ಆದ್ದರಿಂದ ನಿಮ್ಮ ಫೋನ್ ಸುರಕ್ಷಿತವಾಗಿರಲು ಮುಂದಾದರೆ ಅಪ್‌ಗ್ರೇಡ್ ಮಾಡಬಹುದು ಎಂದು ಉಲ್ಲೇಖಿಸಲಾಗಿದೆ.
ಗ್ಯಾಲಕ್ಸಿ S20 ಸರಣಿಯ ಜೊತೆಗೆ, ಗ್ಯಾಲಕ್ಸಿ ನೋಟ್ 20 ಸರಣಿಯು ಸಹ ಇನ್ನು ಮುಂದೆ ಮಾಸಿಕ ಭದ್ರತಾ ನವೀಕರಣಗಳನ್ನು ಸ್ವೀಕರಿಸುವುದಿಲ್ಲ. ಸ್ಯಾಮ್‌ಸಂಗ್ ಈಗಾಗಲೇ ನೋಟ್ ಲೈನ್‌ಅಪ್ ಅನ್ನು ತೆಗೆದುಹಾಕಿದೆ. ಈ ಫೋನ್‌ಗಳನ್ನು ನೀವು ಬಳಕೆ ಮಾಡುತ್ತಿದ್ದರೆ ಇನ್ಮುಂದೆ ನೀವು ಕೊಂಚ ಭದ್ರತಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ನಡುವೆ ಸ್ಯಾಮ್‌ಸಂಗ್ ಏಳು ವರ್ಷಗಳ ಆಂಡ್ರಾಯ್ಡ್ ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಘೋಷಣೆ ಮಾಡಿದೆ. ಆದರೆ ಇದು ಗ್ಯಾಲಕ್ಸಿ S24 ಸರಣಿ ಮತ್ತು ಹೊಸ ಮಾದರಿಗಳಿಗೆ ಮಾತ್ರ ಅನ್ವಯ ಆಗಲಿದೆ. ಈವರೆಗೂ ತನ್ನ ಸ್ಮಾರ್ಟ್‌ಫೋನ್‌ಗಳಿಗೆ ಮೂರು ವರ್ಷಗಳ ನವೀಕರಣಗಳನ್ನು ಮಾತ್ರ ನೀಡುತ್ತಿತ್ತು.

ಇದಕ್ಕೆ ಪ್ರಮುಖ ಕಾರಣ ಗೂಗಲ್ ಪಿಕ್ಸೆಲ್ ಫೋನ್. ಗೂಗಲ್ ತನ್ನ ಇತ್ತೀಚಿನ ಪಿಕ್ಸೆಲ್ ಪೋನ್‌ಗೆ ದೀರ್ಘ ವರ್ಷಗಳ ಭದ್ರತಾ ನವೀಕರಣಗಳನ್ನು ಘೋಷಣೆ ಮಾಡಿದ ಹಿನ್ನೆಲೆ ಇತರೆ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಈ ನಿರ್ಧಾರಕ್ಕೆ ಮುಂದಾಗಿವೆ. ಅಲ್ಲದೆ ಭಾರತದಲ್ಲಿ ಜನರು ಒಂದೇ ಫೋನ್ ಅನ್ನು ಹಲವಾರು ವರ್ಷಗಳ ಕಾಲ ಬಳಕೆ ಮಾಡುವುದರಿಂದ ಈ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಗೂಗಲ್‌ನ ಅಧಿಕಾರಿಯೊಬ್ಬರು ಕೆಲವು ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಫೀಚರ್ಸ್: ಈ ಸರಣಿ ಸ್ಮಾರ್ಟ್‌ಫೋನ್ ಎಕ್ಸಿನೋಸ್ 9 ಅಲ್ಟಾ 990 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6.2 ಇಂಚಿನ ಡಿಸ್‌ಪ್ಲೇ ಹಾಗೂ 12 MP + 64 MP + 12 MP ಯ ಟ್ರಿಪಲ್ ಕ್ಯಾಮೆರಾ, 10 MP ಸೆಲ್ಫಿ ಕ್ಯಾಮೆರಾ ಮೂಲಕ ಉತ್ತಮ ಫೋಟೋಗ್ರಫಿಗೆ ಅನುಕೂಲವಾದ ಫೋನ್ ಆಗಿದೆ. ಇದರ ಜೊತೆಗೆ ಈ ಫೋನ್ 4000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.


Click it and Unblock the Notifications








