SmartTV: ಈ ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್‌ಟಿವಿಗಳಿಗೆ 20% ಕ್ಕಿಂತ ಹೆಚ್ಚು ಡಿಸ್ಕೌಂಟ್!
ಸ್ಮಾರ್ಟ್‌ಟಿವಿ (SmartTV) ಅದರಲ್ಲೂ ಸುಧಾರಿತ ಫೀಚರ್ಸ್ ಆಯ್ಕೆ ಇರುವ ಸ್ಮಾರ್ಟ್‌ಟಿವಿಗಳು ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅಷ್ಟೇ ಅಲ್ಲದೆ ಇತ್ತೀಚಿನ ಸ್ಮಾರ್ಟ್‌ಟಿವಿಗಳು ಸಿನಿಮಾ ಹಾಲ್‌ನಲ್ಲೂ ಸಿಗದ ಹೊಸ ಹೊಸ ಅನುಭವವನ್ನು ನೀಡುತ್ತವೆ. ಈ ಕಾರಣಕ್ಕೆ ಸಾಕಷ್ಟು ಜನರು ಹೊಸ ಸ್ಮಾರ್ಟ್‌ಟಿವಿಗಳಿಗೆ ಅಪ್‌ಗ್ರೇಡ್ ಆಗುತ್ತಿದ್ದಾರೆ.
ಹೌದು, ಸ್ಮಾರ್ಟ್‌ಟಿವಿಗಳಿಗೆ ಬಹಳ ಬೇಡಿಕೆ ಇರುವುದರಿಂದ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ. ಅದರಲ್ಲೂ ದಿಪಾವಳಿ ಹಿನ್ನೆಲೆ ಹೆಚ್ಚಿನ ರಿಯಾಯಿತಿಯಲ್ಲಿ ಹೊಸ ಸ್ಮಾರ್ಟ್‌ಟಿವಿ ಖರೀದಿ ಮಾಡಬಹುದಾಗಿದೆ. ಈ ಮೂಲಕ ನೀವು ಅಗ್ಗದ ಬೆಲೆಯಲ್ಲಿ ಖರೀದಿಸಿ ಹಣ ಉಳಿತಾಯ ಮಾಡಬಹುದಾಗಿದೆ. ಅದರಂತೆ ಈ ಲಿಸ್ಟ್‌ನಲ್ಲಿ ಸ್ಯಾಮ್‌ಸಂಗ್, ಎಲ್‌ಜಿ ಸೇರಿದಂತೆ ಅನೇಕ ಸ್ಮಾರ್ಟ್‌ಟಿವಿಗಳಿವೆ. ಹಾಗಿದ್ರೆ, 20% ಕ್ಕಿಂತ ಹೆಚ್ಚು ಡಿಸ್ಕೌಂಟ್ ಹೊಂದಿರು ಸ್ಮಾರ್ಟ್‌ಟಿವಿ ಯಾವುವು?, ಆಫರ್ ಬೆಲೆ ಎಷ್ಟು? ಎಂಬ ಮಾಹಿತಿ ಇಲ್ಲಿದೆ ನೋಡಿ.

iFFALCON U62 ಅಲ್ಟ್ರಾ ಹೆಚ್‌ಡಿ 4K ಸ್ಮಾರ್ಟ್ ಎಲ್‌ಇಡಿ ಟಿವಿ (iFF43U62): ಈ ಸ್ಮಾರ್ಟ್‌ಟಿವಿಯನ್ನು ನೀವು ಆನ್‌ಲೈನ್‌ನಲ್ಲಿ 17,999ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಟಿವಿ 43 ಇಂಚಿನ ಎಲ್ಇಡಿ ಡಿಸ್‌ಪ್ಲೇ ಹೊಂದಿದ್ದು, ಇದು 4K ರೆಸಲ್ಯೂಶನ್, 3840 x 2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 2 ಸ್ಪೀಕರ್‌ಗಳು,
ಕ್ವಾಡ್ ಕೋರ್ ಪ್ರೊಸೆಸರ್, 2 GB RAM, 16 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದೆ. ಉಳಿದಂತೆ 3 ಹೆಚ್‌ಡಿಎಮ್‌ಐ ಪೋರ್ಟ್‌ಗಳು, 1 ಯುಎಸ್‌ಬಿ ಪೋರ್ಟ್ ಅನ್ನು ಹೊಂದಿದೆ.
ಕ್ಯಾಂಡಿ CA6560CQLED ಅಲ್ಟ್ರಾ ಹೆಚ್‌ಡಿ 4K ಸ್ಮಾರ್ಟ್ QLED ಟಿವಿ: ಈ ಸ್ಮಾರ್ಟ್‌ಟಿವಿಯನ್ನು ನೀವು 39,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದೂ ಸಹ ಉತ್ತಮ ಫೀಚರ್ಸ್ ಅನ್ನು ಹೊಂದಿದೆ. ಅಂದರೆ 65 ಇಂಚಿನ QLED ಡಿಸ್‌ಪ್ಲೇ ಹೊಂದಿದ್ದು, ಇದು 4K ರೆಸಲ್ಯೂಶನ್, 3840 x 2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಜೊತೆಗೆ 30 W ಔಟ್‌ಪುಟ್‌ನ 2 ಸ್ಪೀಕರ್, 2 GB RAM, 32 GB ಇಂಟರ್ ಸ್ಟೋರೇಜ್, 4 ಹೆಚ್‌ಡಿಎಮ್‌ಐ ಪೋರ್ಟ್‌ಗಳು, 2 ಯುಎಸ್‌ಬಿ ಪೋರ್ಟ್ ಆಯ್ಕೆ ಪಡೆದುಕೊಂಡಿದೆ.
ಎಲ್‌ಜಿ UR77 ಅಲ್ಟ್ರಾ ಹೆಚ್‌ಡಿ 4K ಸ್ಮಾರ್ಟ್ ಎಲ್‌ಇಡಿ ಟಿವಿ (43UR7790PSA): ಈ ಟಿವಿಯನ್ನು ನೀವು 32,999ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದು ಆನ್‌ಲೈನ್‌ನಲ್ಲಿ 23% ರಿಯಾಯಿತಿ ಪಡೆದಿದೆ. ಇನ್ನು ಈ ಟಿವಿ 43 ಇಂಚಿನ ಎಲ್ಇಡಿ ಟಿವಿಯಾಗಿದ್ದು, ಇದೂ ಸಹ 4K ರೆಸಲ್ಯೂಶನ್, 3840 x 2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್, 35 W ಔಟ್‌ಪುಟ್ ಸ್ಪೀಕರ್, 3 ಹೆಚ್‌ಡಿಎಮ್‌ಐ ಪೋರ್ಟ್‌ಗಳು, 1 ಯುಎಸ್‌ಬಿ ಪೋರ್ಟ್ ಅನ್ನು ಹೊಂದಿದ್ದು, ಇದರೊಂದಿಗೆ ವಿವಿಧ ಆಪ್‌ಗಳು ಹಾಗೂ ಗೇಮ್‌ಗಳನ್ನು ಬೆಂಬಲಿಸುತ್ತದೆ.

ಹೈಸೆನ್ಸ್ A6K ಅಲ್ಟ್ರಾ ಹೆಚ್‌ಡಿ 4K ಸ್ಮಾರ್ಟ್ ಎಲ್‌ಇಟಿ ಟಿವಿ (55A6K): ಈ ಸ್ಮಾರ್ಟ್‌ಟಿವಿಯನ್ನು ನೀವು 29,990ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಟಿವಿಗೆ 23% ರಿಯಾಯಿತಿ ನೀಡಲಾಗಿದೆ. ಇದು 55 ಇಂಚಿನ ಎಲ್ಇಡಿ ಟಿವಿಯಾಗಿದ್ದು, 4K ರೆಸಲ್ಯೂಶನ್, 3840 x 2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್, 2 ಸ್ಪೀಕರ್‌ಗಳು,
ಕ್ವಾಡ್ ಕೋರ್ ಪ್ರೊಸೆಸರ್, 2 GB RAM, 16 GB ಸ್ಟೋರೇಜ್ 3 ಹೆಚ್‌ಡಿಎಮ್‌ಐ ಪೋರ್ಟ್, 2 ಯುಎಸ್‌ಬಿ ಪೋರ್ಟ್ ಆಯ್ಕೆ ಪಡೆಯುವ ಮೂಲಕ ಉತ್ತಮ ಎನಿಸಿದೆ.
ಸ್ಯಾಮ್‌ಸಂಗ್ ನಿಯೋ QN85C ಅಲ್ಟ್ರಾ ಹೆಚ್‌ಡಿ 4K ಸ್ಮಾರ್ಟ್ QLED ಟಿವಿ (QA55QN85CAKLXL): ಈ ಪ್ರೀಮಿಯಂ ಸ್ಮಾರ್ಟ್‌ಟಿವಿ 99,990ರೂ.ಗಳ ಬೆಲೆ ಹೊಂದಿದೆ. ಈ ಮೂಲಕ 23% ಡಿಸ್ಕೌಂಟ್ ಪಡೆದುಕೊಂಡಿದೆ. ಉಳಿದಂತೆ ಈ ಟಿವಿ 55 ಇಂಚಿನ QLED ಡಿಸ್‌ಪ್ಲೇ ಹೊಂದಿದ್ದು, 4K ರೆಸಲ್ಯೂಶನ್, 3840 x 2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್, 60 W ಔಟ್ಪುಟ್, 4 ಹೆಚ್‌ಡಿಎಮ್‌ಐ ಪೋರ್ಟ್, 2 ಯುಎಸ್‌ಬಿ ಪೋರ್ಟ್‌ನೊಂದಿಗೆ ಸ್ಕ್ರೀನ್ ಮಿರರಿಂಗ್ ಫೀಚರ್ಸ್ ಆಯ್ಕೆ ಪಡೆದಿದೆ.

ಫ್ಲಿಪ್‌ಕಾರ್ಟ್ ಇನ್ನೋವ್ಯೂ ಮಾರ್ಕ್ಯೂ 32AAHDM ಹೆಚ್‌ಡಿ ರೆಡಿ ಸ್ಮಾರ್ಟ್ ಎಲ್‌ಇಡಿ ಟಿವಿ: ಈ ಟಿವಿಯನ್ನು ನೀವು ಕೇವಲ 7,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಟಿವಿಗೆ ಬರೋಬ್ಬರಿ 46% ರಿಯಾಯಿತಿ ನೀಡಲಾಗಿದೆ. ಇನ್ನು ಈ ಟಿವಿ 32 ಇಂಚಿನ ಎಲ್ಇಡಿ ಡಿಸ್‌ಪ್ಲೆ ಆಯ್ಕೆ ಪಡೆದಿದ್ದು, ಈ ಡಿಸ್‌ಪ್ಲೇ 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ, 2 ಸ್ಪೀಕರ್‌ಗಳು, ಮೀಡಿಯಾಟೆಕ್ CA53 ಕ್ವಾಡ್ ಕೋರ್ ಪ್ರೊಸೆಸರ್, 1 GB RAM, 8 GB ಇಂಟರ್ ಸ್ಡೋರೇಜ್ ಆಯ್ಕೆ ಸೇರಿದಂತೆ ವಿವಿಧ ಫೀಚರ್ಸ್ ಅನ್ನು ಈ ಟಿವಿ ಹೊಂದಿದೆ.


Click it and Unblock the Notifications








