smartphones: ಈ ಸ್ಮಾರ್ಟ್‌ಫೋನ್‌ಗಳಿಗೆ ಬರೋಬ್ಬರಿ 50% ಗೂ ಅಧಿಕ ರಿಯಾಯಿತಿ, ಎಲ್ಲಿ ಈ ಆಫರ್?
ಸ್ಮಾರ್ಟ್‌ಫೋನ್‌ಗಳು (smartphones) ಇಂದು ಬಳಕೆದಾರರಿಗೆ ವಿಶೇಷವಾದ ಅನುಭವ ನೀಡುತ್ತಿವೆ. ಊಟ ಇಲ್ಲದೇ ಇದ್ದರೂ ಪರವಾಗಿಲ್ಲ ಸ್ಮಾರ್ಟ್‌ಫೋನ್ ಇಲ್ಲದೆ ಇರಲು ಆಗುವುದಿಲ್ಲ ಅನ್ನೋ ಮಟ್ಟಕ್ಕೆ ಕೆಲವರು ಇದಕ್ಕೆ ಆಕರ್ಷಿತರಾಗಿದ್ದಾರೆ. ಈ ನಡುವೆ ಅಫರ್ ಬೆಲೆಯಲ್ಲೂ ಈ ಫೋನ್‌ಗಳು ಲಭ್ಯ ಆಗುತ್ತಿದ್ದು, ಈ ಮೂಲಕ ಇನ್ನೂ ಹೆಚ್ಚಾಗಿ ಇವುಗಳನ್ನು ಜನರು ಖರೀದಿ ಮಾಡುತ್ತಿದ್ದಾರೆ.
ಹೌದು, ಸ್ಮಾರ್ಟ್‌ಫೋನ್‌ಗಳು ಆಫರ್ ಬೆಲೆಗೆ ಲಭ್ಯವಾಗುವುದು ಸಾಮಾನ್ಯವಾದ ವಿಚಾರ. ಆದರೆ ಕೆಲವು ಬಾರಿ ಮಾತ್ರ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಬರೋಬ್ಬರಿ 50% ಗೂ ಅಧಿಕ ರಿಯಾಯಿತಿ ನೀಡುವ ಮೂಲಕ ಸ್ಮಾರ್ಟ್‌ಫೋನ್ ಖರೀದಿ ಮಾಡಲು ಮುಂದಾಗುವವರ ಮುಖದಲ್ಲಿ ಸಂತಸ ತರಿಸುತ್ತದೆ. ಅದರಂತೆ ಈ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಪೊಕೊ, ಸ್ಯಾಮ್‌ಸಂಗ್ ಫೋನ್‌ಗಳಿಗೆ ಇಷ್ಟು ಪ್ರಮಾಣದ ಆಫರ್ ನೀಡಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಪ್ರಮುಖ ಫೋನ್‌ಗಳು ದೊಡ್ಡ ಮಟ್ಟದ ಆಫರ್ ಪಡೆದಿವೆ, ಫೀಚರ್ಸ್ ಏನು ಅನ್ನೋ ಮಾಹಿತಿಯನ್ನು ತಿಳಿಯೋಣ.

ಪೊಕೊ C51 : ಈ ಸ್ಮಾರ್ಟ್‌ಫೋನ್ (Poco C51) ಅನ್ನು 50% ರಿಯಾಯಿತಿಯೊಂದಿಗೆ ಕೇವಲ 4,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 9,999 ರೂ.ಗಳಾಗಿದೆ. ಈ ಫೋನ್ 6.52 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದ್ದು, 4 GB RAM ಮತ್ತು 64 GB ROM ಆಯ್ಕೆ ಪಡೆದುಕೊಂಡಿದೆ. ವಿಶೇಷ ಏನೆಂದರೆ 1 TB ವರೆಗೆ ಇಂಟರ್ ಸ್ಟೋರೇಜ್ ಅನ್ನು ವಿಸ್ತರಣೆ ಮಾಡಬಹುದಾಗಿದೆ. ಉಳಿದಂತೆ ಈ ಫೋನ್ 8MP ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾ ಹಪಮದಿದೆ.
ಪೊಕೊ C55: ಪೊಕೊದ ಮತ್ತೊಂದು ಫೋನ್‌ಗೂ (Poco C55) ಸಹ ಇದೇ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು 6,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್ 53% ರಿಯಾಯಿತಿ ನೀಡಿದೆ. ಇದರ ಸಾಮಾನ್ಯ ದರ 13,999ರೂ.ಗಳು. ಇನ್ನು ಈ ಫೋನ್ 6.71 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾಟೆಕ್ ಹಿಲಿಯೊ G85 ಪ್ರೊಸೆಸರ್ ಬಲದೊಂದಿಗೆ 6 GB RAM ಹಾಗೂ 128 GB ಇಂಟರ್ ಸ್ಟೋರೇಜ್ ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ 50MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G: ಈ ಸ್ಮಾರ್ಟ್‌ಫೋನ್ (Samsung Galaxy S21 FE 5G) ಸಹ 58% ರಿಯಾಯಿತಿಯೊಂದಿಗೆ ಲಭ್ಯ ಇದೆ. ಅಂದರೆ ಇದರ ಸಾಮಾನ್ಯ ದರ 69,999 ರೂ.ಗಳಾಗಿದ್ದು, ನೀವೀಗ ಇದನ್ನು 28,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ಸ್ನಾಪ್‌ಡ್ರಾಗನ್ 888 ಪ್ರೊಸೆಸರ್ ಬಲ ಪಡೆದಿದ್ದು, 8 GB RAM ಹಾಗೂ 128 GB ಇಂಟರ್ ಸ್ಟೋರೇಜ್‌ನಲ್ಲಿ ಉತ್ತಮವಾಗಿ ಕೆಲಸ ಮಾಡಲಿದೆ. ಅಲ್ಲದೆ 12MP + 12MP + 8MP (OIS) ರಿಯರ್ ಕ್ಯಾಮೆರಾ ಹಾಗೂ 32MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 5G: ಸ್ಯಾಮ್‌ಸಂಗ್‌ನ ಮತ್ತೊಂದು ಫೋನ್‌ಗೂ (Samsung Galaxy Z Flip 3 5G) ಸಹ ಇದೇ ಆಫರ್ ಇದೆ. ಈ ಸ್ಮಾರ್ಟ್‌ಫೋನ್ 45,999 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದರ ಸಾಮಾನ್ಯ ದರ 95,999ರೂ.ಗಳಾಗಿದೆ. ಈ ಫೋನ್ 6.7 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 ಆಕ್ಟಾ-ಕೋರ್ ಪ್ರೊಸೆಸರ್ ಬಲದೊಂದಿಗೆ 8 GB RAM ಮತ್ತು 128 GB ಇಂಟರ್ ಸ್ಟೋರೇಜ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 12MP + 12MP ರಿಯರ್ ಕ್ಯಾಮೆರಾ ಮತ್ತು 10MP ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಮೊಟೊರೊಲಾ ರೇಜರ್ 40: ಈ ಸ್ಮಾರ್ಟ್‌ಫೋನ್ (Motorola Razr 40) ಸಹ 50% ರಿಯಾಯಿತಿ ಪಡೆದಿದೆ. ಇದು 99,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, 49,999 ರೂ.ಗಳ ಆಫರ್ ಬೆಲೆಯಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ. ಈ ಫೋನ್ 8 GB RAM ಹಾಗೂ 256 GB ಇಂಟರ್ ಸ್ಟೋರೇಜ್ ಬಲದೊಂದಿಗೆ 64MP ರಿಯರ್ ಕ್ಯಾಮೆರಾ ಹಾಗೂ 4200 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.


Click it and Unblock the Notifications








