Home
ಸುದ್ದಿಜಾಲ

9-17 ವರ್ಷದ ಅರ್ಧಕ್ಕಿಂತ ಹೆಚ್ಚು ಭಾರತೀಯ ಯುವಕರು ಪ್ರತಿದಿನ 3 ಗಂಟೆ ಇದನ್ನೇ ನೋಡ್ತಾರಂತೆ; ವರದಿ!

ಭಾರತ (India) ಇಂದು ಟೆಕ್ನಾಲಜಿ ವಿಷಯದಲ್ಲಿ ಮುಂದುವರೆದ ದೇಶಗಳನ್ನೇ ಹಿಂದೆ ಹಾಕುವಂತೆ ದಾಪುಗಾಲು ಇಡುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ 5G ಮಹಾ ಕ್ರಾಂತಿಯನ್ನೇ ನಿರ್ಮಾಣ ಮಾಡಿದೆ. ಈ ಮೂಲಕ ಭಾರತದ ಜನರು ವಿವಿಧ ರೀತಿಯಲ್ಲಿ ಇದರ ಸದುಪಯೋಗ ಪಡೆಯುತ್ತಿದ್ದಾರೆ. ಆದರೆ, ಈಗ ಅಚ್ಚರಿಯ ವರದಿಯೊಂದು ಹೊರಬಿದ್ದಿದೆ.

ಹೌದು, ಭಾರತದಲ್ಲಿ ಇತ್ತೀಚಿನ ರಾಷ್ಟ್ರೀಯ ಸಮೀಕ್ಷೆಯ (National survey) ಪ್ರಕಾರ ದೈನಂದಿನ ಸಾಮಾಜಿಕ ಮಾಧ್ಯಮ ಸಂವಹನ ಮಕ್ಕಳಲ್ಲಿ ಖಿನ್ನತೆ ಮತ್ತು ಆತಂಕದ ಹೆಚ್ಚಿನ ಅಪಾಯಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಲಾಗಿದೆ. ಹಾಗೆಯೇ 22 ಪ್ರತಿಶತ ಪೋಷಕರು ತಮ್ಮ ಮಕ್ಕಳು ಪ್ರತಿದಿನ 6 ಗಂಟೆಗಳ ಕಾಲ ಇಂಟರ್ನೆಟ್ ಬಳಸುತ್ತಿದ್ದಾರೆಂದು ತಿಳಿಸಿದ್ದಾರೆ. ಹಾಗಿದ್ರೆ, ಈ ವರದಿಯಲ್ಲಿರುವ ಅಚ್ಚರಿ ಮಾಹಿತಿ ಏನು ಎಂಬ ವಿವರ ಇಲ್ಲಿದೆ ನೋಡಿ.

ಅರ್ಧಕ್ಕಿಂತ ಹೆಚ್ಚು ಭಾರತೀಯ ಯುವಕರು ಪ್ರತಿದಿನ 3 ಗಂಟೆ ಇದನ್ನೇ ನೋಡ್ತಾರಂತೆ...

ಶಾಕಿಂಗ್‌ ವರದಿ: ಜಾಗತಿಕ ಜನಸಂಖ್ಯೆಯ ಸುಮಾರು 93 ಪ್ರತಿಶತದಷ್ಟು ಜನರು ಇಂಟರ್ನೆಟ್‌ಗೆ ಸಂಪರ್ಕ ಹೊಂದಿದ್ದಾರೆ ಅವರಲ್ಲಿ ಸರಿಸುಮಾರು 60 % ರಷ್ಟು ಅದರೆ 4.8 ಶತಕೋಟಿ ವ್ಯಕ್ತಿಗಳು ಸಕ್ರಿಯ ಸಾಮಾಜಿಕ ಮಾಧ್ಯಮ (Social media) ಬಳಕೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವುದು ಜನರ ಜೀವನದ ಅವಿಭಾಜ್ಯ ಅಂಗವಾಗಿದ್ದು, ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಯಲ್ಲಿ ಇದು ಹೆಚ್ಚಾಗಿದೆಯಂತೆ.

ಹಲವಾರು ಅಧ್ಯಯನಗಳು ಈಗಾಗಲೇ ವ್ಯಾಪಕವಾದ ಸಾಮಾಜಿಕ ಮಾಧ್ಯಮ ಬಳಕೆ ಮತ್ತು ಖಿನ್ನತೆಯ ಅಪಾಯದ ನಡುವಿನ ಗಮನಾರ್ಹ ಸಂಬಂಧವನ್ನು ಪತ್ತೆ ಮಾಡಿವೆ. ಆದರೂ ಸಹ ಜನರು ಮಾತ್ರ ಇದ್ಯಾವುದಲ್ಲೂ ಕ್ಯಾರೆ ಎನ್ನುತ್ತಿಲ್ಲ. ಅದರಲ್ಲೂ ಭಾರತದಲ್ಲಿ ನಡೆಸಿದ ಸುಮಾರು 50,000 ಪೋಷಕರೊಂದಿಗಿನ ಸಂದರ್ಶನದಲ್ಲಿ ಶಾಕಿಂಗ್‌ ವರದಿ ಹೊರಬಿದ್ದಿದೆ. ಇತ್ತೀಚಿನ ರಾಷ್ಟ್ರೀಯ ಸಮೀಕ್ಷೆಯು 9 ರಿಂದ 17 ವರ್ಷ ವಯಸ್ಸಿನ ಹತ್ತರಲ್ಲಿ ಆರು ಯುವಕರು ಸಾಮಾಜಿಕ ಮಾಧ್ಯಮ ಅಥವಾ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ (social media, gaming platform) ಪ್ರತಿದಿನ ಮೂರು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಕಳೆಯುತ್ತಾರೆ ಎಂದು ತಿಳಿಸಿದೆ.

ಈ ನಡುವೆ ಮಹಾರಾಷ್ಟ್ರದಿಂದ ಪ್ರತಿಕ್ರಿಯಿಸಿದ 17 % ರಷ್ಟು ಪೋಷಕರು ತಮ್ಮ ಮಕ್ಕಳು ಪ್ರತಿದಿನ ಆರು ಗಂಟೆಗಳ ಕಾಲ ಆನ್‌ಲೈನ್‌ನಲ್ಲಿ ಇರುತ್ತಾರೆ ಎಂದು ತಿಳಿಸಿದ್ದಾರೆ. ಇದೇ ಸಂಖ್ಯೆಯೊಂದಿಗೆ, ಭಾರತದಾದ್ಯಂತ ಪ್ರತಿಕ್ರಿಯಿಸಿದವರಲ್ಲಿ 22 % ರಷ್ಟು ಜನರು ಇದನ್ನೇ ವರದಿ ಮಾಡಿದ್ದಾರೆ. ಕೇವಲ 10 % ರಷ್ಟು ಪೋಷಕರು ತಮ್ಮ ಮಗು ಸಾಮಾಜಿಕ ಮಾಧ್ಯಮ ಅಥವಾ ಗೇಮಿಂಗ್‌ನಲ್ಲಿ ಸಮಯ ಕಳೆದ ನಂತರ ತುಂಬಾ ಸಂತೋಷವಾಗಿ ಇರುತ್ತಾರೆ ಎಂದು ಹೇಳಿದ್ದಾರೆ. ಇದರಿಂದ ತಿಳಿದುಬಂದ ವಿಷಯ ಏನೆಂದರೆ ಸಾಮಾಜಿಕ ಮಾಧ್ಯಮಗಳು ಧನಾತ್ಮಕ ಪರಿಣಾಮಗಳಿಗಿಂತ ಹೆಚ್ಚು ಋಣಾತ್ಮಕ ಪರಿಣಾಮಗಳನ್ನು ಬೀರುತ್ತಿವೆ ಎಂಬುದು.

ಈ ಅಧ್ಯಯನ ಯುಎಸ್‌ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿಯವರು ನಡೆಸಿದ್ದ 2022 ರ ವರದಿಯೊಂದಿಗೆ ಹೊಂದಿಕೆಯಾಗಿದೆ. ಇದು ಮಕ್ಕಳಲ್ಲಿ ಖಿನ್ನತೆ ಮತ್ತು ಆತಂಕದ ಹೆಚ್ಚಿನ ಅಪಾಯಗಳೊಂದಿಗೆ ದೈನಂದಿನ ಸಾಮಾಜಿಕ ಮಾಧ್ಯಮ ಸಂವಹನವನ್ನು ಮೂರು ಗಂಟೆಗಳ ಕಾಲ ಸಂಪರ್ಕಿಸುತ್ತದೆ ಎಂದು ತಿಳಿಸಲಾಗಿದೆ. ಅದರಲ್ಲೂ ಹದಿಹರೆಯದವರ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಅಪಾಯ ಉಂಟು ಮಾಡುತ್ತದೆ ಎಂದು ಎಚ್ಚರಿಸಲಾಗಿದೆ. ಈ ಮೂಲಕ ಕುಟುಂಬಗಳು ಮತ್ತು ಸರ್ಕಾರಗಳು ಬಳಕೆಗೆ ಕಠಿಣ ಮಾನದಂಡಗಳನ್ನು ನೀಡಬೇಕು ಎಂದು ಸೂಚಿಸಲಾಗಿದೆ.

ಮಗದೊಂದು ಅಧ್ಯಯನ ವರದಿಯಲ್ಲಿಯೂ ಸಹ ಇದೇ ರೀತಿಯ ಮಾಹಿತಿ ಹೊರಬಿದ್ದಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿರುವ ಲೋಕಲ್‌ ಸರ್ಕಲ್ಸ್‌ನ ಮತ್ತೊಂದು ಅಧ್ಯಯನದಲ್ಲಿ ಸಾಮಾಜಿಕ ಮಾಧ್ಯಮದ ದೀರ್ಘಕಾಲದ ಬಳಕೆ ಆಕ್ರಮಣಶೀಲತೆ, ಅಸಹನೆ, ಹೈಪರ್ಆಕ್ಟಿವಿಟಿ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳ ಸಾಧ್ಯತೆಯನ್ನು ವರ್ಧಿಸುತ್ತದೆ ಎಂದು ಉಲ್ಲೇಖಿಸಿದೆ.

ಸಾಮಾಜಿಕ ಮಾಧ್ಯಮವನ್ನು ಹೊರತುಪಡಿಸಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು (OTT platform) ಮಕ್ಕಳ ವಿರಾಮ ಚಟುವಟಿಕೆಗಳಿಗೆ ಪ್ರಾಥಮಿಕ ಆಯ್ಕೆಯಾಗಿದೆ ಎಂದು ಅಧ್ಯಯನದ ವರದಿಯಲ್ಲಿ ಉಲ್ಲೇಖ ಮಾಡಲಾಗಿದ್ದು, 9-18 ವರ್ಷ ವಯಸ್ಸಿನವರು ಗ್ಯಾಜೆಟ್‌ಗಳಿಗೆ ವ್ಯಸನಿಯಾಗುತ್ತಿದ್ದಾರೆ ಎಂದು ಅಧ್ಯಯನವು ಸೂಚಿಸುತ್ತದೆ. ಅವರು ಇಂಟರ್ನೆಟ್‌ನಲ್ಲಿ ವಿಡಿಯೋಗಳನ್ನು ವೀಕ್ಷಿಸಲು, ಗೇಮ್‌ ಆಡಲು ಹೆಚ್ಚು ಸಮಯ ಕಳೆಯುತ್ತಾರೆ ಎಂದು ತಿಳಿಸಲಾಗಿದೆ.

ಅರ್ಧಕ್ಕಿಂತ ಹೆಚ್ಚು ಭಾರತೀಯ ಯುವಕರು ಪ್ರತಿದಿನ 3 ಗಂಟೆ ಇದನ್ನೇ ನೋಡ್ತಾರಂತೆ...

ಗಮನಿಸಬೇಕಾದ ವಿಷಯ ಏನೆಂದರೆ ಶಾಲೆಗಳು ಪುನರಾರಂಭಗೊಂಡ ನಂತರವೂ ಇದೇ ಪ್ರವೃತ್ತಿ ಮುಂದುವರಿದಿದೆ ಎಂಬ ಶಾಕಿಂಗ್‌ ಮಾಹಿತಿ ತಿಳಿದುಬಂದಿದೆ. ಇದರಿಂದ ಮಕ್ಕಳು ಸ್ಮಾರ್ಟ್‌ ಗ್ಯಾಜೆಟ್‌ನ ಡಿಸ್‌ಪ್ಲೇ ಮೇಲೆ ಹೆಚ್ಚು ಸಮಯ ಕಳೆಯುತ್ತಿದ್ದು, ಪರಿಣಾಮ ಅವರಿಗೆ ತಲೆನೋವು, ಬೆನ್ನು ನೋವು, ಆತಂಕದಂತಹ ದೈಹಿಕ ಸಮಸ್ಯೆಗಳು ಕಾಡಲಿವೆ ಎಂದು ಎಚ್ಚರಿಸಲಾಗಿದೆ. ಸಾಮಾಜಿಕ ಮಾಧ್ಯಮ ಮತ್ತು ದೀರ್ಘಾವಧಿಯ ಡಿಸ್‌ಪ್ಲೇ ಮೇಲಿನ ಆಕರ್ಷಣೆ ಸಂಬಂಧದ ಕಾಳಜಿಯನ್ನು ಪದೇ ಪದೇ ಎತ್ತಲಾಗಿದ್ದರೂ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಸಾಮಾಜಿಕ ಮಾಧ್ಯಮ ಅಥವಾ ಆನ್‌ಲೈನ್ ನಲ್ಲಿ ಯಾವಾಗಲೂ ಸಕ್ರಿಯವಾಗಿರುವುದನ್ನು ತಡೆಯಲು ಸಾಧ್ಯವಾಗದಿದ್ದರೂ, ಇದರಿಂದ ಆಗುವ ಅಪಾಯಗಳ ಬಗ್ಗೆ ಮಕ್ಕಳೊಂದಿಗೆ ಮಾತನಾಡುವುದು, ಡಿಸ್‌ಪ್ಲೇ ಸಮಯದ ಮಿತಿಗಳನ್ನು ಹೊಂದಿಸುವುದು ಮತ್ತು ಇಂಟರ್ನೆಟ್ ಅನ್ನು ಹೇಗೆ ಜವಬ್ದಾರಿಯುತವಾಗಿ ಬಳಸಬೇಕೆಂದು ಅವರಿಗೆ ಕಲಿಸುವಂತಹ ಸಕಾರಾತ್ಮಕ ಕ್ರಮಗಳ ಅವಶ್ಯಕತೆ ಇದೆ ಎಂದು ಈ ವರದಿಯಲ್ಲಿ ಅಂತಿಮವಾಗಿ ತಿಳಿಸಲಾಗಿದೆ. ಈ ಮೂಲಕ ಪೋಷಕರು ಮಕ್ಕಳನ್ನು ಉತ್ತಮವಾದ ರೀತಿಯಲ್ಲಿ ಬೆಳೆಸಬಹುದಾಗಿದೆ.

Best Mobiles in India

English summary
According to a recent national survey in India, daily social media interaction is leading to increased risks of depression and anxiety among children.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+