Subscribe to Gizbot

ಬ್ಲ್ಯೂಟೂತ್ ನಿಮ್ಮ ಅತ್ಯುತ್ತಮ ಸಂಗಾತಿ ಏಕೆ ತಿಳಿದುಕೊಳ್ಳಿ

Written By:

ನಿಮ್ಮ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಅಂತರ್ನಿರ್ಮಿತ ಬ್ಲ್ಯೂಟೂತ್ ಬೆಂಬಲವನ್ನು ಹೊಂದಿರುತ್ತದೆ. ಬ್ಲ್ಯೂಟೂತ್ ಒಂದು ಪ್ರಮಾಣಿತವಾಗಿದ್ದು ವೈರ್‌ಲೆಸ್ ಆಗಿ ಸಂವಹನ ಮಾಡಲು ಇದು ಅನುಮತಿಸುತ್ತದೆ. ಹೆಚ್ಚಿನ ಜನರು ಬ್ಲ್ಯೂಟೂತ್ ಹೆಡ್‌ಸೆಟ್‌ಗಳಿಗೆ ಪರಿಚಿತರಾಗಿದ್ದಾರೂ ನೀವು ತಿಳಿಯದಿರುವ ಆದರೆ ಬ್ಲ್ಯೂಟೂತ್‌ನಲ್ಲಿ ನೀವು ನಿರ್ವಹಿಸಬಹುದಾದ ಕಾರ್ಯಗಳನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ.

ಓದಿರಿ: ಬ್ಲ್ಯೂಟೂತ್ ಬಳಸಿ ಕಂಪ್ಯೂಟರ್ ಮತ್ತು ಮೊಬೈಲ್ ಸಂಪರ್ಕಪಡಿಸುವುದು ಹೇಗೆ?

ಬ್ಲ್ಯೂಟೂತ್ ಡಿವೈಸ್‌ಗಳು ಕಾರ್ಯನಿರ್ವಹಿಸುವಂತೆ ಮಾಡಲು ಅವುಗಳನ್ನು ನೀವು ಪೇರ್ ಮಾಡಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಬ್ಲ್ಯೂಟೂತ್ ಮೌಸ್ ಅನ್ನು ನಿಮ್ಮ ಲ್ಯಾಪ್‌ಟಾಪ್‌ನೊಂದಿಗೆ ಪೇರ್ ಮಾಡಿಕೊಳ್ಳಬಹುದಾಗಿದೆ, ಬ್ಲ್ಯೂಟೂತ್ ಹೆಡ್‌ಸೆಟ್ ಅನ್ನು ನಿಮ್ಮ ಫೋನ್‌ನೊಂದಿಗೆ ಪೇರ್ ಮಾಡಿ ಅಂತೆಯೇ ನಿಮ್ಮ ಲ್ಯಾಪ್‌ಟಾಪ್‌ನೊಂದಿಗೆ ಸ್ಮಾರ್ಟ್‌ಫೋನ್ ಅನ್ನು ಪೇರ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲ್ಯೂಟೂತ್ ಸಕ್ರಿಯ

ಫೈಲ್ ವರ್ಗಾವಣೆ

ಬ್ಲ್ಯೂಟೂತ್ ಸಕ್ರಿಯಗೊಂಡಿರುವ ಪಿಸಿ ಸ್ಮಾರ್ಟ್‌ಫೋನ್ ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಅನ್ನು ಪೇರ್ ಮಾಡಬಹುದು ಅಂತೆಯೇ ಫೈಲ್‌ಗಳನ್ನು ಕಳುಹಿಸಲು ಪಡೆದುಕೊಳ್ಳಲು ಬ್ಲ್ಯೂಟೂತ್ ಅನ್ನು ಬಳಸಿಕೊಳ್ಳಬಹುದಾಗಿದೆ.

ದೊಡ್ಡ ಗಾತ್ರದ ಮ್ಯೂಸಿಕ್

ದೊಡ್ಡ ಗಾತ್ರದ ಮ್ಯೂಸಿಕ್

ದೊಡ್ಡ ಗಾತ್ರದ ಮ್ಯೂಸಿಕ್ ಅನ್ನು ಕಳುಹಿಸುವುದು ಸಾಧ್ಯವಿಲ್ಲದಿದ್ದರೂ, ಕೆಲವೊಂದು ಚಿತ್ರಗಳನ್ನು ನಿಮಗೆ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು ಮಾಡಬಹುದು.

ಬ್ಲ್ಯೂಟೂತ್ ರೇಡಿಯೊ

ಬ್ಲ್ಯೂಟೂತ್ ರೇಡಿಯೊ

ನಿಮ್ಮ ಮೊಬೈಲ್ ಡಿವೈಸ್ ಮತ್ತು ಲ್ಯಾಪ್‌ಟಾಪ್ ಅನ್ನು ಡಿಸ್ಕವರೇಬಲ್‌ನಂತೆ ಮಾಡಬೇಕು ಇದರಿಂದ ಬ್ಲ್ಯೂಟೂತ್ ರೇಡಿಯೊಗಳು ಒಂದಕ್ಕೊಂದು ಕಾಣಬಹುದು.

ಆಪ್ಶನ್

ಬ್ಲ್ಯೂಟೂತ್ ಫೈಲ್ ಟ್ರಾನ್ಸ್‌ಫರ್ ಟೂಲ್

ನೀವು ಒಂದಕ್ಕೊಂದು ಪೇರ್ ಮಾಡಿಕೊಂಡ ನಂತರ, ಬ್ಲ್ಯೂಟೂತ್ ಫೈಲ್ ಟ್ರಾನ್ಸ್‌ಫರ್ ಟೂಲ್ ಅನ್ನು ಬಳಸಿಕೊಳ್ಳಬಹುದಾಗಿದೆ ಇಲ್ಲಿ ಫೈಲ್ ಅನ್ನು ಆಯ್ಕೆಮಾಡಿ ಮತ್ತು ಕಳುಹಿಸುವುದು ಅಂತೆಯೇ ಸ್ವೀಕರಿಸುವ ಆಪ್ಶನ್ ನಿಮಗೆ ಕಂಡುಬರುತ್ತದೆ.

ಕಂಪ್ಯೂಟರ್

ಎರಡು ಬ್ಲ್ಯೂಟೂತ್

ಎರಡು ಬ್ಲ್ಯೂಟೂತ್ ಉಳ್ಳ ಕಂಪ್ಯೂಟರ್‌ಗಳನ್ನು ನೀವು ಪೇರ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಕಂಪ್ಯೂಟರ್ ಒಂದೇ ಪ್ರದೇಶದಲ್ಲಿದ್ದರೆ ಮತ್ತು ಕೇಬಲ್ ಅನ್ನು ನೀವು ಬಳಸುತ್ತಿಲ್ಲ ಎಂದಾದಲ್ಲಿ, ಫೈಲ್‌ಗಳನ್ನು ಟ್ರಾನ್ಸ್‌ಫರ್ ಮಾಡಿಕೊಳ್ಳಬಹುದಾಗಿದೆ.

ಟೆದರ್ ಮಾಡುವುದು

ಕಂಪ್ಯೂಟರ್ ಅನ್ನು ಸ್ಮಾರ್ಟ್‌ಫೋನ್‌ಗೆ ಟೆದರ್ ಮಾಡುವುದು

ಡೇಟಾ ಸಕ್ರಿಯಗೊಂಡಿರುವ ಸ್ಮಾರ್ಟ್‌ಫೋನ್ ಮೂಲಕ ಲ್ಯಾಪ್‌ಟಾಪ್‌ನಲ್ಲಿ ಇಂಟರ್ನೆಟ್ ಬಳಸುವುದಕ್ಕೆ ಟೆದರಿಂಗ್ ಬೇಕು. ವೈಫೈ ಅನ್ನು ಬಳಸಿ ಸ್ಮಾರ್ಟ್‌ಫೋನ್ ಕನೆಕ್ಶನ್ ಅನ್ನು ಹಂಚಿಕೊಳ್ಳುತ್ತಾರೆ. ಇದರ ಬದಲಿಗೆ ಬ್ಲ್ಯೂಟೂತ್ ಟೆದರಿಂಗ್ ಅನ್ನು ಬಳಸಿಕೊಂಡು ಈ ಕ್ರಿಯೆಯನ್ನು ನಡೆಸಬಹುದಾಗಿದೆ.

ಬ್ಲ್ಯೂಟೂತ್ ಟೆದರಿಂಗ್

ಕಡಿಮೆ ಬ್ಯಾಟರಿ ಶಕ್ತಿ

ಬ್ಲ್ಯೂಟೂತ್ ಟೆದರಿಂಗ್ ಕಡಿಮೆ ಬ್ಯಾಟರಿ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಆದ್ದರಿಂದ ಇದು ಹೆಚ್ಚು ಸೂಕ್ತ ವಿಧಾನವಾಗಿದೆ.

ಬೆಂಬಲ

ಡೆಸ್ಕ್‌ಟಾಪ್‌ಗೆ ಬ್ಲ್ಯೂಟೂತ್ ಬೆಂಬಲ

ಬ್ಲ್ಯೂಟೂತ್ ಇಲ್ಲದಿರುವ ಕಂಪ್ಯೂಟರ್ ಅನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ, ಕಡಿಮೆ ದರಕ್ಕೆ ಬ್ಲ್ಯೂಟೂತ್ ಬೆಂಬಲವನ್ನು ಅದಕ್ಕೆ ಅಟ್ಯಾಚ್ ಮಾಡಬಹುದು. ಆಗ ಬ್ಲ್ಯೂಟೂತ್ ಡಾಂಗಲ್‌ಗಳನ್ನು ನಿಮಗೆ ಬಳಸಿಕೊಳ್ಳಬಹುದು. ಆನ್‌ಲೈನ್ ಸ್ಟೋರ್‌ಗಳಲ್ಲಿ ಇದು ಲಭ್ಯವಿದೆ.

ಡಾಂಗಲ್

ಯುಎಸ್‌ಬಿ ಪೋರ್ಟ್‌

ನಿಮ್ಮ ಕಂಪ್ಯೂಟರ್‌ನ ಯುಎಸ್‌ಬಿ ಪೋರ್ಟ್‌ಗೆ ಈ ಡಾಂಗಲ್ ಅನ್ನು ಸಿಕ್ಕಿಸಿಕೊಳ್ಳಿ ಇದು ಬ್ಲ್ಯೂಟೂತ್ ರೇಡಿಯೊವನ್ನು ನಿಮಗೆ ನೀಡುತ್ತದೆ ಇದರಿಂದ ಬ್ಲ್ಯೂಟೂತ್ ಡಿವೈಸ್‌ನೊಂದಿಗೆ ಸಂವಹನವನ್ನು ಏರ್ಪಡಿಸಿಕೊಳ್ಳಬಹುದು.

ಬ್ಲ್ಯೂಟೂತ್

ಪವರ್

ಡಿವೈಸ್‌ಗಳಿಗೆ ಹೆಚ್ಚಿನ ಪವರ್ ಅನ್ನು ಬಳಸಿಕೊಳ್ಳುವಂತೆ ಬ್ಲ್ಯೂಟೂತ್ ಮಾಡುತ್ತದೆ. ಆದ್ದರಿಂದ ನಿಮ್ಮ ಡಿವೈಸ್‌ಗೆ ಎಲ್ಲಾ ದಿನವೂ ಬ್ಲ್ಯೂಟೂತ್ ಸಕ್ರಿಯಗೊಳಿಸುವುದು ಉತ್ತಮ ಉಪಾಯವಲ್ಲ.

ಬ್ಲ್ಯೂಟೂತ್ ಸಕ್ರಿಯ

ಬ್ಯಾಟರಿ ಡ್ರೈನ್

ಬ್ಯಾಟರಿ ಡ್ರೈನ್ ಇದರಿಂದ ಸಂಭವಿಸಬಹುದಾಗಿದ್ದು, ನೀವು ಬಳಸುತ್ತೀರಿ ಎನ್ನುವಂತಹ ಸಂದರ್ಭದಲ್ಲಿ ಮಾತ್ರವೇ ಬ್ಲ್ಯೂಟೂತ್ ಸಕ್ರಿಯಗೊಳಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Your laptop, smartphone, and tablet probably all have integrated Bluetooth support. Bluetooth is a standard that allows devices to communicate wirelessly. Most people are familiar with Bluetooth headsets, but there are more things you can do with Bluetooth.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot