Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಅಬ್ಬರಿಸಲು ಸದ್ಯದಲ್ಲೇ ಬರ್ತಿವೆ ಈ ಸ್ಮಾರ್ಟ್‌ಫೋನ್‌ಗಳು!

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೇ ಇವೆ. ನೂತನ ಫೋನ್‌ಗಳು ಭಿನ್ನ ಪ್ರೈಸ್‌ಟ್ಯಾಗ್‌ ಶ್ರೇಣಿಯಲ್ಲಿ ಬಿಡುಗಡೆ ಆಗುತ್ತವೆ. ಅವುಗಳಲ್ಲಿ ಕೆಲವು ಡಿಮ್ಯಾಂಡ್‌ ಪಡೆಯುತ್ತವೆ ಮತ್ತೇ ಕೆಲವು ಹೇಳ ಹೆಸರಿಲ್ಲದೇ ಮರೆಯಾಗುತ್ತವೆ. ಅದರಲ್ಲಿಯೂ ಲೀಡಿಂಗ್ ಮೊಬೈಲ್‌ ಬ್ರ್ಯಾಂಡ್‌ಗಳ ಕೆಲವು ಫೋನ್‌ಗಳಂತೂ ಬಿಡುಗಡೆಗೂ ಮುನ್ನವೇ ಮೊಬೈಲ್‌ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ. ಸದ್ಯ ಈ ತಿಂಗಳಲ್ಲಿ ಕೆಲವು ಫೋನ್‌ಗಳು ಲಾಂಚ್‌ ಆಗಲಿದ್ದು, ಅವುಗಳು ಲೀಕ್‌ ಮಾಹಿತಿಗಳು ಗ್ರಾಹಕರನ್ನು ಸೆಳೆದಿವೆ.

ಹೌದು, ಈ ಜೂನ್ ತಿಂಗಳಿನ ಈಗಾಗಲೇ ಕೆಲವು ಫೋನ್‌ಗಳು ಲಗ್ಗೆ ಇಟ್ಟಿದ್ದು, ಆಕರ್ಷಕ ಎನಿಸಿವೆ. ಅದಾಗ್ಯೂ, ಇನ್ನು ಕೆಲವು ದಿನಗಳಲ್ಲಿ ಕೆಲವು ಹೊಸ ಫೋನ್‌ ಪರಿಚಯಿಸಲು ಮೊಬೈಲ್‌ ಕಂಪನಿಗಳು ಸಂಪೂರ್ಣ ರೆಡಿಯಾಗಿದ್ದು, ಅಧಿಕೃತ ದಿನಾಂಕ ಸಹ ಬಹಿರಂಗ ಮಾಡಿವೆ. ಅವುಗಳ ಪೈಕಿ ಕೆಲವು ಫೋನ್‌ಗಳು ಈಗಾಗಲೇ ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿವೆ. ಹಾಗಾದರೇ ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಮೊಬೈಲ್‌ಗಳ ಬಗ್ಗೆ ತಿಳಿಯೋಣ.

ಮಾರುಕಟ್ಟೆಯಲ್ಲಿ ಅಬ್ಬರಿಸಲು ಸದ್ಯದಲ್ಲೇ ಬರ್ತಿವೆ ಈ ಸ್ಮಾರ್ಟ್‌ಫೋನ್‌ಗಳು!

ಶಿಯೋಮಿ 14 ಸಿವಿ ಫೋನ್‌

ಈ ಸ್ಮಾರ್ಟ್‌ಫೋನ್‌ 6.55 ಇಂಚಿನ 1.5K ಅಮೋಲೆಡ್ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್‌, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು 3000 ನಿಟ್ಸ್‌ ಪೀಕ್ ಬ್ರೈಟ್‌ನೆಸ್ ಅನ್ನು ಪಡೆದಿರಲಿದೆ ಎನ್ನಲಾಗಿದೆ. ಇದರ ಜೊತೆಗೆ ಈ ಫೋನ್ ಅಡ್ರಿನೋ 735 ಜಿಪಿಯು ಬಲದೊಂದಿಗೆ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗಿದೆ. ಅಂದಹಾಗೆ ಈ ಫೋನ್‌ ಜೂನ್ 12 ರಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಅಲ್ಲದೇ ಇದು 12GB RAM ಮತ್ತು 512GB ವೇರಿಯಂಟ್‌ ಆಯ್ಕೆ ಪಡೆದಿರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹಾಗೆಯೇ ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, ಲೈಕಾ ಸಮ್ಮಿಲಕ್ಸ್ ಲೆನ್ಸ್, 12 ಮೆಗಾ ಪಿಕ್ಸೆಲ್‌ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್‌ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಇದು 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್ ಪಡೆದಿರಲಿದೆ.

ರಿಯಲ್‌ಮಿ GT ನಿಯೋ 6 ಸ್ಮಾರ್ಟ್‌ಫೋನ್‌

ರಿಯಲ್‌ಮಿ GT ನಿಯೋ 6 ಫೋನ್ 6.78 ಇಂಚಿನ FHD+ AMOLED 8T LTPO ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ದರ ಪಡೆದಿರಲಿದೆ. ಹಾಗೆಯೇ ಇದು 6,000 nits ಗರಿಷ್ಠ ಬ್ರೈಟ್‌ನೆಸ್, HDR ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಪಡೆದಿರಲಿದೆ. ಇನ್ನು ಇದು ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್‌ ಪಡೆದಿರಲಿದ್ದು, ಗ್ರಾಫಿಕ್ಸ್‌ಗಾಗಿ Adreno GPU ಇರಲಿದೆ. ಅಂದಹಾಗೆ ಈ ಫೋನ್‌ ಜೂನ್ 20 ರಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಹಾಗೆಯೇ ಈ ಫೋನ್ 16GB RAM ಮತ್ತು 1TB ಆನ್‌ಬೋರ್ಡ್ ಸ್ಟೋರೇಜ್‌ ಆಯ್ಕೆ ಪಡೆದಿರಲಿದ್ದು, ಇದರೊಂದಿಗೆ 50ಎಂಪಿ ಸೆನ್ಸರ್ ಪ್ರಾಥಮಿಕ ಕ್ಯಾಮೆರಾ ಹೊಮದಿರಲಿದೆ. ಇದರೊಂದಿಗೆ 32ಎಂಪಿ ಫ್ರಂಟ್ ಸೆಲ್ಫಿ ಕ್ಯಾಮೆರಾ ಪಡೆದಿರಲಿದೆ. ಅಲ್ಲದೇ 5,500mAh ಬ್ಯಾಟರಿಯನ್ನು ಬ್ಯಾಕಪ್ ಸಹ ಪಡೆದಿರಲಿದ್ದು, ಜೊತೆಗೆ 120W ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆ ಪಡೆದಿರಲಿದೆ.

ಒಪ್ಪೋ F27+ ಪ್ರೊ ಫೋನ್‌

ಒಪ್ಪೋ ಸಂಸ್ಥೆಯ ಈ ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಕರ್ವ್ಡ್ ಡಿಸ್‌ಪ್ಲೇ ರಚನೆ ಅನ್ನು ಪಡೆದಿದ್ದು, 2412×1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್, ಪಾಂಡಾ ಗ್ಲಾಸ್ ರಕ್ಷಣೆ ಸೌಲಭ್ಯವನ್ನು ಈ ಫೋನ್‌ನಲ್ಲಿ ಕಾಣಬಹುದು. ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದೆ. ಅಂದಹಾಗೆ ಈ ಫೋನ್‌ ಜೂನ್ 13 ರಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

Best Mobiles in India

English summary
Most Expected Upcoming Phones list of June 2024. Check Phone list, expected specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+