Home
ಸುದ್ದಿಜಾಲ

Expensive Smartphones: 2023 ರಲ್ಲಿ ಭಾರತದಲ್ಲಿ ಲಾಂಚ್‌ ಆದ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳಿವು! ಆದ್ರೂ ಭರ್ಜರಿ ಬೇಡಿಕೆ

ಈ ವರ್ಷದಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು (Smartphones) ಅನಾವರಣ ಆಗಿದ್ದು, ಈ ಫೋನ್‌ಗಳು ಬಳಕೆದಾರರ ಭಿನ್ನ ಅಗತ್ಯತೆಗಳನ್ನು ಪೂರೈಸುವ ಕೆಲಸ ಮಾಡುತ್ತವೆ. ಅದರಂತೆ ಭಾರತದಲ್ಲಿ ದುಬಾರಿ ಫೋನ್‌ಗಳನ್ನು (Expensive phone) ಖರೀದಿ ಮಾಡುವವರ ಸಂಖ್ಯೆ ಹೆಚ್ಚಿದ್ದು, ಪರಿಣಾಮ ಸಾಕಷ್ಟು ಕಂಪೆನಿಗಳು ಇಲ್ಲಿ ಹೊಸ ಹೊಸ ಫೋನ್‌ಗಳನ್ನು ಇಲ್ಲಿ ಲಾಂಚ್‌ ಮಾಡಿವೆ.

ಹೌದು, ಈ ವರ್ಷ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗಿದ್ದು, ಇವುಗಳಲ್ಲಿ ಕೆಲವು ಮುನ್ನೆಲೆಗೆ ಬಂದರೆ ಇನ್ನೂ ಕೆಲವು ಸದ್ದಿಲ್ಲದಂತೆ ಮಾಯವಾಗಿ ಬಿಟ್ಟಿವೆ. ಆದರೆ ಪ್ರಮುಖ ಕಂಪೆನಿಗಳ ಫೋನ್‌ ಮಾತ್ರ ಯಾವುದೇ ಕಾಲಕ್ಕೂ ಪ್ರಸ್ತುತ ಎನಿಸುವ ಫೀಚರ್ಸ್‌ ಆಯ್ಕೆ ಪಡೆದುಕೊಂಡಿರಲಿವೆ. ಈ ಕಾರಣಕ್ಕೆ ಇವು ದುಬಾರಿ ಬೆಲೆ ಹೊಂದಿದ್ದು, ಬಳಕೆದಾರಿಗೆ ಪ್ರೀಮಿಯಂ ಅನುಭವ ನೀಡುತ್ತವೆ. ಹಾಗಿದ್ರೆ, ಯಾವೆಲ್ಲಾ ದುಬಾರಿ ಫೋನ್‌ಗಳನ್ನು ಈ ವರ್ಷ ಲಾಂಚ್‌ ಮಾಡಲಾಗಿದೆ, ಇವುಗಳ ಕೆಲವು ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

 2023 ರಲ್ಲಿ ಭಾರತದಲ್ಲಿ ಲಾಂಚ್‌ ಆದ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳಿವು!...

ಆಪಲ್‌ ಐಫೋನ್ 15 ಪ್ರೊ ಮ್ಯಾಕ್ಸ್‌: ಈ ಫೋನ್‌ (Apple iPhone 15 Pro Max) ಎಲ್ಲಾ ಫೋನ್‌ಗಳಿಗಿಂತ ಹೆಚ್ಚಿನ ಬೆಲೆ ಹೊಂದಿದೆ. ಅಂದರೆ ಇದರ ಬೆಲೆ ಬರೋಬ್ಬರಿ 1,99,900 ರೂ.ಗಳು. ಎರಡು ಲಕ್ಷ ಎಂದರೆ ತಪ್ಪಾಗಲಾರದು. ಈ ಫೋನ್ 1TB ಸ್ಟೋರೇಜ್‌ ಆಯ್ಕೆ ಹೊಂದಿದ್ದು, ಇಲ್ಲಿಯವರೆಗೆ ಭಾರತದಲ್ಲಿ ಬಿಡುಗಡೆಯಾದ ಅತ್ಯಂತ ದುಬಾರಿ ಐಫೋನ್ ಮಾದರಿಯಾಗಿದೆ. ಇದು ಯುಎಸ್‌ಬಿ ಟೈಪ್‌-ಸಿ ಚಾರ್ಜಿಂಗ್ ಪೋರ್ಟ್‌, ಟೆಲಿಫೋಟೋ ಲೆನ್ಸ್, ಟೈಟಾನಿಯಂ ಚಾಸಿಸ್ ಮತ್ತು ಇನ್ನೂ ಹೆಚ್ಚಿನ ಆಕರ್ಷಕ ಫೀಚರ್ಸ್‌ ಅನ್ನು ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 5: ಭಾರತದಲ್ಲಿ ಲಾಂಚ್‌ ಆದ ದುಬಾರಿ ಬೆಲೆಯ ಫೋನ್‌ಗಳಲ್ಲಿ ಈ ಫೋನ್‌ (Samsung Galaxy Z Fold 5) ಎರಡನೇ ಸ್ಥಾನ ಪಡೆದಿದೆ. ಅಂದರೆ ಇದು 1,84,999 ರೂ.ಗಳ ಬೆಲೆ ಹೊಂದಿದ್ದು, 1TB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 12GB RAM ಹೊಂದಿದ್ದು, ಈ ಫೋಲ್ಡಬಲ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ Z ಫೋಲ್ಡ್‌ 4 ನ ಉತ್ತರಾಧಿಕಾರಿಯಾಗಿದೆ. ಜೊತೆಗೆ ಇದು ತೆಳ್ಳಗಿನ ವಿನ್ಯಾಸ, ವೇಗವಾದ ಚಾರ್ಜಿಂಗ್ ಆಯ್ಕೆ ಮತ್ತು ಇನ್‌ಬಿಲ್ಟ್‌ ಎಸ್‌ ಪೆನ್‌ನೊಂದಿಗೆ ಪ್ಯಾಕ್‌ ಆಗಿದೆ.

 2023 ರಲ್ಲಿ ಭಾರತದಲ್ಲಿ ಲಾಂಚ್‌ ಆದ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳಿವು!...

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ: ಈ ಫೋನ್ (Samsung Galaxy S23 Ultra) ವಿಶೇಷವಾಗಿ ಕ್ಯಾಮೆರಾ ವಿಚಾರದಲ್ಲಿ ಜಾಗತಿಕವಾಗಿ ಹೆಚ್ಚು ಸದ್ದು ಮಾಡಿದೆ. ಅಂದರೆ 200 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಹೊಂದಿದ್ದು, ಇದಕ್ಕೆ 1,54,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದು ಸ್ನಾಪ್‌ಡ್ರಾಗನ್ 8 ಜನ್‌ 2 ಪ್ರೊಸೆಸರ್‌ ಬಲ ಪಡೆದಿದ್ದು, 12GB RAM ಮತ್ತು 1TB ಇಂಟರ್‌ ಸ್ಡೋರೇಜ್‌ ಆಯ್ಕೆ ಪಡೆದುಕೊಂಡಿದೆ.

ಒನ್‌ಪ್ಲಸ್‌ ಓಪನ್‌: ಈ ಫೋನ್‌ (OnePlus Open) ಅನ್ನು ಇತ್ತೀಚಿಗೆ ಲಾಂಚ್‌ ಮಾಡಲಾಗಿದ್ದು, ಒನ್‌ಪ್ಲಸ್‌ನ ದುಬಾರಿ ಬೆಲೆಯ ಫೋನ್‌ ಆಗಿ ಇದು ಗುರುತಿಸಿಕೊಂಡಿದೆ. ಈ ಫೋಲ್ಡಬಲ್‌ ಪೋನ್ 1,39,999 ರೂ.ಗಳ ಬೆಲೆ ಹೊಂದಿದ್ದು, 6.31 ಇಂಚಿನ ಕವರ್ ಡಿಸ್‌ಪ್ಲೇ ಹಾಗೂ 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದ್ದು, ಬಳಕೆದಾರರಿಗೆ ವಿಶೇಷವಾದ ಅನುಭವ ನೀಡಲಿದೆ. ಅದರಲ್ಲೂ 2800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದ್ದು, ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಉತ್ತಮ ಫೋನ್‌ ಆಗಿ ಗುರುತಿಸಿಕೊಂಡಿದೆ.

 2023 ರಲ್ಲಿ ಭಾರತದಲ್ಲಿ ಲಾಂಚ್‌ ಆದ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳಿವು!...

ಈ ವಿಶೇಷ ಫೋನ್‌ಗಳನ್ನು ನೀವು ಖರೀದಿ ಮಾಡುವವರಿದ್ದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಹಾಗೂ ಕಂಪೆನಿಗಳ ಅಧಿಕೃತ ಸೈಟ್‌ ಮೂಲಕ ಕೊಂಡುಕೊಳ್ಳಬಹುದಾಗಿದೆ. ಅದರಲ್ಲೂ ಈ ಫೋನ್‌ಗಳಿಗೆ ಬ್ಯಾಂಕ್‌ ಆಫರ್ ಸಹ ಘೋಷಣೆ ಮಾಡಲಾಗಿದ್ದು, ಈ ಮೂಲಕ ಈ ದುಬಾರಿ ಫೋನ್‌ಗಳ ಖರೀದಿ ವೇಳೆ ಸ್ವಲ್ಪ ಮಟ್ಟದ ಹಣ ಉಳಿತಾಯ ಮಾಡಬಹುದಾಗಿದೆ. ವಿಷಯ ಏನೆಂದರೆ ಕೆಲವು ವರದಿಗಳ ಪ್ರಕಾರ ಭಾರತದಲ್ಲಿ ದುಬಾರಿ ಬೆಲೆಯ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ.

Best Mobiles in India

English summary
Expensive Smartphones like Apple iPhone 15 Pro Max, Samsung Galaxy Z Fold 5, Samsung Galaxy S23 Ultra, OnePlus Open have been unveiled in India this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+