ಟಿವಿಯನ್ನು 78% ಭಾರತೀಯರು ಇದಕ್ಕೆ ಬಳಕೆ ಮಾಡುತ್ತಾರಂತೆ: ವರದಿ
ಟಿವಿಗಳು (TV) ಇಲ್ಲದ ಮನೆ ಇಲ್ಲ ಎಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಟಿವಿಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಂಡಿವೆ. ಈ ನಡುವೆ ಪ್ರಮುಖ ಸ್ಮಾರ್ಟ್‌ಟಿವಿ (Smart TV) ತಯಾರಿಕಾ ಸಂಸ್ಥೆಗಳು ಸಹ ಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಹೊಸ ಹೊಸ ಸ್ಮಾರ್ಟ್‌ಟಿವಿಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದ್ದು, ಈ ಟಿವಿ ಸಂಬಂಧ ಅಚ್ಚರಿ ಮಾಹಿತಿಯೊಂದು ಹೊರಬಿದ್ದಿದೆ.
ಹೌದು, ಟಿವಿ ಸಂಬಂಧ ಜನರ ಬಳಿ ಮಾಹಿತಿ ಕಲೆ ಹಾಕಿದ್ದು, ಜನರು ಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅಂದರೆ ಟಿವಿಯನ್ನು ಯಾವೆಲ್ಲಾ ವಿಷಯಕ್ಕೆ ಬಳಕೆ ಮಾಡುತ್ತೇವೆ ಅನ್ನೋ ಮಾಹಿತಿಯನ್ನು ತಿಳಿಸಿದ್ದಾರೆ. ಈ ಅಧ್ಯಯನವನ್ನು ನೀಲ್ಸೆನ್ಐಕ್ಯೂ (NielsenIQ) ಮತ್ತು ಅಮೆಜಾನ್ (Amazon) ನಡೆಸಿದೆ. ಹಾಗಿದ್ರೆ, ಟಿವಿಗಳನ್ನು ಜನರು ಏತಕ್ಕಾಗಿ ಬಳಕೆ ಮಾಡುತ್ತಿದ್ದಾರೆ?, ಅಧ್ಯಯನದಿಂದ ತಿಳಿದುಬಂದ ಮಾಹಿತಿ ಏನು ಅನ್ನೋದನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗಿದೆ ಓದಿರಿ.

ಟಿವಿ ಬಳಕೆದಾರರ ಮೇಲೆ ಅಧ್ಯಯನ: ಡಿಸೆಂಬರ್ 2023 ರಲ್ಲಿ ಟಿವಿ ಸ್ಟ್ರೀಮಿಂಗ್ ಟ್ರೆಂಡ್‌ಗಳಿಗಾಗಿ ಅಮೆಜಾನ್‌ನಿಂದ ನಿಯೋಜಿಸಲಾದ ನೀಲ್ಸೆನ್ಐಕ್ಯೂ (NielsenIQ) ನಡೆಸಿದ ಕಸ್ಟಮ್ ಅಧ್ಯಯನದಲ್ಲಿ ಭಾರತೀಯ ಪ್ರೇಕ್ಷಕರ ನೆಚ್ಚಿನ ಚಲನಚಿತ್ರಗಳು ಮತ್ತು ಪ್ರದರ್ಶನಗಳ ಸ್ಟ್ರೀಮ್ ಮಾಹಿತಿ ಬಹಿರಂಗಪಡಿಸಿದೆ. ಅಧ್ಯಯನದ ಪ್ರಕಾರ 78% ಪ್ರತಿಕ್ರಿಯಿಸಿದವರು ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಇತರ ಲಭ್ಯವಿರುವ ಆಯ್ಕೆಗಳಿಗೆ ಹೋಲಿಕೆ ಮಾಡಿದ್ರೆ ಸ್ಮಾರ್ಟ್ ಟಿವಿಗಳು ಮತ್ತು ಸೆಟ್ ಟಾಪ್ ಬಾಕ್ಸ್‌ಗಳ ಮೂಲಕ ರನ್ ಆಗುವ ಟಿವಿಗಳಲ್ಲಿ ಆನ್‌ಲೈನ್ ಕಂಟೆಂಟ್ ಅನ್ನು ಸ್ಟ್ರೀಮಿಂಗ್ ಮಾಡಲು ಬಯಸುತ್ತಾರಂತೆ
ಇನ್ನು 66% ಪ್ರತಿಕ್ರಿಯಿಸಿದವರು ವಾರಾಂತ್ಯದಲ್ಲಿ ಪ್ರತಿದಿನ ಐದು ಗಂಟೆಗಳ ಕಾಲ ಸ್ಟ್ರೀಮ್ ಮಾಡಿದ್ದು, ವಾರದ ದಿನಗಳಲ್ಲಿ ಮೂರು ಗಂಟೆಗಳಿಗಿಂತ ಕಡಿಮೆ ಬಳಕೆ ಮಾಡಿದ್ದಾರಂತೆ. ಹಾಗೆಯೇ 97% ಜನರು ರಾತ್ರಿಯ ಊಟದ ಸಮಯದಲ್ಲಿ ಟಿವಿಯಲ್ಲಿ ಆನ್‌ಲೈನ್ ಕಂಟೆಂಟ್ ಅನ್ನು ಸ್ಟ್ರೀಮ್ ಮಾಡಲು ಆದ್ಯತೆ ನೀಡಿದ್ದು, 74% ಜನರು ಕುಟುಂಬದೊಂದಿಗೆ ವಿಶೇಷವಾಗಿ ಸಂಗಾತಿ ಮತ್ತು ಮಕ್ಕಳೊಂದಿಗೆ ಟಿವಿಯನ್ನು ವೀಕ್ಷಣೆ ಮಾಡುತ್ತಾರಂತೆ.

ಇದನ್ನು ವಿಭಾಗವಾರು ಗಮನಿಸುವುದಾದರೆ ಹಾಸ್ಯ ಕಾರ್ಯಕ್ರಮವನ್ನು ಹೆಚ್ಚು ವೀಕ್ಷಣೆ ಮಾಡಿದ್ದಾರೆ. ಇದರೊಂದಿಗೆ ಕ್ರೀಡೆ, ಥ್ರಿಲ್ಲರ್, ರೋಮ್ಯಾಂಟಿಕ್, ಹಾರರ್, ಅಂತರಾಷ್ಟ್ರೀಯ ಟಿವಿ ಕಾರ್ಯಕ್ರಮಗಳು ಮತ್ತು ಸುದ್ದಿಗಳನ್ನೂ ವೀಕ್ಷಣೆ ಮಾಡಲಾಗಿದೆ. ಮನೆಯಲ್ಲಿ ಸಕ್ರಿಯ ಬ್ರಾಡ್‌ಬ್ಯಾಂಡ್ ಸಂಪರ್ಕದ ಲಭ್ಯತೆ, ಉತ್ತಮ ವಿಡಿಯೋ ಕ್ವಾಲಿಟಿ ಮತ್ತು ಧ್ವನಿ ಗುಣಮಟ್ಟಕ್ಕಾಗಿ ಓಟಿಟಿ ಮತ್ತು ಆನ್‌ಲೈನ್ ಮೂಲಗಳಾದ್ಯಂತ ವಿವಿಧ ಕಂಟೆಂಟ್ ಲಭ್ಯ ಇರುವುದರಿಂದ ಜನರು ಟಿವಿಯಲ್ಲಿ ಹೆಚ್ಚಿನ ಸ್ಟ್ರೀಮ್ ಮಾಡುತ್ತಿದ್ದಾರೆ ಎಂದು ಈ ಮೂಲಕ ಕಂಡುಕೊಳ್ಳಲಾಗಿದೆ.
ಇನ್ನು ಈ ಅಧ್ಯಯನ ಸಂಬಂಧ ಪ್ರತಿಕ್ರಿಯಿಸಿದವರಲ್ಲಿ ಟಿವಿಯಲ್ಲಿ ಸ್ಟ್ರೀಮಿಂಗ್ ಹೆಚ್ಚು ಬೇಡಿಕೆಯಿರುವ ಫೀಚರ್ಸ್ ಏನೆಂದರೆ ಲ್ಯಾಗ್-ಫ್ರೀ ಸ್ಟ್ರೀಮಿಂಗ್ (39%) ಮತ್ತು ವ್ಯಾಪಕ ಶ್ರೇಣಿಯ ಓಟಿಟಿ ಆಪ್ ಸೌಲಭ್ಯ (24%). ಅದಾಗ್ಯೂ ಇತರೆ ಆದ್ಯತೆಗಳನ್ನೂ ಸಹ ಈ ವೇಳೆ ಕಂಡುಕೊಳ್ಳಲಾಗಿದೆ. ಅದರಲ್ಲಿ ಸ್ಮಾರ್ಟ್ ಗೃಹೋಪಯೋಗಿ ಟೂಲ್ಸ್ ಅನ್ನು ಕಂಟ್ರೋಲ್ ಮಾಡಲು ವಾಯ್ಸ್ ಅಸಿಸ್ಟೆಂಟ್ ಲಭ್ಯತೆ ಮತ್ತು ಒಂದೇ ಡಿಸ್‌ಪ್ಲೇ ಮೂಲಕ ಡಿಟಿಹೆಚ್ ಚಾನಲ್‌ಗಳಿಂದ ಆನ್‌ಲೈನ್ ಕಂಟೆಂಟ್ ಮತ್ತು ಲೈವ್ ಟಿವಿ ಕಾರ್ಯಕ್ರಮಗಳನ್ನು ಸ್ಟ್ರೀಮ್ ಮಾಡುವ ಸಾಮರ್ಥ್ಯವನ್ನು ಒತ್ತಿ ಹೇಳಿದ್ದಾರಂತೆ.
ಈ ಸಂಬಂಧ ಅಮೆಜಾನ್ ಡಿವೈಸಸ್ ಇಂಡಿಯಾದ ನಿರ್ದೇಶಕ ಮತ್ತು ಕಂಟ್ರಿ ಮ್ಯಾನೇಜರ್ ಪರಾಗ್ ಗುಪ್ತಾ ಹೇಳಿಕೆ ನೀಡಿದ್ದು, ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಪ್ರಾರಂಭವಾದಾಗಿನಿಂದ ಬಹಳ ದೂರ ಸಂಚರಿಸಲಾಗಿದೆ ಅದರಂತೆ ಗ್ರಾಹಕರ ಸ್ಟ್ರೀಮಿಂಗ್ ಅಭ್ಯಾಸವೂ ಸಹ ಇದರಲ್ಲಿ ಒಂದಾಗಿದೆ. ಮನೆಗಳಲ್ಲಿನ ದೊಡ್ಡ ಡಿಸ್‌ಪ್ಲೇ ಮೇಲೆ ಕಂಟೆಂಟ್ ವೀಕ್ಷಿಸುವಂತೆ ಮಾಡುವ ನಮ್ಮ ಆದ್ಯತೆಯು ಸ್ಥಿರವಾಗಿ ಉಳಿದಿದೆ. ಅದರಂತೆ ನಿಮ್ಮ ಟಿವಿಯಲ್ಲಿ ನಿಮ್ಮ ಮೆಚ್ಚಿನ ಕಾರ್ಯಕ್ರಮಗಳು, ಚಲನಚಿತ್ರಗಳು, ಕ್ರೀಡೆಗಳು ಮತ್ತು ಹೆಚ್ಚಿನದನ್ನು ಅನುಭವಿಸಲು ಫೈರ್ ಟಿವಿ (Fire Tv) ಅನುಕೂಲಕರ ಮಾರ್ಗವಾಗಿದೆ ಎಂದಿದ್ದಾರೆ.

ಸ್ಮಾರ್ಟ್ ಅಲ್ಲದ ಟಿವಿಯಲ್ಲಿ ಕಂಟೆಂಟ್ ಅನ್ನು ಸ್ಟ್ರೀಮ್ (Stream) ಮಾಡಲು ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಸ್ಮಾರ್ಟ್ ಟಿವಿಯಿಂದ ಇನ್ನೂ ಹೆಚ್ಚಿನದನ್ನು ಪಡೆಯಲು, ಫೈರ್ ಟಿವಿ ಸ್ಟಿಕ್ (Fire TV Stick) ವೇಗವಾದ ಸ್ಟ್ರೀಮಿಂಗ್ ಅನುಭವವನ್ನು ನೀಡುತ್ತದೆ. ವಾಯ್ಸ್ ಸರ್ಚ್‌ನೊಂದಿಗೆ ಸರಳವಾದ ಕಂಟೆಂಟ್ ಅನ್ವೇಷಣೆ ಮತ್ತು 12,000+ ಆಪ್‌ಗಳಿಗೆ ಪ್ರವೇಶವನ್ನು ಇದು ನೀಡುತ್ತದೆ ಎಂದು ತಿಳಿಸಲಾಗಿದ್ದು, ಫೈರ್ ಟಿವಿಯ ಜನಪ್ರಿಯತೆಯಿಂದ ನಾವು ಉತ್ತೇಜಿತರಾಗಿದ್ದೇವೆ, ಬಳಕೆದಾರರು ಸತತವಾಗಿ 4+ ಸ್ಟಾರ್‌ಗಳನ್ನು ರೇಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.


Click it and Unblock the Notifications








