ಪದೇ ಪದೇ ರೀಚಾರ್ಜ್ ಮಾಡಿಸೋದು ಬೇಡಾ ಅಂದ್ರೆ, ಖಂಡಿತಾ ಈ ಪ್ಲ್ಯಾನ್ ಬೆಸ್ಟ್!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ (ವಿ ಟೆಲಿಕಾಂ) ಟೆಲಿಕಾಂಗಳು ತಮ್ಮ ಗ್ರಾಹಕರಿಗೆ ಅತ್ಯುತ್ತಮ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿವೆ. ಕೆಲವೊಂದು ಯೋಜನೆಗಳು ಅಲ್ಪಾವಧಿ ವ್ಯಾಲಿಡಿಟಿ ಪಡೆದಿದ್ದರೇ, ಮತ್ತೆ ಕೆಲವು ಯೋಜನೆಗಳು ವಾರ್ಷಿಕ ವ್ಯಾಲಿಡಿಟಿ ಪಡೆದಿವೆ. ಹಾಗೆಯೇ ಮತ್ತೆ ಕೆಲವಷ್ಟು ಪ್ರೀಪೇಯ್ಡ್ ಯೋಜನೆಗಳು ವ್ಯಾಲಿಡಿಟಿ ಜೊತೆಗೆ ಡೇಟಾ ಪ್ರಯೋಜನ ಒಳಗೊಂಡಿವೆ.

ಹೌದು, ರಿಲಾಯನ್ಸ್ ಜಿಯೋ, ವೊಡಾಫೋನ್ (ವಿ ಟೆಲಿಕಾಂ) ಮತ್ತು ಭಾರ್ತಿ ಏರ್‌ಟೆಲ್ ಟೆಲಿಕಾಂಗಳು ವಾರ್ಷಿಕ ಅವಧಿಯ ಕೆಲವು ಪ್ರೀಪೇಯ್ಡ್ ಯೋಜನೆಗಳ ಆಯ್ಕೆಯನ್ನು ಹೊಂದಿವೆ. ಆ ಪೈಕಿ ಕೆಲವು ಅಧಿಕ ದೈನಂದಿನ ಡೇಟಾ ಪ್ರಯೋಜನ ಒಳಗೊಂಡಿದ್ದರೆ, ಇನ್ನು ಕೆಲವು ಯೋಜನೆಗಳು ನಿಗದಿತ ಡೇಟಾ ಹೊಂದಿವೆ. ಹಾಗೆಯೇ ಎಸ್‌ಎಮ್‌ಎಸ್, ವಾಯಿಸ್ ಕರೆ ಸೇರಿದಂತೆ ಕೆಲವು ಯೋಜನೆಗಳು ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿವೆ. ಹಾಗಾದರೇ ಜಿಯೋ, ವಿ ಟೆಲಿಕಾಂ ಹಾಗೂ ಏರ್‌ಟೆಲ್ ಟೆಲಿಕಾಂಗಳ ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಏರ್‌ಟೆಲ್ 3,359ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ 3,359ರೂ. ಬೆಲೆಯ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಅನಿಯಮಿತ ಕರೆಗಳು, ದಿನಕ್ಕೆ 100 ಎಸ್‌ಎಮ್‌ಎಸ್ ಜೊತೆಗೆ ದೈನಂದಿನ 2 GB ಡೇಟಾವನ್ನು ನೀಡುತ್ತದೆ. ಇದಲ್ಲದೆ ಈ ಯೋಜನೆಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಪ್ರಯೋಜನ, ಅಮೆಜಾನ್ ಪ್ರೈಮ್ ವೀಡಿಯೊ ಮೊಬೈಲ್ ಪ್ರಯೋಜನ, ಅಪೊಲೊ 24X7 ವಲಯ, ಉಚಿತ ಆನ್‌ಲೈನ್ ಕೋರ್ಸ್, ಫಾಸ್ಟ್ಯಾಗ್‌ನಲ್ಲಿ 100ರೂ. ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್‌ಗಳು ಮತ್ತು ಉಚಿತ ವಿಂಕ್‌ಮ್ಯೂಸಿಕ್ ಪ್ರಯೋಜನ ದೊರೆಯಲಿದೆ.

ಏರ್‌ಟೆಲ್‌ನ 2999ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್‌ಟೆಲ್ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಸಹ ಲಭ್ಯ.

ಜಿಯೋ 2999ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಒಳಗೊಂಡಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ ಎಕ್ಸ್‌ಟ್ರಿಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ಜಿಯೋದ 2879ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಒಳಗೊಂಡಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಏರ್‌ಟೆಲ್‌ನ 3359ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯ ವಾಗಲಿವೆ. ಹಾಗೆಯೇ ಏರ್‌ಟೆಲ್ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸದಸ್ಯತ್ವ, ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಸಹ ಲಭ್ಯ.

ಜಿಯೋದ 2545ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 336 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಒಳಗೊಂಡಿದೆ. ಪ್ರತಿದಿನ 1.5 GB ಡೇಟಾ ಸೌಲಭ್ಯ ಬಳಕೆದಾರರಿಗೆ ಲಭ್ಯವಾಗಲಿವೆ. ಹಾಗೆಯೇ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ಸಿಗಲಿದೆ.

ವಿ ಟೆಲಿಕಾಂನ 1799ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 24 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ವಿ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಏರ್‌ಟೆಲ್‌ನ 1799ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 24 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಏರ್‌ಟೆಲ್ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ಲಭ್ಯವಾಗುತ್ತದೆ.


Click it and Unblock the Notifications








