Home
ಸುದ್ದಿಜಾಲ

ಫೋಲ್ಡೆಬಲ್ ಫೋನ್‌ ಖರೀದಿಗೆ ಇದು ಸಕಾಲ!..ಈ ಆಫರ್‌ ಮಿಸ್‌ ಮಾಡ್ಕೋಬೇಡಿ!

ಪ್ರಿಯ ಗ್ರಾಹಕರೇ, ಸದ್ಯ ನೀವೇನಾದರೂ ಹೈ ಎಂಡ್ ಮಾದರಿಯ ಅಥವಾ ಫೋಲ್ಡಬಲ್‌ ಮಾದರಿಯ ಸ್ಮಾರ್ಟ್‌ಫೋನ್‌ ಖರೀದಿಸುವ ಪ್ಲ್ಯಾನ್‌ ಮಾಡಿದ್ದರೆ, ನಿಮಗೆ ಅಮೆಜಾನ್‌ ಅತ್ಯುತ್ತಮ ತಾಣ ಆಗಿದೆ. ಏಕೆಂದರೆ ಜನಪ್ರಿಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಅಮೆಜಾನ್‌ ಇದೀಗ ಮೊಟೊ ಡೇಸ್‌ ಸೇಲ್‌ ಮಾರಾಟವನ್ನು ಆಯೋಜಿಸಿದೆ.

ಹೌದು, ಅಮೆಜಾನ್‌ ಇ ಕಾಮರ್ಸ್‌ ಮೊಟೊ ಡೇಸ್‌ ಸೇಲ್‌ ಆಯೋಜಿಸಿದ್ದು, ಈ ಮಾರಾಟ ಸದ್ಯ ಲೈವ್‌ ಇದೆ. ಈ ಮಾರಾಟದಲ್ಲಿ ಮೊಟೊ ಸಂಸ್ಥೆಯ ಮೊಟೊರೊಲಾ ರೇಜರ್‌ 40 ಅಲ್ಟ್ರಾ ಮತ್ತು ಮೊಟೊರೊಲಾ ರೇಜರ್‌ 40 ಮೊಬೈಲ್‌ಗಳು ಕ್ರಮವಾಗಿ ಶೇ 25% ಮತ್ತು ಶೇ 40% ರಷ್ಟು ಭಾರೀ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿವೆ.

ಫೋಲ್ಡೆಬಲ್ ಫೋನ್‌ ಖರೀದಿಗೆ ಇದು ಸಕಾಲ!..ಈ ಆಫರ್‌ ಮಿಸ್‌ ಮಾಡ್ಕೋಬೇಡಿ!

ಇನ್ನು ಈ ಫೋನ್‌ಗಳು ಆಕರ್ಷಕ ಲುಕ್‌ ಅನ್ನು ಹೊಂದಿದ್ದು, ಫೋಲ್ಡೆಬಲ್‌ ಮಾದರಿಯ ರಚನೆ ಪಡೆದಿವೆ. ಮೊಟೊರೊಲಾ ರೇಜರ್‌ 40 ಅಲ್ಟ್ರಾ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ ಜೆನ್‌ 1 SoC ಪ್ರೊಸೆಸರ್‌ ಹೊಂದಿದ್ದು, ಮೊಟೊರೊಲಾ ರೇಜರ್‌ 40 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ ಪಡೆದಿದೆ. ಇನ್ನುಳಿದಂತೆ ಈ ಎರಡು ಫೋನ್‌ಗಳ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಫರ್‌ ಬೆಲೆ ಮಾಹಿತಿ :
* ಮೊಟೊರೊಲಾ ರೇಜರ್‌ 40 ಅಲ್ಟ್ರಾ - 8GB RAM, 256GB ವೇರಿಯಂಟ್‌ ಆಫರ್‌ ಬೆಲೆ 89,999ರೂ.
* ಮೊಟೊರೊಲಾ ರೇಜರ್‌ 40 - 8GB RAM + 256GB ವೇರಿಯಂಟ್‌ ಆಫರ್‌ ಬೆಲೆ 59,999ರೂ

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಫೀಚರ್ಸ್‌ ಹೀಗಿವೆ :
ಮೊಟೊರೊಲಾ ರೇಜರ್‌ 40 ಅಲ್ಟ್ರಾ ಮೊಬೈಲ್‌ ಫೋಲ್ಡಬಲ್‌ ಮಾದರಿಯ ಡಿಸ್‌ಪ್ಲೇ ಪಡೆದಿದ್ದು, ಇದರ ಮುಖ್ಯ ಡಿಸ್‌ಪ್ಲೇ 6.9 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಆಗಿದೆ. ಇದರ ಡಿಸ್‌ಪ್ಲೇಯು 165Hz ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದಿದ್ದು, HDR10+ ಹಾಗೂ 1400 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಇನ್ನು ಇದರ ಕವರ್ ಡಿಸ್‌ಪ್ಲೇ 3.6 ಇಂಚಿನ ಕ್ವಿಕ್‌ವ್ಯೂ poOLED ಡಿಸ್‌ಪ್ಲೇ ಪಡೆದಿದ್ದು, ಈ ಸ್ಕ್ರೀನ್‌ 1000 ನಿಟ್ಸ್ ಬ್ರೈಟ್‌ನೆಸ್ ಸಪೋರ್ಟ್‌ ಹೊಂದಿದೆ.

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ ಜೆನ್‌ 1 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಈ ಫೋನ್‌ 8GB RAM ಮತ್ತು 256GB ಹಾಗೂ 12GB RAM ಮತ್ತು 512GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ.

ಈ ಫೋನಿನ ಪ್ರಾಥಮಿಕ ಕ್ಯಾಮೆರಾ 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಮತ್ತು ಸೆಕೆಂಡರಿ ಕ್ಯಾಮೆರಾ 13 ಮೆಗಾಪಿಕ್ಸಲ್‌ ಅಲ್ಟ್ರಾ-ವೈಡ್ ಲೆನ್ಸ್‌ ಅನ್ನು ಪಡೆದಿದೆ. ಇದಲ್ಲದೆ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ. ಇದರ ಜೊತೆಗೆ 3800mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 33W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಸಹ ಇದೆ.

ಮೊಟೊರೊಲಾ ರೇಜರ್‌ 40 ಫೀಚರ್ಸ್‌ ಮಾಹಿತಿ ಇಲ್ಲಿದೆ :
ಮೊಟೊರೊಲಾ ರೇಜರ್‌ 40 ಮೊಬೈಲ್ 6.9 ಇಂಚಿನ ಮುಖ್ಯ ಡಿಸ್‌ಪ್ಲೇ ಹೊಂದಿದ್ದು, ಈ ಮೊಬೈಲ್‌ ಕವರ್ ಡಿಸ್‌ಪ್ಲೇ 1.5 ಇಂಚಿನ ರಚನೆ ಪಡೆದಿದೆ. ಈ ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ.

ಹಾಗೆಯೇ ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು ಸೆಕೆಂಡರಿ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ ವೈಡ್‌ ಲೆನ್ಸ್‌ ಸಾಮರ್ಥ್ಯದಲ್ಲಿದೆ. ಜೊತೆಗೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸಹ ಹೊಂದಿದ್ದು, 4200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

Best Mobiles in India

English summary
Best deals on Motorola razr 40 Ultra and razr 40 on Amazon Moto Days Sale. details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+