ಮೊಟೊ E13 ಇನ್ನು ಹೊಸ ಕಲರ್‌ನಲ್ಲಿ ಲಭ್ಯ; ಬೆಲೆಯಲ್ಲಿಯೂ ಭಾರೀ ಆಫರ್!
ಜನಪ್ರಿಯ ಮೊಟೊ ಸಂಸ್ಥೆಯು ಕಳೆದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಮಾಡಿರುವ ಮೊಟೊ E13 ಫೋನ್ ಎಂಟ್ರಿ ಲೆವೆಲ್ ವಿಭಾಗದಲ್ಲಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ಈ ಫೋನಿನಲ್ಲಿ ಹೊಸ ಕಲರ್ ವೇರಿಯಂಟ್ ಖರೀದಿಗೆ ಲಭ್ಯ ಇದ್ದು, ಇದರ ಜೊತೆಗೆ ಆಕರ್ಷಕ ರಿಯಾಯಿತಿ ಕೂಡಾ ಪಡೆದಿರುವುದು ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಿದೆ.
ಹೌದು, ಮೊಟೊ ಸಂಸ್ಥೆಯ ಇತ್ತೀಚಿನ ಮೊಟೊ E13 ಸ್ಮಾರ್ಟ್‌ಫೋನ್ ಈಗ ಸ್ಕೈ ಬ್ಲೂ (Sky Blue) ಕಲರ್ ವೇರಿಯಂಟ್ ಆಯ್ಕೆಯಲ್ಲಿ ಪರಿಚಯ ಆಗಿದ್ದು, ಇದು 8GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಅಂದಹಾಗೆ ಈ ಫೋನ್ 2GB + 64GB ಮತ್ತು 4GB + 64GB ವೇರಿಯಂಟ್ ಆಯ್ಕೆ ಜೊತೆಗೆ ಕೆನೆ ವೈಟ್, ಅರೋರಾ ಗ್ರೀನ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಕಲರ್ ಆಯ್ಕೆ ಪಡೆದಿದೆ.

ಈ ಫೋನ್ ಅಕ್ಟೋಬರ್ 8 ರಂದು ಪ್ರಾರಂಭವಾಗಲಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2023 ಗೂ ಮುಂಚೆ ಹೊಸ ಕಲರ್ ಆಯ್ಕೆ ಲಭ್ಯ ಆಗಲಿದೆ. ಇನ್ನು ಹಬ್ಬದ ಪ್ರಯುಕ್ತ ಮೊಟೊ E13 ಫೋನ್ ಆಫರ್‌ನಲ್ಲಿ 6,749ರೂ. ಗಳಿಗೆ ಖರೀದಿಗೆ ಲಭ್ಯ ಆಗಲಿದೆ. ಹಾಗಾದರೆ ಮೊಟೊ E13 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಮೊಟೊ E13 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಮಾಹಿತಿ
ಮೊಟೊ E13 ಮೊಬೈಲ್ 6.5 ಇಂಚಿನ IPS LCD ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಒಳಗೊಂಡಿದೆ. ಹಾಗೆಯೇ ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಸಪೋರ್ಟ್ ಒಳಗೊಂಡಿದ್ದು, ವಾಟರ್‌ಡ್ರಾಪ್ ನಾಚ್ ವಿನ್ಯಾಸವನ್ನು ಸಹ ಪಡೆದಿದೆ. ಇದರ ಜೊತೆಗೆ ಡಿಸ್‌ಪ್ಲೇ ಅನುಪಾತವು 20:9 ಆಗಿದೆ.
ಮೊಟೊ E13 ಪ್ರೊಸೆಸರ್ ಪವರ್ ಹೇಗಿದೆ
ಮೊಟೊ E13 ಮೊಬೈಲ್ ಯುನಿಸಾಕ್ T606 (Unisoc T606) ಪ್ರೊಸೆಸರ್ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 2GB RAM + 64GB, 4GB RAM + 64GB ಹಾಗೂ 8GB + 128GB ಸ್ಟೋರೇಜ್ ಸಾಮರ್ಥ್ಯ ಆಯ್ಕೆಗಳನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ಇದೆ.
ಮೊಟೊ E13 ಕ್ಯಾಮೆರಾ ಸೆನ್ಸಾರ್ ಮಾಹಿತಿ
ಮೊಟೊ E13 ಮೊಬೈಲ್ ಎಂಟ್ರಿ ಲೆವೆಲ್ ಫೋನ್ ಆಗಿದ್ದು, ಸಿಂಗಲ್ ರಿಯರ್ ಕ್ಯಾಮೆರಾ ಸೌಲಭ್ಯ ಒಳಗೊಂಡಿದೆ. ಇದರ ಹಿಂಬದಿಯ ಕ್ಯಾಮೆರಾವು 13 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದ್ದು, ಎಲ್‌ಇಡಿ ಫ್ಲ್ಯಾಷ್ ಸೌಲಭ್ಯ ಕೂಡಾ ಪಡೆದಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.
ಮೊಟೊ E13 ಬ್ಯಾಟರಿ ಬ್ಯಾಕ್‌ಅಪ್ ಮತ್ತು ಇತರೆ ಆಯ್ಕೆಗಳು
ಮೊಟೊ E13 ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಪ್ರಯೋಜನ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇದು ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್ 5.0, ಜಿಪಿಎಸ್, ಫೇಸ್ ಅನ್‌ಲಾಕ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಡಾಲ್ಬಿ ಅಟ್ಮಾಸ್ ಬೆಂಬಲ, 3.5 ಎಂಎಂ ಆಡಿಯೊ ಜ್ಯಾಕ್ ಆಯ್ಕೆ ಒಳಗೊಂಡಿದೆ.


Click it and Unblock the Notifications








