ಅಗ್ಗದ ಬೆಲೆಗೆ ಭಾರತಕ್ಕೆ ಎಂಟ್ರಿ ಕೊಡ್ತು 'ಮೊಟೊ E13' ಫೋನ್!..ಖರೀದಿಸಲು ಯೋಗ್ಯವೇ?
ಮೊಬೈಲ್ ಮಾರುಕಟ್ಟೆಯಲ್ಲಿ ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಗುರುತಿಸಿಕೊಂಡಿರುವ ಮೊಟೊರೊಲಾ ಕಂಪೆನಿಯ ಮೊಟೊ ಸರಣಿ ಹೆಚ್ಚು ಆಕರ್ಷಕ ಎನಿಸಿವೆ. E ಸರಣಿಯಲ್ಲಿನ ಬಹುತೇಕ ಫೋನ್‌ಗಳು ಎಂಟ್ರಿ ಲೆವೆಲ್ ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿವೆ. ಆ ಸಾಲಿಗೆ ಮೊಟೊರೊಲಾ ಈಗ ಹೊಸದಾಗಿ ಮೊಟೊ E13 (Moto E13) ಸ್ಮಾರ್ಟ್‌ಫೋನ್ ಅನ್ನು ಸೇರ್ಪಡೆ ಮಾಡಿದೆ.

ಹೌದು, ಮೊಟೊರೊಲಾ ಕಂಪೆನಿ ತನ್ನ ನೂತನ ಮೊಟೊ E13 (Moto E13) ಫೋನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಮಾದರಿಯಲ್ಲಿದ್ದು, ಹಿಂಬದಿಯಲ್ಲಿ 13 ಮೆಗಾ ಪಿಕ್ಸಲ್ ಸೆನ್ಸಾರ್‌ನ ಕ್ಯಾಮೆರಾ ಒಳಗೊಂಡಿದೆ. ಇದರೊಂದಿಗೆ ಅಗ್ಗದ ಫೋನ್ ಆದರೂ, ಇದು 5,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಮತ್ತೊಂದು ಪ್ರಮುಖ ಹೈಲೈಟ್ ಆಗಿದೆ ಕಾಣಿಸಿಕೊಂಡಿದೆ.
ಈ ನೂತನ ಫೋನ್ ಎರಡು ವೇರಿಯಂಟ್ ಮಾದರಿಯ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 2GB RAM+64GB ಮತ್ತು 4GB RAM+64GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಇವೆ. ಹಾಗೆಯೇ ಈ ಫೋನ್ ಕಾಸ್ಮೋಸ್ ಬ್ಲ್ಯಾಕ್, ಕ್ರೀಮ್ ವೈಟ್ ಹಾಗೂ ಅರೋರಾ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗಾದರೇ ಮೊಟೊ E13 ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಮೊಟೊ E13 : ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಮೊಟೊ E13 ಸ್ಮಾರ್ಟ್‌ಫೋನ್ 6.5 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, ವಾಟರ್‌ಡ್ರಾಪ್ ನಾಚ್ ವಿನ್ಯಾಸವನ್ನು ಪಡೆದಿದೆ. ಹಾಗೆಯೇ ಡಿಸ್‌ಪ್ಲೇ ಅನುಪಾತವು 20:9 ಆಗಿದೆ.
ಮೊಟೊ E13 : ಪ್ರೊಸೆಸರ್ ಪವರ್ ಯಾವುದು
ಮೊಟೊ E13 ಸ್ಮಾರ್ಟ್‌ಫೋನ್ ಯುನಿಸಾಕ್ T606 (Unisoc T606) ಪ್ರೊಸೆಸರ್ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 2GB RAM+64GB ಮತ್ತು 4GB RAM+64GB ಸ್ಟೋರೇಜ್ ಸಾಮರ್ಥ್ಯ ಆಯ್ಕೆಗಳನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಸಾಧ್ಯ.

ಮೊಟೊ E13 : ರಿಯರ್ ಸಿಂಗಲ್ ಕ್ಯಾಮೆರಾ
ಮೊಟೊ E13 ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಫೋನ್ ಆಗಿದ್ದು, ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಪಡೆದಿದೆ. ಅದು 13 ಮೆಗಾ ಪಿಕ್ಸೆಲ್ ಸೆನ್ಸಾರ್‌ದಲ್ಲಿ ಇದ್ದು, ಎಲ್‌ಇಡಿ ಫ್ಲ್ಯಾಷ್ ಅನ್ನು ಸಹ ಪಡೆದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.
ಮೊಟೊ E13 : ಬ್ಯಾಟರಿ ಬ್ಯಾಕ್‌ಅಪ್ ಮತ್ತು ಇತರೆ
ಮೊಟೊ E13 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ.ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್ 5.0, ಜಿಪಿಎಸ್, ಫೇಸ್ ಅನ್‌ಲಾಕ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಡಾಲ್ಬಿ ಅಟ್ಮಾಸ್ ಬೆಂಬಲ, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಐಪಿ52 ಸ್ಪ್ಲಾಶ್-ರೆಸಿಸ್ಟೆಂಟ್ ಕೋಟಿಂಗ್ ಆಯ್ಕೆ ಪಡೆದಿದೆ.
ಮೊಟೊ E13 : ಬೆಲೆ ಎಷ್ಟು? ಲಭ್ಯತೆ ಮಾಹಿತಿ?
ಭಾರತದಲ್ಲಿ ಮೊಟೊ E13 ಸ್ಮಾರ್ಟ್‌ಫೋನ್ 2GB RAM + 64GB ವೇರಿಯಂಟ್ ಬೆಲೆಯು 6,999ರೂ. ಆಗಿದೆ. ಅದೇ ರೀತಿ 4GB RAM + 64GB ವೇರಿಯಂಟ್ ದರವು 7,999ರೂ. ಆಗಿದೆ. ಇನ್ನು ಈ ಫೋನ್ ಇದೇ ಫೆಬ್ರವರಿ 15 ರಿಂದ ಖರೀದಿಗೆ ಲಭ್ಯವಾಗಲಿದೆ.


Click it and Unblock the Notifications








