Just In
- 22 min ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- 52 min ago
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- 1 hr ago
ಬ್ಯಾಂಕ್ ಹೆಸರಲ್ಲಿ ಬಂದ SMS ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
- 3 hrs ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
Don't Miss
- News
Kashmir Snowfall: ರಾಷ್ಟ್ರೀಯ ಹೆದ್ದಾರಿ ಬಂದ್- ವಿಮಾನಗಳು ವಿಳಂಬ, ರೈಲು ಸೇವೆ ಸ್ಥಗಿತ
- Movies
ಮೊದಲ ವೀಕೆಂಡ್ನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ದಾಖಲೆಯಲ್ಲಿ ಕೆಜಿಎಫ್ 2 ಹಿಂದಿಕ್ಕಿತಾ ಪಠಾಣ್?
- Sports
ಟೀಮ್ ಇಂಡಿಯಾಗೆ ಹೊಸ ತಲೆನೋವು: ಮಂಕಾಗಿದ್ದಾರೆ ಭರವಸೆ ಮೂಡಿಸಿದ್ದ ಆಟಗಾರರು
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂದಿನಿಂದ 'ಮೊಟೊ E6s' ಫೋನಿನ ಸೇಲ್ ಶುರು!..ಬೆಲೆ 7,999ರೂ!
ಮೊಟೊ ಖ್ಯಾತಿಯ ಮೊಟೊರೊಲಾ ಕಂಪನಿಯು ಈಗಾಗಲೇ 'ಮೊಟೊರೊಲಾ ಒನ್' ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮೊಬೈಲ್ ಪ್ರಿಯರನ್ನು ಸೆಳೆದಿದೆ. ಹಾಗೆಯೇ ಮೊಟೊರೊಲಾ ಕಂಪನಿಯು ಇತ್ತೀಚಿಗೆ E ಸರಣಿಯಲ್ಲಿ 'ಮೊಟೊ E6s' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, ಇಂದು (ಸೆಪ್ಟೆಂಬರ್ 23) ಭಾರತದಲ್ಲಿ ಈ ಫೋನಿನ ಮೊದಲ ಸೇಲ್ ಆರಂಭವಾಗಲಿದೆ.

ಹೌದು, ಮೊಟೊರೊಲಾ ಸಂಸ್ಥೆಯ ಹೊಸ 'ಮೊಟೊ E6S' ಸ್ಮಾರ್ಟ್‌ಫೋನಿನ ಫಸ್ಟ್ ಸೇಲ್ ಇಂದು ಮಧ್ಯಾಹ್ನ 12ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಶುರುಮಾಗಲಿದೆ. 4GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯದ ವೇರಿಯಂಟ್‌ನಲ್ಲಿದ್ದು, ಪಾಲಿಶ್ಡ್ ಗ್ರಾಫೈಟ್ ಮತ್ತು ರಿಚ್ ಕ್ರ್ಯಾನ್‌ಬರಿ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಈ ಫೋನ್ ಬೆಲೆಯು 7,999ರೂ. ಆಗಿದೆ. ಹಾಗಾದರೇ ಮೊಟೊರೊಲಾ E6S ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
'ಮೊಟೊ E6S' ಸ್ಮಾರ್ಟ್‌ಫೋನ್ 720×1560 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.1 ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ವಾಟರ್‌ಡ್ರಾಪ್ ನಾಚ್ ಮಾದರಿಯಲ್ಲಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯಬಾಡಿಯ ರಚನೆಯ ನಡುವಿನ ಅಂತರವು ಶೇ.80% ಆಗಿದೆ. ಡಿಸ್‌ಪ್ಲೇಯ ಸುತ್ತಲೂ ಕರ್ವ್ ರಚನೆಯನ್ನು ಒಳಗೊಂಡಿದ್ದು, ಫೋನಿನ ಅಂದ ಹೆಚ್ಚಿಸಿದೆ.

ಪ್ರೊಸೆಸರ್ ಶಕ್ತಿ
'ಮೊಟೊ E6S' ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ P22 ಪ್ರೊಸೆಸರ್ ಶಕ್ತಿಯನ್ನು ಹೊಂದಿದ್ದು, ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ಸಪೋರ್ಟ್ ಅನ್ನು ಪಡೆದುಕೊಂಡಿದೆ. ಹಾಗೆಯೇ 4GB RAM ಸಾಮರ್ಥ್ಯದೊಂದಿಗೆ 64GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ಹೊಂದಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 512GB ವರೆಗೂ ವಿಸ್ತರಿಸಿಕೊಳ್ಳಬಹುದಾದ ಅವಕಾಶವಿದೆ.

ಕ್ಯಾಮೆರಾ ಹೇಗಿದೆ
'ಮೊಟೊ E6S' ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 13ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 2ಎಂಪಿಯ ಡೆಪ್ತ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಸೆಪ್ಫಿ ಕ್ಯಾಮೆರಾವು f/2.0 ಅಪರ್ಚರ್ ಹೊಂದಿದ್ದು, 8ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಆಟೋ ಫೋಕಸ್ ಸೌಲಭ್ಯ ಆಯ್ಕೆ ನೀಡಲಾಗಿದೆ.

ಬ್ಯಾಟರಿ ಲೈಫ್
'ಮೊಟೊ E6S' ಸ್ಮಾರ್ಟ್‌ಫೋನ್ 3,000mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ 10W ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಹಾಗೆಯೇ ಈ ಫೋನ್ ರೇರ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆ, ಆಂಬಿಯಂಟ್ ಲೈಟ್ ಸೆನ್ಸಾರ್, ಪ್ರೊಕ್ಸಿಮಿಟಿ ಸೆನ್ಸಾರ್, ಸೌಲಭ್ಯಗಳ ಜೊತೆಗೆ ವೈಫೈ, ಬ್ಲೂಟೂತ್, GLONASS, ಜಿಪಿಎಸ್ ಆಯ್ಕೆಗಳನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ
ಮೊಟೊರೊಲಾ ಕಂಪನಿಯು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ 'ಮೊಟೊ E6S' ಸ್ಮಾರ್ಟ್‌ಫೋನ್ ಬೆಲೆಯು 7,999ರೂ.ಗಳು ಆಗಿದೆ. ಇಂದು (ಸೆಪ್ಟೆಂಬರ್ 23) ಮಧ್ಯಾಹ್ನ 12ಗಂಟೆಗೆ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಫಸ್ಟ್ ಸೇಲ್ ಆರಂಭವಾಗಲಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ನಲ್ಲಿ ಕ್ಯಾಶ್‌ಬ್ಯಾಕ್, ಸೇರಿದಂತೆ ಇನ್ನಿತರ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಾಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470