Home
ಸುದ್ದಿಜಾಲ

ದೈತ್ಯ ಮೊಟೊ ಎಡ್ಜ್‌+ 2023 ಫೋನ್‌ ಬಿಡುಗಡೆ!..ಬೊಂಬಾಟ್‌ ಡಿಸ್‌ಪ್ಲೇ ಇದೆ!

ಮೊಟೊರೊಲಾ ಕಂಪೆನಿ ಜನಪ್ರಿಯ ಮೊಬೈಲ್‌ ತಯಾರಕರಲ್ಲಿ ಒಂದೆನಿಸಿಕೊಂಡಿದೆ. ಮೊಟೊ ಸರಣಿಯಲ್ಲಿ ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದ್ದು, ಇದೀಗ ಹೊಸದಾಗಿ ಮೊಟೊ ಎಡ್ಜ್‌+ 2023 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇದು pOLED ಡಿಸ್‌ಪ್ಲೇ ಹೊಂದಿದ್ದು, 165Hz ರಿಫ್ರೆಶ್‌ ರೇಟ್ ಪಡೆದಿದೆ.

ಹೌದು, ಮೊಟೊರೊಲಾ ಕಂಪೆನಿ ನೂತನವಾಗಿ ಮೊಟೊ ಎಡ್ಜ್‌+ 2023 (Moto Edge+ 2023) ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಇದು ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ ಆಗಿದ್ದು, ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್‌ 1 SoC 2 ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ.

ದೈತ್ಯ ಮೊಟೊ ಎಡ್ಜ್‌+ 2023 ಫೋನ್‌ ಬಿಡುಗಡೆ!..ಬೊಂಬಾಟ್‌ ಡಿಸ್‌ಪ್ಲೇ ಇದೆ!

ಹಾಗೆಯೇ 5100 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 68W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಬೆಂಬಲ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 8GB + 512GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ. ಹಾಗಾದರೆ ಮೊಟೊ ಎಡ್ಜ್‌+ 2023 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ಮೊಟೊ ಎಡ್ಜ್‌+ 2023 ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್ HD + AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 144 Hz ರಿಫ್ರೆಶ್ ರೇಟ್‌ ಹೊಂದಿದ್ದು, 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಜೊತೆಗೆ ಈ ಡಿಸ್‌ಪ್ಲೇ HDR 10+ ಬೆಂಬಲವನ್ನು ಹೊಂದಿದೆ.

ದೈತ್ಯ ಮೊಟೊ ಎಡ್ಜ್‌+ 2023 ಫೋನ್‌ ಬಿಡುಗಡೆ!..ಬೊಂಬಾಟ್‌ ಡಿಸ್‌ಪ್ಲೇ ಇದೆ!

ಪ್ರೊಸೆಸರ್‌ ಪವರ್ ಮಾಹಿತಿ : ಮೊಟೊ ಎಡ್ಜ್‌+ 2023 ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್‌ 1 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 12 ಓಎಸ್‌ ಕಾರ್ಯ ನಿರ್ವಹಿಸುತ್ತದೆ. ಈ ಫೋನ್‌ ಮೂರು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 8 GB + 256 GB ಸ್ಟೋರೇಜ್‌ ಆಯ್ಕೆಯಲ್ಲಿ ಸಾಮರ್ಥ್ಯದಲ್ಲಿವೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಇಲ್ಲ.

ಕ್ಯಾಮೆರಾ ಸೆನ್ಸಾರ್ ವಿಶೇಷ : ಮೊಟೊ ಎಡ್ಜ್‌+ 2023 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಹಾಗೆಯೇ ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿದೆ.

ದೈತ್ಯ ಮೊಟೊ ಎಡ್ಜ್‌+ 2023 ಫೋನ್‌ ಬಿಡುಗಡೆ!..ಬೊಂಬಾಟ್‌ ಡಿಸ್‌ಪ್ಲೇ ಇದೆ!

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು : ಮೊಟೊ ಎಡ್ಜ್‌+ 2023 ಸ್ಮಾರ್ಟ್‌ಫೋನ್‌ 5100 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 68W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಬೆಂಬಲ ಒಳಗೊಂಡಿದೆ. ಹಾಗೆಯೇ ಈ ಫೋನ್‌ ವಾಯರ್‌ಲೆಸ್‌ ಚಾರ್ಜಿಂಗ್ ಹಾಗೂ ರಿವರ್ಸ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ.

ಬೆಲೆ ಮತ್ತು ಲಭ್ಯತೆ : ಮೊಟೊ ಎಡ್ಜ್‌+ 2023 ಸ್ಮಾರ್ಟ್‌ಫೋನ್‌ 8GB + 512GB ವೇರಿಯಂಟ್‌ ಬೆಲೆಯು ಯುಎಸ್‌ ನಲ್ಲಿ $799 (ಭಾರತದಲ್ಲಿ ಅಂದಾಜು 65,400ರೂ) ಆಗಿದೆ. ಹಾಗೆಯೇ ಕೆನಡಾದಲ್ಲಿ 8GB + 512GB ವೇರಿಯಂಟ್‌ ಬೆಲೆಯು $1299.99 (ಭಾರತದಲ್ಲಿ ಅಂದಾಜು 78,000) ಆಗಿದೆ.

Best Mobiles in India

English summary
Moto Edge+ (2023) With Qualcomm Snapdragon 8 Gen 2 and 165HZ Poled Display Launched: Price, Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+