Home
ಸುದ್ದಿಜಾಲ

ಮೊಟೊ ಎಡ್ಜ್ 30 ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!..ಎಷ್ಟು ಡಿಸ್ಕೌಂಟ್‌ ಗೊತ್ತಾ?

ಜನಪ್ರಿಯ ಮೊಟೊರೊಲಾ ಮೊಬೈಲ್‌ ಸಂಸ್ಥೆಯು ಎಡ್ಜ್‌ ಸರಣಿಯಲ್ಲಿ ಮೀಡ್‌ರೇಂಜ್‌ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಮೊಟೊ ಎಡ್ಜ್‌ ಸರಣಿಯ ಪೈಕಿ ಮೊಟೊ ಎಡ್ಜ್‌ 30 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಈಗ ಬರೋಬ್ಬರಿ 3,000ರೂ. ಗಳ ಇಳಿಕೆ ಆಗಿದ್ದು, ಗ್ರಾಹಕರು ಅಚ್ಚರಿಯಿಂದ ನೋಡುವಂತೆ ಆಗಿದೆ.

ಮೊಟೊ ಎಡ್ಜ್‌ 30 ಸ್ಮಾರ್ಟ್‌ಫೋನ್‌ 6GB + 128GB ಮತ್ತು 8GB + 128GB ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಈ ಎರಡು ವೇರಿಯಂಟ್‌ ಬೆಲೆಯಲ್ಲಿ ಈಗ ಬೆಲೆ ಇಳಿಕೆ ಆಗಿದೆ. ಬೆಲೆ ಇಳಿಕೆಯ ಬಳಿಕ 6GB ವೇರಿಯಂಟ್‌ 24,999ರೂ. ಪ್ರೈಸ್‌ಟ್ಯಾಗ್‌ ಪಡೆದಿದ್ದು, 8GB ವೇರಿಯಂಟ್‌ 26,999ರೂ. ಗಳ ಬೆಲೆಯನ್ನು ಪಡೆದಿದೆ.

ಮೊಟೊ ಎಡ್ಜ್ 30 ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!..ಎಷ್ಟು ಡಿಸ್ಕೌಂಟ್‌ ಗೊತ್ತಾ?


ಮೊಟೊ ಎಡ್ಜ್ 30 : ಡಿಸ್‌ಪ್ಲೇ ರಚನೆ

ಮೊಟೊ ಎಡ್ಜ್ 30 ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ FHD+ ಪೋಲ್ಡ್ 10 ಬಿಟ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ಅನ್ನು ಬೆಂಬಲಿಸಲಿದೆ. ಇದು HDR10+ ತಂತ್ರಜ್ಞಾನವನ್ನು ಬೆಂಬಲಿಸಲಿದ್ದು, 360Hz ಟಚ್ ಸ್ಯಾಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ.

ಮೊಟೊ ಎಡ್ಜ್ 30 ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!..ಎಷ್ಟು ಡಿಸ್ಕೌಂಟ್‌ ಗೊತ್ತಾ?

ಮೊಟೊ ಎಡ್ಜ್ 30 : ಪ್ರೊಸೆಸರ್‌ ಸ್ಯಾಮರ್ಥ್ಯ

ಮೊಟೊ ಎಡ್ಜ್ 30 ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 OS ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಹಾಗೂ 8GB RAM ಮತ್ತು 128 GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಿದೆ. ಇದಲ್ಲದೆ ಈ ಫೋನ್‌ ಗೇಮಿಂಗ್‌ಗಾಗಿ, ಫೋನ್ ಮೋಟೋ ಗೇಮ್ ಟೈಮ್, ಕ್ವಾಲ್ಕಾಮ್ ಎಲೈಟ್ ಗೇಮಿಂಗ್ ಮತ್ತು ಕ್ವಾಲ್ಕಾಮ್ ಗೇಮ್ ಕ್ವಿಕ್ ಟಚ್ ಅನ್ನು ಹೊಂದಿದೆ.

ಮೊಟೊ ಎಡ್ಜ್ 30 : ಟ್ರಿಪಲ್ ಕ್ಯಾಮೆರಾ ರಚನೆ

ಮೊಟೊ ಎಡ್ಜ್ 30 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ರಿಯರ್‌ ಕ್ಯಾಮೆರಾ ಸೆಟಪ್‌ ಆಪ್ಟಿಕಲ್ ಇಮೇಜ್ ಸ್ಟೆಬಲೈಸೇಶನ್ ಟೆಕ್ನಾಲಜಿಯನ್ನು ಹೊಂದಿದೆ. ಇದಲ್ಲದೆ ಕ್ವಾಡ್-ಪಿಕ್ಸೆಲ್ ತಂತ್ರಜ್ಞಾನದೊಂದಿಗೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಮೊಟೊ ಎಡ್ಜ್ 30 ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!..ಎಷ್ಟು ಡಿಸ್ಕೌಂಟ್‌ ಗೊತ್ತಾ?

ಮೊಟೊ ಎಡ್ಜ್ 30 : ಬ್ಯಾಟರಿ ಮತ್ತು ಇತರೆ ಸೌಲಭ್ಯ

ಮೊಟೊ ಎಡ್ಜ್ 30 ಸ್ಮಾರ್ಟ್‌ಫೋನ್‌ 4,020 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಟರ್ಬೋಪವರ್ ಚಾರ್ಜಿಂಗ್ ತಂತ್ರಜ್ಞಾನ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡಾಲ್ಬಿ ಅಟ್ಮಾಸ್‌ನೊಂದಿಗೆ ಸ್ಟಿರಿಯೊ ಸ್ಪೀಕರ್‌ಗಳು, 13 5G ಬ್ಯಾಂಡ್‌ಗಳಿಗೆ ಬೆಂಬಲ ಮತ್ತು ವೈಫೈ 6E ಸಹ ಸೇರಿದೆ.

ಮೊಟೊ ಎಡ್ಜ್ 30 : ಕಲರ್ ಹಾಗೂ ಮೆಮೊರಿ

ಮೊಟೊ ಎಡ್ಜ್ 30 ಸ್ಮಾರ್ಟ್‌ಫೋನ್‌ ಬೆಲೆ ಭಾರತದಲ್ಲಿ 6 GB + 128 GB ಹಾಗೂ 8 GB + 128 GB ರೂಪಾಂತರದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಈ ಫೋನ್‌ ಅರೋರಾ ಗ್ರೀನ್ ಮತ್ತು ಮೆಟಿಯರ್ ಗ್ರೇ ಬಣ್ಣದ ಆಯ್ಕೆ ಪಡೆದಿದೆ.

Best Mobiles in India

English summary
Moto Edge 30 Comes with 6gb and 8gb models. both the models have received a price cut of Rs 3,000. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+