Just In
- 17 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 18 hrs ago
ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 19 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 21 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
ಫಿಟ್ನೆಸ್ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ತೇರ್ಗಡೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ವಾಪಸ್?
- Movies
3 ದಿನಗಳಲ್ಲಿ ಕ್ರಾಂತಿ ಪಡೆದುಕೊಂಡ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್; ಇಷ್ಟು ಸಾಕಾ?
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂದು ಮೊಟೊ ಎಡ್ಜ್ 30 ಅಲ್ಟ್ರಾ ಮತ್ತು ಮೊಟೊ ಎಡ್ಜ್ 30 ಫ್ಯೂಶನ್ ಫಸ್ಟ್ ಸೇಲ್!
ಭಾರತದಲ್ಲಿ ಮೊಟೊರೊಲಾ ನೂತನವಾಗಿ ಬಿಡುಗಡೆ ಮಾಡಿರುವ ಮೊಟೊ ಎಡ್ಜ್ 30 ಅಲ್ಟ್ರಾ ಮತ್ತು ಮೊಟೊ ಎಡ್ಜ್ 30 ಫ್ಯೂಶನ್ ಸ್ಮಾರ್ಟ್‌ಫೋನ್‌ಗಳು ಪ್ರೀಮಿಯಂ ಮಾದರಿಯ ಫೀಚರ್ಸ್‌ಗಳಿಂದ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಇನ್ನು ಮೊಟೊ ಎಡ್ಜ್ 30 ಅಲ್ಟ್ರಾ ಮತ್ತು ಮೊಟೊ ಎಡ್ಜ್ 30 ಫ್ಯೂಶನ್ ಫೋನ್‌ಗಳು ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಮೂಲಕ ಇಂದು (ಸೆಪ್ಟೆಂಬರ್ 22) ಫಸ್ಟ್ ಸೇಲ್ ಪ್ರಾರಂಭಿಸಿವೆ. ಆಕರ್ಷಕ ಆಫರ್‌ನಲ್ಲಿ ಖರೀದಿಗೆ ಲಭ್ಯ ಇವೆ.

ಫ್ಲಿಪ್‌ಕಾರ್ಟ್‌ನಲ್ಲಿ ಇದೇ ಸೆಪ್ಟೆಂಬರ್ 23 ರಿಂದ ಬಿಗ್ ಬಿಲಿಯನ್ ಡೇಸ್ ಸೇಲ್ ಮಾರಾಟ ಆರಂಭವಾಗಲಿದ್ದು, ಅತ್ಯುತ್ತಮ ಎಕ್ಸ್‌ಚೇಂಜ್ ಕೊಡುಗೆ, ಬ್ಯಾಂಕ್ ಆಫರ್‌ಗಳು ಲಭ್ಯವಾಗಲಿವೆ. ಮೊಟೊ ಎಡ್ಜ್ 30 ಅಲ್ಟ್ರಾ ಮತ್ತು ಮೊಟೊ ಎಡ್ಜ್ 30 ಫ್ಯೂಶನ್ ಗಳನ್ನು ಗ್ರಾಹಕರು ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿ ಮಾಡಿದರೆ, ಮೊಟೊರೊಲಾ 3,000ರೂ. ಗಳ ಇನ್‌ಸ್ಟಂಟ್ ರಿಯಾಯಿತಿ ನೀಡುತ್ತಿದೆ.

ಮೊಟೊ ಎಡ್ಜ್ 30 ಅಲ್ಟ್ರಾ 8GB + 128GB ವೇರಿಯಂಟ್ 59,999 ರೂ.ಗಳ ಬೆಲೆಯಲ್ಲಿದ್ದು, 54,999ರೂ.ಗಳಿಗೆ ಲಭ್ಯವಾಗಲಿದೆ. ಅದೇ ರೀತಿ ಮೊಟೊ ಎಡ್ಜ್ 30 ಫ್ಯೂಶನ್ 8GB + 128GB ವೇರಿಯಂಟ್ 42,999ರೂ.ಗಳ ದರ ಪಡೆದಿದ್ದು, ಸೇಲ್‌ನಲ್ಲಿ 39,999ರೂ.ಗಳ ಕೊಡುಗೆಯ ಬೆಲೆಯಲ್ಲಿ ದೊರೆಯುತ್ತದೆ. ಹಾಗಾದರೆ ಮೊಟೊ ಎಡ್ಜ್ 30 ಅಲ್ಟ್ರಾ ಮತ್ತು ಮೊಟೊ ಎಡ್ಜ್ 30 ಫ್ಯೂಶನ್ ಫೋನ್‌ಗಳ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊರೊಲಾ ಎಡ್ಜ್ 30 ಅಲ್ಟ್ರಾ: ಡಿಸ್‌ಪ್ಲೇ
ಮೊಟೊರೊಲಾ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಪೋಲ್ಡ್ ಕರ್ವ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ HDR10+, DCI-P3 ಕಲರ್ ಪ್ಲೇಸ್ ಮತ್ತು 1250ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ. ಹಾಗೆಯೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಪಡೆದಿದೆ.

ಮೊಟೊರೊಲಾ ಎಡ್ಜ್ 30 ಅಲ್ಟ್ರಾ: ಪ್ರೊಸೆಸರ್
ಮೊಟೊರೊಲಾ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 12 ಆಧಾರಿತ My UX ಸ್ಕಿನ್ ಬೆಂಬಲದೊಂದಿಗೆ ರನ್ ಆಗಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ.

ಮೊಟೊರೊಲಾ ಎಡ್ಜ್ 30 ಅಲ್ಟ್ರಾ: ಕ್ಯಾಮೆರಾ
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಸೆನ್ಸಾರ್ ಹೊಂದಿದೆ. ಈ ಕ್ಯಾಮೆರಾ 16 ಪಿಕ್ಸೆಲ್‌ಗಳನ್ನು ಸಿಂಗಲ್ 2.56μm ಅಲ್ಟ್ರಾ ಪಿಕ್ಸೆಲ್‌ಗೆ ಸಂಯೋಜಿಸುತ್ತದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಸೆನ್ಸಾರ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೋನಿ ಸೆನ್ಸಾರ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಇದಲ್ಲದೆ 60 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಮೊಟೊರೊಲಾ ಎಡ್ಜ್ 30 ಅಲ್ಟ್ರಾ: ಬ್ಯಾಟರಿ
ಮೊಟೊರೊಲಾ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್‌ಫೋನ್ 4,610mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 125W ಟರ್ಬೋಪವರ್ ವೈರ್ಡ್ ಚಾರ್ಜಿಂಗ್, 50W ವಾಯರ್‌ಲೆಸ್ ಚಾರ್ಜಿಂಗ್ ಮತ್ತು 10W ವೈರ್‌ಲೆಸ್ ಪವರ್ ಹೋಸ್ಟ್-ಅವೇರ್ ಪರ್ಫಾರ್ಮೆನ್ಸ್ ಬೂಸ್ಟರ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G (13 ಬ್ಯಾಂಡ್‌ಗಳು), 4G LTE, Wi-Fi 6E, ಬ್ಲೂಟೂತ್ v5.2, GPS/AGPS, NFC, ಡಿಸ್ಪ್ಲೇಪೋರ್ಟ್ 1.4, ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

ಮೊಟೊರೊಲಾ ಎಡ್ಜ್ 30 ಫ್ಯೂಷನ್: ಕೀ ಫೀಚರ್ಸ್
ಮೊಟೊರೊಲಾ ಎಡ್ಜ್ 30 ಫ್ಯೂಷನ್ ಸ್ಮಾರ್ಟ್‌ಫೋನ್ 6.55 ಇಂಚಿನ ಫುಲ್ ಹೆಚ್‌ಡಿ ಪ್ಲಸ್ pOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಡಿಸ್‌ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, ಜೊತೆಗೆ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888+ SoC ಪ್ರೊಸೆಸರ್ ಒಳಗೊಂಡಿದ್ದು ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಹೊಂದಿದೆ. ಜೊತೆಗ ಇದು ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಹೊಂದಿದ್ದು, 33W ಟರ್ಬೊ ಚಾರ್ಜಿಂಗ್ ಬೆಂಬಲಿಸುವ 4,400mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470