ಇಂದು ಮೊಟೊರೊಲಾ ಎಡ್ಜ್ 40 ಫೋನ್ ಫಸ್ಟ್ ಸೇಲ್!..ಏನಿದೆ ಆಫರ್?
ಮೊಟೊರೊಲಾ ಕಳೆದ ವಾರ ಭಾರತದಲ್ಲಿ ಬಿಡುಗಡೆ ಮಾಡಿರುವ ಮೊಟೊರೊಲಾ ಎಡ್ಜ್ 40 (Motorola Edge 40) ಸ್ಮಾರ್ಟ್‌ಫೋನ್ ಆಕರ್ಷಕ ಲುಕ್ ಪಡೆದಿದೆ. ಈ ಫೋನ್ ಇಂದು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ಫಸ್ಟ್ ಸೇಲ್ ಪ್ರಾರಂಭಿಸಲಿದೆ. ಅಂದಹಾಗೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 ಪ್ರೊಸೆಸರ್ ಪವರ್ ಪಡೆದಿದೆ.
ಹೌದು, ಮೊಟೊರೊಲಾ ಎಡ್ಜ್ 40 (Motorola Edge 40) ಸ್ಮಾರ್ಟ್‌ಫೋನ್ ಇಂದು ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಆರಂಭಿಸಲಿದೆ. ಈ ಫೋನ್ OIS ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಮುಖ ಕ್ಯಾಮೆರಾ ಪಡೆದುಕೊಂಡಿದ್ದು, ಈ ಫೋನ್ ಕರ್ವ್ ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗಾದರೆ ಈ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊರೊಲಾ ಎಡ್ಜ್ 40 ಡಿಸ್‌ಪ್ಲೇ ವಿವರ: ಈ ಫೋನ್ 6.5 ಇಂಚಿನ ಫುಲ್ ಹೆಚ್‌ಡಿ ಸಾಮರ್ಥ್ಯದ ಕರ್ವ್ಡ್ ಡಿಸ್‌ಪ್ಲೇ ಇದಾಗಿದ್ದು, 2400 x 1080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 144Hz ನ ರಿಫ್ರೆಶ್ ರೇಟ್ ಹಾಗೂ 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ನೀಡಲಿದ್ದು, ಈ ಡಿಸ್‌ಪ್ಲೇ ಯನ್ನು ಸ್ಯಾಂಡ್‌ಬ್ಲಾಸ್ಟೆಡ್ ಅಲ್ಯೂಮಿನಿಯಂ ಬೆಜೆಲ್‌ಗಳಿಂದ ರೂಪಿಸಲಾಗಿದೆ. ಹಾಗೆಯೇ ಈ ಕರ್ವ್ಡ್ 3D ಗ್ಲಾಸ್ ಆಂಟಿಫಿಂಗರ್‌ಪ್ರಿಂಟ್ ಲೇಪನದೊಂದಿಗೆ ಕಾಣಿಸಿಕೊಂಡಿದೆ.
ಮೊಟೊರೊಲಾ ಎಡ್ಜ್ 40 ಪ್ರೊಸೆಸರ್ ಮಾಹಿತಿ: ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 5G SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಅನ್ನು ರನ್ ಮಾಡುತ್ತದೆ. ಇದರೊಂದಿಗೆ ಎರಡು ವರ್ಷಗಳ ಓಎಸ್ ನವೀಕರಣ ಮತ್ತು ಮೂರು ವರ್ಷಗಳ ಭದ್ರತಾ ನವೀಕರಣ ಸಹ ಲಭ್ಯ ಇದೆ. ಇನ್ನು 8GB RAM ಮತ್ತು 256GB ಇಂಟರ್ ಸ್ಟೋರೇಜ್‌ನಲ್ಲಿ ಈ ಫೋನ್ ಕಾಣಿಸಿಕೊಂಡಿದೆ.
ಮೊಟೊರೊಲಾ ಎಡ್ಜ್ 40 ಕ್ಯಾಮೆರಾ ರಚನೆ: ಈ ಹೊಸ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50 ಮೆಗಾ ಪಿಕ್ಸೆಲ್ ಪ್ರಮುಖ ಸೆನ್ಸರ್ ಮತ್ತು 13 ಮೆಗಾ ಪಿಕ್ಸೆಲ್ ಮ್ಯಾಕ್ರೋ ಅಲ್ಟ್ರಾವೈಡ್ ಲೆನ್ಸ್ ಅನ್ನು ಪಡೆದುಕೊಂಡಿದೆ. ಜೊತೆಗೆ ಎರಡು ಎಲ್ಇಡಿ ಫ್ಲ್ಯಾಶ್ ಲೈಟ್ ಆಯ್ಕೆಯನ್ನೂ ಸಹ ನೀಡಲಾಗಿದೆ. ಇದರೊಂದಿಗೆ 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಆಕರ್ಷಕವಾಗಿದೆ.

ಮೊಟೊರೊಲಾ ಎಡ್ಜ್ 40 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಮೊಟೊರೊಲಾ ಎಡ್ಜ್ 40 68W ಟರ್ಬೋಪವರ್ ವೈರ್ಡ್ ಚಾರ್ಜಿಂಗ್ ಮತ್ತು 15W ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,400 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಇನ್ನುಳಿದಂತೆ ಈ ಫೋನ್ ವೈ-ಫೈ 6, ಬ್ಲೂಟೂತ್ ಆವೃತ್ತಿ v5.2 ಮತ್ತು ಜಿಪಿಎಸ್ ಕನೆಕ್ಟಿವಿಟಿ ಬೆಂಬಲಿಸಲಿದ್ದು, ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ಪಡೆದುಕೊಂಡಿದೆ.
ಮೊಟೊರೊಲಾ ಎಡ್ಜ್ 40 ಬೆಲೆ ಹಾಗೂ ಲಭ್ಯತೆ: ಮೊಟೊರೊಲಾ ಎಡ್ಜ್ 40 ಫೋನ್ 8 GB RAM ಮತ್ತು 256 GB ಇಂಟರ್ ಸ್ಟೋರೇಜ್‌ನ ಸಿಂಗಲ್ ವೇರಿಯಂಟ್‌ಗೆ 29,999 ರೂ.ಗಳನ್ನು ನಿಗದಿ ಮಾಡಲಾಗಿದೆ. ಜೊತೆಗೆ ರೆಸೆಡಾ ಗ್ರೀನ್, ಎಕ್ಲಿಪ್ಸ್ ಬ್ಲ್ಯಾಕ್ ಲೆದರ್ ಫಿನಿಶ್, ಲೂನಾರ್ ಬ್ಲೂ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಈ ಫೋನ್ ಕಾಣಿಸಿಕೊಂಡಿದೆ. ಇದನ್ನು ಫ್ಲಿಪ್‌ಕಾರ್ಟ್ ಹಾಗೂ ಮೊಟೊರೊಲಾದ ಅಧಿಕೃತ ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








