ನಾಳೆ ಅಗ್ಗದ ಬೆಲೆಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡಲಿದೆ ಮೊಟೊದ ಈ ಹೊಸ ಫೋನ್!
ಮೊಟೊರೊಲಾ ಸಂಸ್ಥೆಯು ಮೊಟೊ G04 (Moto G04) ಸ್ಮಾರ್ಟ್‌ಫೋನ್ ನಾಳೆ (ಫೆ 15 ರಂದು) ಭಾರತೀಯ ಮಾರುಕಟ್ಟೆಗೆಯಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಈ ಫೋನ್ ಎಂಟ್ರಿ ಲೆವೆಲ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. ಅದಾಗ್ಯೂ, ಕೆಲವು ಫೀಚರ್ಸ್ ಬಲು ಆಕರ್ಷಕ ಎನಿಸಿವೆ.
ಹೌದು, ಮೊಟೊ ಸಂಸ್ಥೆಯ ಮೊಟೊ G04 (Moto G04) ಸ್ಮಾರ್ಟ್‌ಫೋನ್ ಫೆ 15 ರಂದು ಬಿಡುಗಡೆ ಮಾಡಲಿದೆ. ಈ ಬಗ್ಗೆ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಮೈಕ್ರೋ-ವಿಂಡೋ ತೆರೆದಿದ್ದು, ಈಗಾಗಲೇ ಮೊಬೈಲ್ ಪ್ರಿಯರ ಚಿತ್ತ ಸೆಳೆದಿದೆ. ಇನ್ನು ಈ ಮೊಟೊ G04 ಫೋನ್ ಎರಡು ವೇರಿಯಂಟ್ ಮಾಡೆಲ್‌ಗಳಲ್ಲಿ ಲಗ್ಗೆ ಇಡುವುದು ಖಚಿತ ಆಗಿದ್ದು, ಪ್ರಾಥಮಿಕ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿರಲಿದೆ.

ಅಂದಹಾಗೆ ಈ ಸ್ಮಾರ್ಟ್‌ಫೋನ್ ಗ್ರೀನ್, ಬ್ಲೂ, ಬ್ಲ್ಯಾಕ್ ಮತ್ತು ಆರೆಂಜ್ ಬಣ್ಣದ ಆಯ್ಕೆಗಳ ಆಯ್ಕೆ ಪಡೆದಿರುತ್ತದೆ ಎಂದು ತಿಳಿದು ಬಂದಿದೆ. ಮುಂಬರುವ ಈ ಮೊಟೊರೊಲಾ ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಖಚಿತ ಆಗಿದ್ದು, ಡಾಲ್ಬಿ ಆಡಿಯೋ ಸಪೋರ್ಟ್ ಕೂಡಾ ಪಡೆದಿರಲಿದೆ. ಹಾಗಾದರೇ ಈ ಫೋನಿನ ಇತರೆ ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಮೊಟೊ G04 ಮೊಬೈಲ್ - ನಿರೀಕ್ಷಿತ ಫೀಚರ್ಸ್
ಮೊಟೊ G04 ಫೋನ್ ಪ್ರೀಮಿಯಂ ಮಾದರಿಯ ವಿನ್ಯಾಸ ಪಡೆದಿದ್ದು, ನೋಡಲು ಆಕರ್ಷಕ ಎನಿಸಲಿದೆ. ಇದು 6.6 ಇಂಚಿನ ಡಿಸ್‌ಪ್ಲೇ ರಚನೆ ಪಡೆದಿರಲಿದ್ದು, ಹಾಗೆಯೇ ಹೈ-ಬ್ರೈಟ್‌ನೆಸ್ ಮೋಡ್‌ನೊಂದಿಗೆ 90Hz LCD ಡಿಸ್‌ಪ್ಲೇ ವಿನ್ಯಾಸ ಪಡೆದಿರಲಿದೆ. ಈ ಫೋನ್ ಡಿಸ್‌ಪ್ಲೇಯಲ್ಲಿ ಪಂಚ್ ಹೋಲ್ ಮಾದರಿಯನ್ನು ಪಡೆದಿದೆ.

ಅದೇ ರೀತಿ ಮೊಟೊ G04 ಫೋನ್ Unisoc T606 ಚಿಪ್ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದಿರಲಿದ್ದು, ಇದರೊಂದಿಗೆ ಇತ್ತೀಚಿನ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕೂಡಾ ಪಡೆದಿರಲಿದೆ. ಅಲ್ಲದೇ ಎರಡು ವೇರಿಯಂಟ್ ಮಾಡೆಲ್‌ಗಳಲ್ಲಿ ಲಭ್ಯವಾಗಲಿದ್ದು, ಅವುಗಳು ಕ್ರಮವಾಗಿ 4GB + 64 GB ಹಾಗೂ 8GB RAM + 128 GB ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿವೆ.
ಮೊಟೊ G04 ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 16 ಮೆಗಾ ಪಿಕ್ಸಲ್ AI ಕ್ಯಾಮರಾ ಸೆನ್ಸಾರ್ ಅನ್ನು ಹೊಂದುವ ನಿರೀಕ್ಷೆಯಿದೆ. ಹಾಗೆಯೇ ಮುಂಭಾಗದಲ್ಲಿ 5 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯ ಹೊಂದಿಸಲಾಗಿರಲಿದೆ. ಅತ್ಯುತ್ತಮ ಫೋಟೋಗಳಿಗಾಗಿ ಅಗತ್ಯ ಮೋಡ್ ಆಯ್ಕೆಗಳನ್ನು ಇದು ಪಡೆದಿದ್ದು, ಬೇಸಿಕ್ ಎಡಿಟಿಂಗ್ ಆಯ್ಕೆಗಳು ಇರಲಿವೆ.
ಹಾಗೆಯೇ ಮೊಟೊ G04 ಮೊಬೈಲ್ 10W ಚಾರ್ಜಿಂಗ್ ಸಪೋರ್ಟ್ ಪಡೆದಿರಲಿದ್ದು, 5000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಕೂಡಾ ಪಡೆದಿರುತ್ತದೆ. ಇದರ ಜೊತೆಗೆ ಈ ಮೊಬೈಲ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒದಗಿಸುತ್ತದೆ. ಇದರೊಂದಿಗೆ ಈ ಫೋನ್ IP52 ರೇಟಿಂಗ್ ಮತ್ತು ಅನುಕೂಲಕರ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್‌ನೊಂದಿಗೆ water repellent ವಿನ್ಯಾಸವನ್ನು ಪಡೆದಿದೆ.
ಅಂದಹಾಗೆ ಮೊಟೊ G04 ಫೋನ್ ಬ್ಲಾಕ್, ಸೀ ಗ್ರೀನ್, ಸ್ಯಾಟಿನ್ ಬ್ಲೂ ಮತ್ತು ಸನ್‌ರೈಸ್ ಆರೆಂಜ್ ಸೇರಿದಂತೆ ಆಕರ್ಷಕ ಕಲರ್ ಶ್ರೇಣಿಯಲ್ಲಿ ಲಭ್ಯ ಆಗಲಿದೆ. ಇನ್ನು ಭಾರತದಲ್ಲಿ ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಯು ಸುಮಾರು 8,000ರೂ. ಗಳ ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications