Home
ಸುದ್ದಿಜಾಲ

ನಾಳೆಯಿಂದ ಮೊಟೊ G04 ಫೋನ್‌ ಖರೀದಿಗೆ ಲಭ್ಯ...ಆಫರ್‌ ಏನಿದೆ?

ಜನಪ್ರಿಯ ಮೊಟೊರೊಲಾ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ಮೊಟೊ G04 ಸ್ಮಾರ್ಟ್‌ಫೋನ್‌ ಅಗ್ಗದ ಬೆಲೆ ಹಾಗೂ ಆಕರ್ಷಕ ಫೀಚರ್‌ನಿಂದ ಗಮನ ಸೆಳೆದಿದೆ. ಅಂದಹಾಗೆ ಈ ಫೋನ್‌ ನಾಳೆ (ಫೆ. 22) ಭಾರತದಲ್ಲಿ ಮೊದಲ ಮಾರಾಟ ಆರಂಭ ಮಾಡಲಿದೆ.

ಹೌದು, ಮೊಟೊ G04 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದ ಮೂಲಕ ಭಾರತದಲ್ಲಿ ನಾಳೆ (ಫೆ. 22) ಸೇಲ್‌ ಶುರು ಮಾಡಲಿದೆ. ಈ ಫೋನ್‌ ಯುನಿಸೊಕ್ T606 SoC ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, ಇದರೊಂದಿಗೆ 16 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ರಚನೆ ಸಹ ಪಡೆದಿದೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 6,999ರೂ. ಗಳು ಆಗಿದ್ದು, ಆಯ್ದ ಬ್ಯಾಂಕ್‌ಗಳಿಂದ ಡಿಸ್ಕೌಂಟ್‌ ಸಹ ಲಭ್ಯ.

ನಾಳೆಯಿಂದ ಮೊಟೊ G04 ಫೋನ್‌ ಖರೀದಿಗೆ ಲಭ್ಯ...ಆಫರ್‌ ಏನಿದೆ?

ಇನ್ನು ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು ಬಾಹ್ಯ ಮೆಮೊರಿಯನ್ನು ಸುಮಾರು 1 TB ವರೆಗೂ ವಿಸ್ತರಿಸುವ ಸೌಲಭ್ಯ ಪಡೆದುಕೊಂಡಿದೆ. ಇನ್ನುಳಿದಂತೆ ಮೊಟೊ G04 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಮೊಟೊ G04 ಫೀಚರ್ಸ್‌

ಮೊಟೊ G04 ಸ್ಮಾರ್ಟ್‌ಫೋನ್‌ 6.5 ಇಂಚಿನ LCD ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇಯು 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಅನ್ನು ನೀಡಲಿದೆ. ಭದ್ರತೆಗಾಗಿ, ಇದು ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ.

ನಾಳೆಯಿಂದ ಮೊಟೊ G04 ಫೋನ್‌ ಖರೀದಿಗೆ ಲಭ್ಯ...ಆಫರ್‌ ಏನಿದೆ?

ಮೊಟೊದ ಈ ಮೊಬೈಲ್‌ ಯುನಿಸೊಕ್ T606 SoC ಪ್ರೊಸೆಸರ್‌ ಬಲ ಪಡೆದಿದೆ. ಇದು ಮೊಟೊ G034 My UX-ಆಧಾರಿತ ಆಂಡ್ರಾಯ್ಡ್‌ 14 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 4GB + 64GB ಹಾಗೂ 8GB RAM ಮತ್ತು 128 GB ಸ್ಟೋರೇಜ್‌ ಸಾಮರ್ಥ್ಯ ಪಡೆದಿದೆ. ಇನ್ನು 8GB ವರೆಗಿನ ವರ್ಚುವಲ್ RAM ವಿಸ್ತರಿಸುವುದಕ್ಕೆ ಕೂಡ ಅವಕಾಶ ಇದೆ.

ಮೊಟೊ G04 ಮೊಬೈಲ್‌ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಪಡೆದಿದ್ದು, ಬ್ಯಾಕ್‌ ಪ್ಯಾನೆಲ್‌ LED ಫ್ಲ್ಯಾಷ್‌ನೊಂದಿಗೆ ಲಭ್ಯ. ಇದು 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪೋರ್ಟ್ರೇಟ್, ಫೋಟೋ, ನೈಟ್ ವಿಷನ್, ಟೈಮರ್, ವಾಟರ್‌ಮಾರ್ಕ್, ವಿಡಿಯೋ ಟೈಮ್‌ಲ್ಯಾಪ್ಸ್, ಸ್ನ್ಯಾಪ್ ಇನ್ ವಿಡಿಯೋ ರೆಕಾರ್ಡಿಂಗ್‌ ಅನ್ನು ಕಾಣಬಹುದು.

ಮೊಟೊ G04 ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು USB-C ಪೋರ್ಟ್ ಮೂಲಕ 15W ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಅಲ್ಲದೇ ಇದು ಡ್ಯುಯಲ್ ಸಿಮ್ ಸ್ಲಾಟ್, 4G VoLTE, Wi-Fi 802.11ac, ಬ್ಲೂಟೂತ್ 5.0, GPS, ಡಾಲ್ಬಿ Atmos ಬೆಂಬಲದೊಂದಿಗೆ ಸಿಂಗಲ್ ಸ್ಪೀಕರ್ ಹೊಂದಿದೆ. ಇದರೊಂದಿಗೆ 3.5mm ಆಡಿಯೊ ಜ್ಯಾಕ್ ಮತ್ತು ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಂತಹ ಇತರ ಫೀಚರ್ಸ್‌ಗಳನ್ನು ಸಹ ಪಡೆದಿದೆ.

ಈ ಮೊಬೈಲ್‌ನ 4GB + 64GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 6,999ರೂ. ಆಗಿದ್ದು, ಇನ್ನು 8GB + 128GB ಸ್ಟೋರೇಜ್‌ ವೇರಿಯಂಟ್‌ ದರವು 7,999ರೂ. ಆಗಿದೆ. ಈ ಫೋನ್‌ ಫೆಬ್ರವರಿ 22 ರಿಂದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದ್ದು, ಕಾನ್ಕಾರ್ಡ್ ಬ್ಲಾಕ್, ಸೀ ಗ್ರೀನ್, ಸ್ಯಾಟಿನ್ ಬ್ಲೂ ಮತ್ತು ಸನ್‌ರೈಸ್ ಆರೆಂಜ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Moto G04 Sale Starts from tomorrow in India. Check Price and Offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+