Home
ಸುದ್ದಿಜಾಲ

ಇಂದು ಮೊಟೊ G04 ಫೋನ್‌ ಫಸ್ಟ್‌ ಸೇಲ್‌..ಡಿಸ್ಕೌಂಟ್‌ ಎಷ್ಟಿದೆ ಗೊತ್ತಾ?

ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ ಆಗಿರುವ ಮೊಟೊರೊಲಾ ಸಂಸ್ಥೆಯು ಭಾರತದಲ್ಲಿ ನೂತನವಾಗಿ ಬಿಡುಗಡೆ ಮಾಡಿರುವ ಮೊಟೊ G04 ಮೊಬೈಲ್‌ ಅಗ್ಗದ ಬೆಲೆ ಹಾಗೂ ಆಕರ್ಷಕ ಫೀಚರ್‌ನಿಂದ ಗಮನ ಸೆಳೆದಿದೆ. ಅಂದಹಾಗೆ ಈ ಫೋನಿನ ಮೊದಲ ಮಾರಾಟ ಇಂದು (ಫೆ 22 ರಂದು) ಫ್ಲಿಪ್‌ಕಾರ್ಟ್‌ ಮೂಲಕ ಆರಂಭ ಆಗಲಿದೆ.

ಹೌದು, ಮೊಟೊ G04 ಮೊಬೈಲ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದ ಮೂಲಕ ಭಾರತದಲ್ಲಿ ಇಂದು (ಫೆ. 22) ಫಸ್ಟ್‌ ಸೇಲ್‌ ಶುರು ಮಾಡಲಿದೆ. ಈ ಮೊಬೈಲ್‌ ಯುನಿಸೊಕ್ T606 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಇದರೊಂದಿಗೆ 16 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ರಚನೆ ಸಹ ಪಡೆದಿದೆ. ಅಂದಹಾಗೆ ಈ ಮೊಬೈಲ್‌ನ ಆರಂಭಿಕ ಬೆಲೆಯು 6,999ರೂ. ಗಳು ಆಗಿದ್ದು, ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ಲಭ್ಯ.

ಇಂದು ಮೊಟೊ G04 ಫೋನ್‌ ಫಸ್ಟ್‌ ಸೇಲ್‌..ಡಿಸ್ಕೌಂಟ್‌ ಎಷ್ಟಿದೆ ಗೊತ್ತಾ?

ಮೊಟೊ G04 ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪಡೆದಿದ್ದು, ಗ್ರಾಹಕರು ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು ಸುಮಾರು 1 TB ವರೆಗೂ ವಿಸ್ತರಿಸುವ ಸೌಲಭ್ಯ ಇದೆ. ಹಾಗಾದರೇ ಮೊಟೊ G04 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಮೊಟೊ G04 ಮೊಬೈಲ್‌ ಫೀಚರ್ಸ್‌

ಮೊಟೊ ಸಂಸ್ಥೆಯ ಈ ಫೋನ್‌ 6.5 ಇಂಚಿನ LCD ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇಯು 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದರ ಜೊತೆಗೆ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಅನ್ನು ಪಡೆದಿದ್ದು, ಹಾಗೆಯೇ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ.

ಇಂದು ಮೊಟೊ G04 ಫೋನ್‌ ಫಸ್ಟ್‌ ಸೇಲ್‌..ಡಿಸ್ಕೌಂಟ್‌ ಎಷ್ಟಿದೆ ಗೊತ್ತಾ?

ಮೊಟೊ ಕಂಪನಿಯ ಈ ಮೊಬೈಲ್‌ ಯುನಿಸೊಕ್ T606 SoC ಪ್ರೊಸೆಸರ್‌ ಬಲ ಪಡೆದಿದೆ. ಇದು ಮೊಟೊ G034 My UX-ಆಧಾರಿತ ಆಂಡ್ರಾಯ್ಡ್‌ 14 ನಲ್ಲಿ ಕಾರ್ಯ ಮಾಡಲಿದೆ. ಹಾಗೆಯೇ ಇದು 4GB + 64GB ಹಾಗೂ 8GB RAM ಮತ್ತು 128 GB ಸ್ಟೋರೇಜ್‌ ಸಾಮರ್ಥ್ಯ ಪಡೆದಿದೆ. ಇನ್ನು 8GB ವರೆಗಿನ ವರ್ಚುವಲ್ RAM ವಿಸ್ತರಿಸುವುದಕ್ಕೆ ಕೂಡ ಅವಕಾಶ ಇದೆ.

ಈ ಮೊಬೈಲ್‌ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಪಡೆದಿದ್ದು, ಬ್ಯಾಕ್‌ ಪ್ಯಾನೆಲ್‌ LED ಫ್ಲ್ಯಾಷ್‌ ಸೌಲಭ್ಯ ಸಹ ಲಭ್ಯ. ಇದರೊಂದಿಗೆ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪೋರ್ಟ್ರೇಟ್, ಫೋಟೋ, ನೈಟ್ ವಿಷನ್, ಟೈಮರ್, ವಾಟರ್‌ಮಾರ್ಕ್, ವಿಡಿಯೋ ಟೈಮ್‌ಲ್ಯಾಪ್ಸ್, ಸ್ನ್ಯಾಪ್ ಇನ್ ವಿಡಿಯೋ ರೆಕಾರ್ಡಿಂಗ್‌ ಆಯ್ಕೆಗಳು ಇವೆ.

ಮೊಟೊ G04 ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು USB-C ಪೋರ್ಟ್ ಮೂಲಕ 15W ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಅಲ್ಲದೇ ಇದು ಡ್ಯುಯಲ್ ಸಿಮ್ ಸ್ಲಾಟ್, 4G VoLTE, Wi-Fi 802.11ac, ಬ್ಲೂಟೂತ್ 5.0, GPS, ಡಾಲ್ಬಿ Atmos ಬೆಂಬಲದೊಂದಿಗೆ ಸಿಂಗಲ್ ಸ್ಪೀಕರ್ ಹೊಂದಿದೆ. ಇದರೊಂದಿಗೆ 3.5mm ಆಡಿಯೊ ಜ್ಯಾಕ್ ಮತ್ತು ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಂತಹ ಇತರೆ ಫೀಚರ್ಸ್‌ ಕಾಣಬಹುದಾಗಿದೆ.

ಮೊಟೊ G04 ಸ್ಮಾರ್ಟ್‌ಫೋನ್‌ 4GB + 64GB ಸ್ಟೋರೇಜ್‌ ಮಾಡೆಲ್‌ ಬೆಲೆಯು 6,999ರೂ. ಆಗಿದ್ದು, ಇನ್ನು 8GB + 128GB ಸ್ಟೋರೇಜ್‌ ಮಾಡೆಲ್‌ ಬೆಲೆಯು 7,999ರೂ. ಆಗಿದೆ. ಈ ಫೋನ್‌ ಫೆಬ್ರವರಿ 22 ರಿಂದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದ್ದು, ಕಾನ್ಕಾರ್ಡ್ ಬ್ಲಾಕ್, ಸೀ ಗ್ರೀನ್, ಸ್ಯಾಟಿನ್ ಬ್ಲೂ ಮತ್ತು ಸನ್‌ರೈಸ್ ಆರೆಂಜ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Moto G04 sale today in India via Flipkart website. check Price and Offers details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+