ನಾಳೆಯೇ ಗ್ರ್ಯಾಂಡ್ ಎಂಟ್ರಿ ಕೊಡಲಿದೆ ಅಗ್ಗದ ಮೊಟೊ g05 ಸ್ಮಾರ್ಟ್‌ಫೋನ್!
ಮೊಟೊರೊಲಾ ಕಂಪನಿಯ ಬಹುನಿರೀಕ್ಷಿತ ಹೊಸ ಮೊಟೊ G05 ( Moto g05 ) ಮೊಬೈಲ್ ನಾಳೆ (ಜನವರಿ 1 ರಂದು) ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಈ ನೂತನ ಮೊಬೈಲ್ ಸ್ಟೈಲಿಶ್ ಲುಕ್ ಮತ್ತು ಕೆಲವು ಆಕರ್ಷಕ ಫೀಚರ್ಸ್‌ಗಳಿಂದಾಗಿ ಈಗಾಗಲೇ ಮೊಬೈಲ್ ಪ್ರಿಯ ಗ್ರಾಹಕರ ಗಮನ ಸೆಳೆದುಕೊಂಡಿದೆ. ಇನ್ನು ಈ ಫೋನ್ ಎಂಟ್ರಿ ಲೆವೆಲ್ ಮಾದರಿಯ ಮೊಬೈಲ್ ಆಗಿದ್ದು, ಬಿಗ್ ಬ್ಯಾಟರಿ ಆಯ್ಕೆ ಮೂಲಕ ಗಮನ ಸೆಳೆದಿದೆ.
ಹೌದು, ಮೊಟೊ g05 ( Moto g05 ) ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ನಾಳೆ ಲಾಂಚ್ ಆಗಲಿದೆ. ಈ ಬಗ್ಗೆ ದೈತ್ಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಮೈಕ್ರೋ ಪೇಜ್ ಸಹ ತೆರೆದಿದೆ. ಅಂದಹಾಗೆ ಈ ಫೋನ್ ಮೀಡಿಯಾ ಟೆಕ್‌ನ ಹೆಲಿಯೊ G81 ಎಕ್ಸ್‌ಟ್ರೀಮ್ ಪ್ರೊಸೆಸರ್ ಸೌಲಭ್ಯ ಪಡೆದಿರುವುದು ಖಚಿತ ಆಗಿದೆ.

ಹಾಗೆಯೇ ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಡ್ಯುಯಲ್ ಡಾಲ್ಬಿ ಅಟ್ಮೋಸ್ ಸ್ಟಿರಿಯೋ ಸ್ಪೀಕರ್ಸ್ ಸೌಲಭ್ಯ ಇರಲಿದೆ ನಿರೀಕ್ಷಿಸಲಾಗಿದೆ. ಹಾಗಾದರೇ ಮೊಟೊ g05 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಸಲಾಗಿದೆ ಓದಿರಿ.
ಮೊಟೊ g05 ಮೊಬೈಲ್ - ಫೀಚರ್ಸ್
ಮೊಟೊ g05 ಮೊಬೈಲ್ 6.67 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿರಲಿದ್ದು, ಇದು ಪಂಚ್ ಹೋಲ್ ಶೈಲಿಯ ಐಪಿಎಸ್ LCD ಡಿಸ್‌ಪ್ಲೇ ಮಾದರಿಯಲ್ಲಿ ಇರಲಿದೆ. ಈ ಸ್ಕ್ರೀನ್ 1612 x 720 ಪಿಕ್ಸೆಲ್ ರೆಸಲ್ಯೂಶನ್, 90 Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಪೋರ್ಟ್ ಪಡೆದಿರಲಿದ್ದು, ಇದು ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಸಹ ಹೊಂದಿರಲಿದೆ.
ಮೊಟೊ g05 ಮೊಬೈಲ್ ಮೀಡಿಯಾ ಟೆಕ್‌ನ ಹೆಲಿಯೊ G81 ಎಕ್ಸ್‌ಟ್ರೀಮ್ ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದ ಪಡೆದಿರಲಿದೆ. ಹಾಗೆಯೇ ಇದು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡಲಿದೆ. ಇಲ್ಲದೇ ಇದು 4 GB RAM + 64 GB ವೇರಿಯಂಟ್ ಆಯ್ಕೆ ಅನ್ನು ಪಡೆದಿರಲಿದೆ. RAM ಬೂಸ್ಟ್ ತಂತ್ರಜ್ಞಾನದ ಮೂಲಕ 12GB RAM ವರೆಗೆ ಹೆಚ್ಚಿಸಬಹುದು. ಇದು 8GB ವರ್ಚುವಲ್ RAM ಹೊಂದಿರಲಿದೆ
ಮೊಟೊ g05 ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದೆ. ಈ ಫೋನಿನಲ್ಲಿ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದ್ದು, ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಲೆನ್ಸ್ ಪಡೆದಿರಲಿದೆ. ಹಾಗೆಯೇ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ ಫೋನ್ 8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯ ಸಹ ಪಡೆದಿರಲಿದೆ.
ಮೊಟೊ g05 ಮೊಬೈಲ್ 5,200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆರಲಿದ್ದು, 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಇರಲಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, 39 ಗಂಟೆಯ ಟಾಕ್‌ಟೈಮ್, 70 ಗಂಟೆಗಳ ವರೆಗೆ ಮ್ಯೂಸಿಕ್ ಪ್ಲೇ ಬ್ಯಾಕ್ ಸೌಲಭ್ಯ ಒದಗಿಸಲಿದೆ. ಹಾಗೆಯೇ ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP52 ರೇಟಿಂಗ್ ಪಡೆದಿದ್ದು, ಜೊತೆಗೆ ಡ್ಯುಯಲ್ ಡಾಲ್ಬಿ ಅಟ್ಮಾಸ್ ಸ್ಟೀರಿಯೋ ಸ್ಪೀಕರ್‌ಗಳನ್ನು ಒಳಗೊಂಡಿದೆ.


Click it and Unblock the Notifications








