Home
ಸುದ್ದಿಜಾಲ

ಸದ್ದಿಲ್ಲದೆ ಬೆಲೆ ಇಳಿಕೆ ಕಂಡ ಮೊಟೊ G13!..ಗ್ರಾಹಕರಿಗೆ ಉಳಿತಾಯ ಗ್ಯಾರಂಟಿ!

ಮೊಟೊರೊಲಾ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಮೊಟೊ G13 ಸ್ಮಾರ್ಟ್‌ಫೋನ್‌ ಇದೀಗ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಗ್ರಾಹಕರನ್ನು ಸೆಳೆದಿದ್ದ ಈ ಫೋನ್‌ ಈಗ ಡಿಸ್ಕೌಂಟ್‌ ಪಡೆದಿದ್ದು, ಮತ್ತೊಮ್ಮೆ ಗ್ರಾಹಕರನ್ನು ಆಕರ್ಷಿಸಿದೆ. ಈ ಫೋನ್‌ 4GB + 64GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಹೌದು, ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ನಲ್ಲಿ ಮೊಟೊ, ಸ್ಮಾರ್ಟ್‌ಫೋನ್‌ 28% ರಷ್ಟು ರಿಯಾಯಿತಿ ಪಡೆದಿದ್ದು, 9,999ರೂ. ಗಳ ದರದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್‌ಗಳಿಂದಲೂ ಡಿಸ್ಕೌಂಟ್‌ ದೊರೆಯುತ್ತದೆ. ಅಲ್ಲದೇ ಆಕರ್ಷಕ ಎಕ್ಸ್‌ಚೇಂಜ್ ಕೊಡುಗೆಯನ್ನು ಸಹ ಗ್ರಾಹಕರು ಪಡೆಯಬಹುದಾಗಿದೆ.

ಸದ್ದಿಲ್ಲದೆ ಬೆಲೆ ಇಳಿಕೆ ಕಂಡ ಮೊಟೊ G13!..ಗ್ರಾಹಕರಿಗೆ ಉಳಿತಾಯ ಗ್ಯಾರಂಟಿ!

ಹಾಗೆಯೇ ಈ ಫೋನ್‌ ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, ಇದಲ್ಲದೇ ಈ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 10W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಒಳಗೊಂಡಿದೆ. ಹಾಗಾದರೆ ಈ ಫೋನಿನ ಇನ್ನಷ್ಟು ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊ G13 ಡಿಸ್‌ಪ್ಲೇ ಮತ್ತು ವಿನ್ಯಾಸ: ಈ ಸ್ಮಾರ್ಟ್‌ಫೋನ್ 6.5 ಇಂಚಿನ IPS LCD ಹೆಚ್‌ಡಿ+ ರೆಸಲ್ಯೂಶನ್‌ ಡಿಸ್‌ಪ್ಲೇ ಹೊಂದಿದ್ದು, ಇದು 576Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಹೊಂದಿದೆ. ಹಾಗೆಯೇ 90Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ ಈ ಡಿಸ್‌ಪ್ಲೇ ಪಾಂಡ ಗ್ಲಾಸ್ ರಕ್ಷಣೆಯನ್ನು ಪಡೆದುಕೊಂಡಿದೆ.

ಸದ್ದಿಲ್ಲದೆ ಬೆಲೆ ಇಳಿಕೆ ಕಂಡ ಮೊಟೊ G13!..ಗ್ರಾಹಕರಿಗೆ ಉಳಿತಾಯ ಗ್ಯಾರಂಟಿ!

ಮೊಟೊ G13 ಪ್ರೊಸೆಸರ್‌ ಪವರ್‌ : ಮೊಟೊ G13 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಓಎಸ್‌ ನಲ್ಲಿ ರನ್ ಆಗುತ್ತದೆ. ಇದರೊಂದಿಗೆ 4 GB RAM ಹಾಗೂ 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ನೀಡಲಾಗಿದ್ದು, ಈ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಲು ಎಸ್‌ಡಿ ಕಾರ್ಡ್‌ ಸ್ಲಾಟ್‌ ಆಯ್ಕೆ ಅನ್ನು ಒದಗಿಸಲಾಗಿದೆ.

ಮೊಟೊ G13 ಡ್ಯುಯಲ್‌ ಕ್ಯಾಮೆರಾ : ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಸೆಕೆಂಡರಿ ಸೆನ್ಸರ್‌ ಹಾಗೂ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ ಅನ್ನು ಪಡೆದಿದೆ. ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಮೊಟೊ G13 ಬ್ಯಾಟರಿ ಬ್ಯಾಕ್‌ಅಪ್‌: ಮೊಟೊ G13 ಫೋನ್‌ನ ಬ್ಯಾಟರಿ ಬ್ಯಾಕ್‌ಅಪ್‌ ಮಾಹಿತಿ ನೋಡುವುದಾದರೆ, ಈ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿಯಿಂದ ಭರ್ತಿ ಆಗಿದ್ದು, 10W ಚಾರ್ಜಿಂಗ್‌ ಬೆಂಬಲ ಪಡೆದಿದೆ. ತನ್ನ ವರ್ಗದಲ್ಲೇ ಇದು ಉತ್ತಮ.

ಮೊಟೊ G13 ಇತರೆ ಸೌಲಭ್ಯಗಳು: ಈ ಫೋನ್ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಹೊಂದಿದ್ದು, ಚಾರ್ಜಿಂಗ್‌ ಗಾಗಿ ಯುಎಸ್‌ಬಿ ಟೈಪ್‌ ಸಿ ಚಾರ್ಜಿಂಗ್ ಪೋರ್ಟ್‌ ಹೊಂದಿದೆ. ಇದರೊಂದಿಗೆ ಡ್ಯುಯಲ್ 4G VoLTE, ವೈ ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, ಜಿಪಿಎಸ್‌ ಹೊಂದಿದ್ದು, 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ ಗಳು, ಡಾಲ್ಬಿ ಅಟ್ಮಾಸ್ ಸೌಂಡ್‌ ನೊಂದಿಗೆ IP52 ರೇಟಿಂಗ್‌ ಪಡೆದಿದೆ.

Best Mobiles in India

English summary
Fantastic offer available for Moto G13 on Flipkart. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+