ಸದ್ಯದಲ್ಲೇ ಅಗ್ಗದ ದರದಲ್ಲಿ ಎಂಟ್ರಿ ಕೊಡಲಿದೆ ಮೊಟೊ G20 ಸ್ಮಾರ್ಟ್‌ಫೋನ್‌!

|

ಜನಪ್ರಿಯ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಮೊಟೊರೊಲಾ ಕಂಪೆನಿಯ ತನ್ನ ಮೊಟೊ G ಸರಣಿಯಲ್ಲಿ ಭಿನ್ನ ಪ್ರೈಸ್‌ನಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ಸೆಳೆದಿದೆ. ಕಂಪನಿಯು ಈಗ ಮೊಟೊ G ಸರಣಿಯಲ್ಲಿ ನೂತನವಾಗಿ ಮೊಟೊ G20 ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲು ತಯಾರಿ ನಡೆಸಿದೆ. ಹೊಸದಾಗಿ ಲಾಂಚ್ ಆಗಲಿರುವ ಈ ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್‌ ಮಾಡೆಲ್‌ ಆಗಿರಲಿದೆ ಎಂದು ಹೇಳಲಾಗಿದೆ.

ತಯಾರಿ

ಹೌದು, ಮೊಟೊರೊಲಾ ಕಂಪೆನಿ ಸದ್ಯದಲ್ಲಿ ನೂತನವಾಗಿ ಮೊಟೊ G20 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48 ಎಂಪಿ ಸೆನ್ಸಾರ್‌ನಲ್ಲಿರಲಿದೆ ಎನ್ನುತ್ತಿವೆ ಲೀಕ್ ಮಾಹಿತಿಗಳು. ಇದರೊಂದಿಗೆ 5,000mAh ಬ್ಯಾಟರಿ ಬಾಳಿಕೆ ಪಡೆದಿರುವುದು ಮತ್ತೊಂದು ಹೈಲೈಟ್‌ ಆಗಿದೆ. ಇದಲ್ಲದೇ 4GB RAM + 64GB ಸ್ಟೋರೇಜ್‌ ಸಾಮರ್ಥ್ಯದ ಸಿಂಗಲ್ ವೇರಿಯಂಟ್‌ ಆಯ್ಕೆಯನ್ನು ಹೊಂದಿರುವ ಸಾಧ್ಯತೆಗಳು ಇವೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿರಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಮೊಟೊ G20 ಡಿಸ್‌ಪ್ಲೇ ರಚನೆ

ಮೊಟೊ G20 ಡಿಸ್‌ಪ್ಲೇ ರಚನೆ

ಮೊಟೊ G20 ಸ್ಮಾರ್ಟ್‌ಫೋನ್‌ 720x1,200 ಪಿಕ್ಸಲ್ ರೆಸಲ್ಯೂಶನ್ ಸಫೋರ್ಟ್‌ ಪಡೆದಿರಲಿದ್ದು, 6.5 ಇಂಚಿನ IPS LCD ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಪಡೆದಿರಲಿದೆ. ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿರಲಿದೆ. ಇನ್ನು ಡಿಸ್‌ಪ್ಲೇ ಅನುಪಾತವು 20:9 ಆಗಿರಲಿದೆ. ಹಾಗೆಯೇ ಪ್ರತಿ ಇಂಚಿನ ಡಿಸ್‌ಪ್ಲೇ ಪಿಕ್ಸಲ್ ಸಾಂದ್ರತೆಯು 269 PPI ಆಗಿರಲಿದೆ.

ಮೊಟೊ G20 ಪ್ರೊಸೆಸರ್‌ ಯಾವುದು

ಮೊಟೊ G20 ಪ್ರೊಸೆಸರ್‌ ಯಾವುದು

ಮೊಟೊ G20 ಸ್ಮಾರ್ಟ್‌ಫೋನ್‌ Unisoc T700 SoC ಪ್ರೊಸೆಸರ್‌ ವೇಗವನ್ನು ಹೊಂದಿರಲಿದೆ. ಅಲ್ಲದೆ ಇತ್ತೀಚಿನ ನೂತನ ಆಂಡ್ರಾಯ್ಡ್‌ ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 4GB RAM + 64GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಯನ್ನು ಹೊಂದಿರುವ ಸಾಧ್ಯತೆಗಳಿವೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ವಿಸ್ತರಣೆಗೆ ಅವಕಾಶ ನೀಡುವ ಆಯ್ಕೆ ಇರಲಿದೆ.

ಮೊಟೊ G20 ಕ್ವಾಡ್ ಕ್ಯಾಮೆರಾ ಸೆನ್ಸಾರ್

ಮೊಟೊ G20 ಕ್ವಾಡ್ ಕ್ಯಾಮೆರಾ ಸೆನ್ಸಾರ್

ಮೊಟೊ G20 ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿರುವುದು ಬಹುತೇಕ ಖಚಿತವಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿರಲಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ಮೂರನೇ ಕ್ಯಾಮೆರಾ ಹಾಗೂ ನಾಲ್ಕನೇ ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್‌ ಅನ್ನು ಹೊಂದಿರಲಿವೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿರಲಿದೆ.

ಮೊಟೊ G20 ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಮೊಟೊ G20 ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಮೊಟೊ G20 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿರಲಿದೆ. ಹಾಗೆಯೇ 10W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರುವ ನಿರೀಕ್ಷೆಗಳಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ, ವೈ-ಫೈ, ಬ್ಲೂಟೂತ್ 5.0, ಎನ್‌ಎಫ್‌ಸಿ, ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿವೆ.

Best Mobiles in India

English summary
Moto G20 may feature a 6.5-inch HD+ 90Hz display.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X