Moto: ಮೊಟೊ G24 ಪವರ್, G34 ಸ್ಮಾರ್ಟ್‌ಫೋನ್ ಫೀಚರ್ಸ್ ಲೀಕ್! ಆಕರ್ಷಕ ವಿನ್ಯಾಸ
ಮೊಟೊರೊಲಾ (Motorola) ಈಗಾಗಲೇ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದ್ದು, ಈ ಫೋನ್‌ಗಳು ಕಡಿಮೆ ಬೆಲೆ ಹೊಂದಿದ್ದರೂ ಸಹ ಬಳಕೆದಾರರಿಗೆ ಪ್ರೀಮಿಯಂ ಅನುಭವ ನೀಡುವ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಅದರಂತೆ ಈಗ ಮೊಟೊ (Moto) ಮತ್ತೆರಡು ಹೊಸ ಫೋನ್‌ಗಳನ್ನು ಆಕರ್ಷಕ ಫೀಚರ್ಸ್‌ನೊಂದಿಗೆ ಲಾಂಚ್ ಮಾಡಲು ಸಜ್ಜಾಗಿದೆ.
ಹೌದು, ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಮೊಟೊ ಫೋನ್‌ಗಳಿಗೆ ಭರ್ಜರಿ ಬೇಡಿಕೆ ಇದ್ದು, ಸಾಕಷ್ಟು ಜನರು ಹೊಸ ಮೊಟೊ ಫೋನ್‌ಗಳಿಗೆ ಅಪ್‌ಗ್ರೇಡ್ ಆಗಲು ಕಾತುರದಿಂದ ಕಾಯುತ್ತಿದ್ದಾರೆ. ಅದರಂತೆ ಈಗ ಮೊಟೊರೊಲಾ ಎರಡು ಬಜೆಟ್ ಫೋನ್‌ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ಅದುವೇ ಮೊಟೊ G24 ಪವರ್ ಮತ್ತು ಮೊಟೊ G34 (Moto G24 Power, Moto G34) ಸ್ಮಾರ್ಟ್‌ಫೋನ್. ಈ ಫೋನ್‌ಗಳ ಬಗ್ಗೆ ಕೆಲವು ಮಾಹಿತಿ ಲೀಕ್ ಆಗಿದ್ದು, ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಸುಂಟರಗಾಳಿ ಎಬ್ಬಿಸಲಿದೆ ಎನ್ನಲಾಗಿದೆ. ಹಾಗಿದ್ರೆ, ಲೀಕ್ ಮಾಹಿತಿ ಪ್ರಕಾರ ಈ ಫೋನ್‌ನ ಫೀಚರ್ಸ್ ಏನು ಅನ್ನೋದನ್ನು ನೋಡೋಣ ಬನ್ನಿ.

ಮೊಟೊದ ಹೊಸ ಫೋನ್‌ಗಳು: ಮೊಟೊ G24 ಪವರ್‌ಮತ್ತು ಮೊಟೊ G34 ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಹಾಗೂ ಕೆಲವು ಮಾಹಿತಿ ಲೀಕ್ ಆಗಿವೆ. ಈ ಎರಡೂ ಫೋನ್‌ಗಳು ಸಹ ಶೀಘ್ರದಲ್ಲೇ ಯುರೋಪಿಯನ್ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎನ್ನಲಾಗಿದೆ. ಇನ್ನು G24 ಪವರ್ ಕ್ಲಾಸಿಕ್ ಮೊಟೊ G ಸರಣಿಯ ಶೈಲಿಯನ್ನೇ ಹೊಂದಿರಲಿದೆ ಎಂದು ಹೇಳಲಾಗಿದ್ದು, ಕರ್ವ್ಡ ಅಂಚುಗಳೊಂದಿಗೆ ಬರಲಿದೆ ಎನ್ನಲಾಗಿದೆ.
ಜೊತೆಗೆ ಹೊಳೆಯುವ ರಿಯರ್ ಪ್ಯಾನಲ್‌ನೊಂದಿಗೆ ಮಧ್ಯದಲ್ಲಿ ಲೋಗೋ ಕಾಣಿಸಿಕೊಳ್ಳಲಿದ್ದು, 50 ಮೆಗಾಪಿಕ್ಸೆಲ್ ಮುಖ್ಯ ಲೆನ್ಸ್ ಅನ್ನು ಹೊಂದಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಈ ಫೋನ್‌ನ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾಕ್ಕಾಗಿ ಪಂಚ್-ಹೋಲ್ ಕಟೌಟ್ ಆಯ್ಕೆ ನೀಡಲಾಗಿದೆ ಎಂದು ಹೇಳಲಾಗಿದ್ದು, ಸ್ವಲ್ಪ ದಪ್ಪ ಗಾತ್ರ ಹೊಂದಿರಲಿದೆ ಎಂಬ ಮಾಹಿತಿ ವರದಿಗಳಲ್ಲಿ ಉಲ್ಲೇಖ ಆಗಿದೆ.
ಹಾಗೆಯೇ ಬಲ ಅಂಚಿನಲ್ಲಿ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಆಯ್ಕೆ ಪಡೆಯಲಿದ್ದು, ಎಡಭಾಗದಲ್ಲಿ ಸಿಮ್ ಟ್ರೇ ಆಯ್ಕೆ ನೀಡಲಾಗಿದೆ ಎಂದು ಹೇಳಲಾಗಿದೆ. ಇದರೊಂದಿಗೆ, ಯುಎಸ್‌ಬಿ ಟೈಪ್- ಸಿ ಚಾರ್ಜಿಂಗ್ ಪೋರ್ಟ್ ಆಯ್ಕೆ ಹಾಗೂ ಸ್ಪೀಕರ್ ಮತ್ತು ಹೆಡ್‌ಫೋನ್ ಜ್ಯಾಕ್ ಆಯ್ಕೆ ಕೆಳಗೆ ಇದ್ದು, ಈ ಫೋನ್ ಬೆಳ್ಳಿ ಮತ್ತು ಗಾಢ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎಂದು ಉಲ್ಲೇಖಿಸಲಾಗಿದೆ.

ಇನ್ನು ಮೊಟೊದ ಮತ್ತೊಂದು ಫೋನ್ ಆದ ಮೊಟೊ G34 ಬಗ್ಗೆ ಲೀಕ್ ಮಾಹಿತಿ ಪ್ರಕಾರ ಹೇಳುವುದಾದರೆ, ಈ ಫೋನ್ ಕಪ್ಪು ನೀಲಿ ರೂಪಾಂತರದಲ್ಲಿ ಫಾಕ್ಸ್ ಲೆದರ್‌ನೊಂದಿಗೆ ಬರುತ್ತದೆ. ಎನ್ನಲಾಗಿದೆ. ಅದಾಗ್ಯೂ ಇದು ಹೊಳೆಯುವ ಫಿನಿಶ್‌ನೊಂದಿಗೆ ತಿಳಿ ನೀಲಿ ಆಯ್ಕೆಯಲ್ಲೂ ಕಾಣಿಸಿಕೊಳ್ಳಲಿದೆ ಎಂದು ಊಹಿಸಲಾಗಿದೆ. G24 ಪವರ್‌ನಂತೆ, ಈ G34 ಸಹ 50 ಮೆಗಾಪಿಕ್ಸೆಲ್ ಮುಖ್ಯ ಸೆನ್ಸರ್ ಆಯ್ಕೆ ಪಡೆಯಲಿದೆ ಎಂದು ತಿಳಿದುಬಂದಿದೆ.
ಇದರೊಂದಿಗೆ ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆಯಲಿದೆ ಎನ್ನಲಾಗಿದ್ದು, ನಿಮಗೆ ಅಗತ್ಯವಿರುವ ಎಲ್ಲಾ ಫೀಚರ್ಸ್ ಅನ್ನು ಇದು ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಸ್ಪೀಕರ್ ಆಯ್ಕೆ ಇದ್ದು, ಈ ಫೋನ್‌ಗಳನ್ನು ಖರೀದಿ ಮಾಡಲು ಈಗಾಗಲೇ ಗ್ರಾಹಕರು ಕಾತುರದಿಂದ ಇದ್ದಾರೆ ಎಂದು ತಿಳಿದುಬಂದಿದೆ.

ವಿಷಯ ಏನೆಂದರೆ ಮೊಟೊರೊಲಾ ಅಧಿಕೃತವಾಗಿ ಈ ಸ್ಮಾರ್ಟ್‌ಫೋನ್‌ಗಳ ಲಾಂಚ್ ಬಗ್ಗೆ ಅಥವಾ ಇತರೆ ಫೀಚರ್ಸ್ ಬಗ್ಗೆ ಮಾಹಿತಿ ನೀಡಿಲ್ಲ. ಆದಾಗ್ಯೂ, ಈ ಫೋನ್ ಬಗ್ಗೆ ಮಾಹಿತಿ ಲೀಕ್ ಆಗಿರುವುದರಿಂದ, ಲಾಂಚ್ ಬಗ್ಗೆ ಪ್ರಮಾಣೀಕರಣ ಸೈಟ್‌ಗಳಲ್ಲಿ ಶೀಘ್ರದಲ್ಲೇ ಪಾಪ್ ಅಪ್ ಆಗುವುದನ್ನು ನಾವು ನಿರೀಕ್ಷಿಸಬಹುದು.


Click it and Unblock the Notifications








