ಮೊಟೊ G30 ಮತ್ತು ಮೊಟೊ E7 ಪವರ್ ಫೋನ್‌ಗಳ ಫೀಚರ್ಸ್‌ ಲೀಕ್!

|

ಸ್ಮಾರ್ಟ್‌ಫೊನ್‌ ವಲಯದಲ್ಲಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಮೊಟೊರೊಲಾ ಸಂಸ್ಥೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ವೈವಿಧ್ಯಮಯ ಸ್ಮಾರ್ಟ್‌ಫೊನ್‌ಗಳನ್ನ ಪರಿಚಯಿಸಿ ತನ್ನ ಸ್ಥಾನವನ್ನ ಭದ್ರಪಡಿಸಿಕೊಂಡಿರುವ ಮೊಟೊ ಸಂಸ್ಥೆಯು ಇದೀಗ ಮತ್ತೆ ಹೊಸದಾಗಿ ಎರಡು ಸ್ಮಾರ್ಟ್‌ಫೋನ್ ಅನಾವರಣಕ್ಕೆ ಸಜ್ಜಾಗುತ್ತಿದೆ. ಅವುಗಳು ಮೊಟೊ G30 ಮತ್ತು ಮೊಟೊ E7 ಪವರ್ ಸ್ಮಾರ್ಟ್‌ಫೋನ್‌ಗಳಾಗಿವೆ.

ಮೊಟೊ

ಹೌದು, ಮೊಟೊರೊಲಾ ಕಂಪೆನಿ ನೂತನವಾಗಿ ಮೊಟೊ G30 ಮತ್ತು ಮೊಟೊ E7 ಪವರ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಾಗಿದ್ದು, ಅವುಗಳ ಕೀ ಫೀಚರ್ಸ್‌ ಮಾಹಿತಿ ಈಗ ಬಹಿರಂಗವಾಗಿವೆ. ಇವುಗಳಲ್ಲಿ ಮೊಟೊ G30 ಸ್ಮಾರ್ಟ್‌ಫೋನ್ ಹೈ ಎಂಡ್‌ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ. ಹಾಗೆಯೇ ಮೊಟೊ E7 ಪವರ್ ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್‌ ಮಾದರಿಯಲ್ಲಿ ಅನಾವರಣಗೊಳ್ಳಲಿದೆ ಎನ್ನಲಾಗಿದೆ. ಹಾಗಾದರೇ ಲೀಕ್ ಮಾಹಿತಿಯಂತೆ ಈ ಎರಡು ಫೋನ್‌ಗಳ ಫೀಚರ್ಸ್‌ ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ ಮತ್ತು ರಚನೆ

ಡಿಸ್‌ಪ್ಲೇ ವಿನ್ಯಾಸ ಮತ್ತು ರಚನೆ

ಮೊಟೊ G30 ಸ್ಮಾರ್ಟ್‌ಫೋನ್‌ 1,600x720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.5 ಇಂಚಿನ ಫುಲ್‌-ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿರಲಿದೆ. ಅದೇ ರೀತಿ ಮೊಟೊ E7 ಪವರ್ ಸ್ಮಾರ್ಟ್‌ಫೋನ್ ಸಹ 1,600x720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.5 ಇಂಚಿನ ಫುಲ್‌-ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ.

ಯಾವ ಪ್ರೊಸೆಸರ್‌ ಇರಲಿದೆ

ಯಾವ ಪ್ರೊಸೆಸರ್‌ ಇರಲಿದೆ

ಮೊಟೊ G30 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 662 SoC.ಪ್ರೊಸೆಸರ್‌ ಇರಲಿದ್ದು, ಆಂಡ್ರಾಯ್ಡ್‌ 11 ಓಎಸ್‌ ಬೆಂಬಲ ಪಡೆದಿರಲಿದೆ. ಜೊತೆಗೆ 6GB RAM ಮತ್ತು 128GB ಸ್ಟೋರೇಜ್ ಆಯ್ಕೆ ಹೊಂದಿರಲಿದೆ. ಅದೇ ರೀತಿ ಮೊಟೊ E7 ಪವರ್ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G25 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್‌ ಇರಲಿದೆ. ಜೊತೆಗೆ 64GB ಸ್ಟೋರೇಜ್ ಆಯ್ಕೆ ಒಳಗೊಂಡಿರಲಿದೆ.

ಕ್ಯಾಮೆರಾ ಸೆನ್ಸಾರ್ ಎಷ್ಟು

ಕ್ಯಾಮೆರಾ ಸೆನ್ಸಾರ್ ಎಷ್ಟು

ಮೊಟೊ G30 ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8ಎಂಪಿ ಸೆನ್ಸಾರ್‌ ಮತ್ತು ಮೂರನೇ ಹಾಗೂ ನಾಲ್ಕನೇಯ ಕ್ಯಾಮೆರಾ ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಇರಲಿದೆ. ಹಾಗೆಯೇ ಮೊಟೊ E7 ಪವರ್ ಸ್ಮಾರ್ಟ್‌ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿರಲಿದ್ದು, ಅವು ಕ್ರಮವಾಗಿ 13ಎಂಪಿ + 2ಎಂಪಿ ಸೆನ್ಸಾರ್‌ನಲ್ಲಿರಲಿವೆ. ಜೊತೆಗೆ ಸೆಲ್ಫಿ ಕ್ಯಾಮೆರಾವು 5ಎಂಪಿ ಆಗಿರಲಿದೆ.

ಬ್ಯಾಟರಿ ಬ್ಯಾಕ್‌ಅಪ್‌

ಬ್ಯಾಟರಿ ಬ್ಯಾಕ್‌ಅಪ್‌

ಮೊಟೊ G30 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಹಾಟ್‌ಸ್ಪಾಟ್‌, ಬ್ಲೂಟೂತ್‌, ಅನ್ನು ಬೆಂಬಲಿದೆ. ಇನ್ನು ಮೊಟೊ E7 ಪವರ್ ಸ್ಮಾರ್ಟ್‌ಫೋನ್ ಸಹ 5,000mAh ಸಾಮರ್ಥ್ಯದ ಬ್ಯಾಟರಿ ಪವರ್‌ ಅನ್ನು ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಈ ಫೋನ್‌ಗಳು ಕೆಂಪು ಮತ್ತು ನೀಲಿ ಬಣ್ಣಗಳ ಆಯ್ಕೆ ಪಡೆದಿರಲಿವೆ.

Best Mobiles in India

English summary
Moto G30 and Moto E7 Power renders have surfaced online, along with some specifications of the upcoming Motorola smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X