ಭಾರತದಲ್ಲಿ ಮೋಟೋ G34 5G ಲಾಂಚ್ ಡೇಟ್ ಬಹಿರಂಗ: ಫೀಚರ್ಸ್ ನಿರೀಕ್ಷೆ ಏನು?
ಈಗಾಗಲೇ ಟೆಕ್ ವಲಯದಲ್ಲಿ ಹಲ್‌ಚಲ್ ಎಬ್ಬಿಸಿರುವ ಮೋಟೋ G34 5G ಸ್ಮಾರ್ಟ್‌ಫೋನ್ ಭಾರತಕ್ಕೆ ಎಂಟ್ರಿ ನೀಡಲು ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್ ಇದೇ ಜನವರಿ 9 ರಂದು ಭಾರತದಲ್ಲಿ ಲಾಂಚ್ ಆಗಲಿದೆ ಎಂದು ಫ್ಲಿಪ್‌ಕಾರ್ಟ್ ಬಹಿರಂಗಪಡಿಸಿದೆ. ಇದಕ್ಕಾಗಿ ಮೀಸಲಾದ ಮೈಕ್ರೋಸೈಟ್‌ನಲ್ಲಿ ಫೋನ್ ಫೀಚರ್ಸ್‌ಗಳನ್ನು ಬಹಿರಂಗಪಡಿಸಿದೆ.
ಹೌದು, Moto G34 5G ಸ್ಮಾರ್ಟ್‌ಫೋನ್ ಮುಂದಿನ ವಾರ ಭಾರತದಲ್ಲಿ ಬಿಡುಗಡೆಯಾಗಲಿದೆ. ಚೀನಾದಲ್ಲಿ ಅಬ್ಬರಿಸುತ್ತಿರುವ ಈ ಸ್ಮಾರ್ಟ್‌ಫೋನ್ ಭಾರತದಲ್ಲಿಯೂ ಸಹ ಧೂಳೆಬ್ಬಿಸುವ ಸೂಚನೆ ನೀಡಿದೆ. ಇದರ ಭಾರತದ ರೂಪಾಂತರವನ್ನು ವೇಗನ್ ಲೇದರ್ ಫಿನಿಶ್‌ನಲ್ಲಿ ನೀಡಲಾಗುವುದು ಎನ್ನಲಾಗಿದೆ. ಇದು ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ Moto G34 5G ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್ ನಿರೀಕ್ಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೋಟೋ G34 5G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಮೋಟೋ G34 5G ಸ್ಮಾರ್ಟ್‌ಫೋನ್ 1600×720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು ಪಂಚ್-ಹೋಲ್ ವಿನ್ಯಾಸದೊಂದಿಗೆ ಬರುವ ಫ್ಲಾಟ್ ಡಿಸ್‌ಪ್ಲೇ ಆಗಿರಲಿದೆ. ಇದಲ್ಲದೆ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ.
ಮೋಟೋ G34 5G ಪ್ರೊಸೆಸರ್ ನಿರೀಕ್ಷೆ?
ಮೋಟೋ G34 5G ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ನಲ್ಲಿ ರನ್ ಆಗಲಿದೆ. ಹಾಗೆಯೇ 8GB RAM ಮತ್ತು 128GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರಲಿದೆ. ಈ ಹ್ಯಾಂಡ್‌ಸೆಟ್ ವರ್ಚುವಲ್ RAM ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ. ಇದರೊಂದಿಗೆ ಮೈಕ್ರೊ SD ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಮೋಟೋ G34 5G ಕ್ಯಾಮೆರಾ ರಚನೆ
ಮೋಟೋ G34 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗುತ್ತದೆ ಎಂದು ವರದಿಯಾಗಿದೆ.
ಮೋಟೋ G34 5G ಬ್ಯಾಟರಿ ಮತ್ತು ಇತರೆ ಸೌಲಭ್ಯ
ಮೋಟೋ G34 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 18W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರಲಿದೆ. ಇದಲ್ಲದೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು IP52 ರೇಟೆಡ್ ಬಿಲ್ಡ್ ಅನ್ನು ಒಳಗೊಂಡಿದೆ.

ಭಾರತದಲ್ಲಿ Moto G34 5G ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Moto G34 5G ಬೆಲೆ ಬಹಿರಂಗವಾಗಿಲ್ಲ, ಆದರೆ ಪ್ರಸ್ತುತ ಚೀನಾದಲ್ಲಿ 8GB RAM + 128GB ಸ್ಟೋರೇಜ್ ಆಯ್ಕೆಯು CNY 999 (ಸುಮಾರು 11,600ರೂ)ಬೆಲೆಯನ್ನು ಹೊಂದಿದೆ. ಭಾರತೀಯ ಆವೃತ್ತಿಯು ಹೆಚ್ಚುವರಿ 4GB RAM + 128GB ಸ್ಟೋರೇಜ್ ಕಾನ್ಫಿಗರೇಶನ್‌ನಲ್ಲಿ ಲಭ್ಯವಿದೆ ಎಂದು ದೃಢಪಡಿಸಲಾಗಿದೆ. ಭಾರತೀಯ ರೂಪಾಂತರದ ಬೆಲೆಯು ಚೀನೀ ಬೆಲೆಗೆ ಅನುಗುಣವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಂದರೆ ಭಾರತದಲ್ಲಿ ಈ ಸ್ಮಾರ್ಟ್ಫೋನ್ ಬಜೆಟ್ ಬೆಲೆಯಲ್ಲಿ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ. ಇದನ್ನು ಚೀನಾದಲ್ಲಿ ಸ್ಟಾರ್ ಬ್ಲ್ಯಾಕ್ ಮತ್ತು ಸೀ ಬ್ಲೂ ಕಲರ್ ಆಯ್ಕೆಗಳಲ್ಲಿ ನೀಡಲಾಗುತ್ತಿದೆ. ಭಾರತದಲ್ಲಿ ಕಲರ್ ಆಯ್ಕೆಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications








