ದಿಢೀರ್ ಬೆಲೆ ಇಳಿಕೆ ಕಂಡ ಮೊಟೊ G52 ಫೋನ್!..ಭಾರೀ ಉಳಿತಾಯ!
ಮೊಟೊರೊಲಾ ಸಂಸ್ಥೆಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಪೈಕಿ ಒಂದಾದ ಮೊಟೊ G52 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇದೀಗ ದಿಢೀರ್ ಬೆಲೆ ಇಳಿಕೆ ಆಗಿದೆ. ಈ ಫೋನ್ 4GB + 64GB ಮತ್ತು 6GB + 128 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದ್ದು, ಈ ಎರಡು ವೇರಿಯಂಟ್‌ಗಳ ಬೆಲೆಯಲ್ಲಿ ಭರ್ಜರಿ ದರ ಕಡಿತ ಆಗಿದೆ.
ಹೌದು, ಮೊಟೊರೊಲಾ ಕಂಪೆನಿ ಮೊಟೊ G52 ಸ್ಮಾರ್ಟ್‌ಫೋನ್ 4GB + 64GB ಬೆಲೆಯಲ್ಲಿ 3,500ರೂ. ಗಳ ಇಳಿಕೆ ಹಾಗೂ 6GB + 128 GB ಬೆಲೆಯಲ್ಲಿ 5,500ರೂ. ಗಳ ಕಡಿತ ಆಗಿದೆ. ಬೆಲೆ ಇಳಿಕೆ ಬಳಿಕ ಈ ಎರಡು ವೇರಿಯಂಟ್ ಫೋನ್‌ಗಳು 10,999ರೂ. ಗಳ ಪ್ರೈಸ್ ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇವೆ.

ಹಾಗೆಯೇ ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಹೊಂದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆದಿದೆ. ಇದಲ್ಲದೇ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಒಳಗೊಂಡಿದೆ. ಹಾಗಾದರೆ ಈ ಫೋನಿನ ಇನ್ನಷ್ಟು ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಮೊಟೊ G52 : ಡಿಸ್‌ಪ್ಲೇ ರಚನೆ
ಮೊಟೊ G52 ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ HD+ ಪೋಲ್ಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 20:9 ರಚನೆಯ ಅನುಪಾತ ಮತ್ತು 90Hz ರಿಫ್ರೆಶ್ ರೇಟ್ ಒಳಗೊಂಡಿದೆ. ಜೊತೆಗೆ 360Hz ಟಚ್ ಸ್ಯಾಂಪ್ಲಿಂಗ್ ರೇಟ್, DCI-P3 ಕಲರ್ ಹರವು ಮತ್ತು DC ಡಿಮ್ಮಿಂಗ್ ಅನ್ನು ಹೊಂದಿದೆ.

ಮೊಟೊ G52 : ಪ್ರೊಸೆಸರ್ ಯಾವುದು?
ಮೊಟೊ G52 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಲಿದೆ. ಹಾಗೆಯೇ 4GB RAM ಮತ್ತು 128 GB ಇಂಟರ್ ಸ್ಟೋರೇಜ್ ಸಾಮರ್ಥ್ಯ ವನ್ನು ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯ ವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ.

ಮೊಟೊ G52 : ಟ್ರಿಪಲ್ ಕ್ಯಾಮೆರಾ
ಮೊಟೊ G52 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.
ಮೊಟೊ G52 : ಬ್ಯಾಟರಿ ಮತ್ತು ಇತರೆ
ಮೊಟೊ G52 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ಎಲ್ ಟಿಇ, ವೈ-ಫೈ 802.11 ಬಿ / ಜಿ / ಎನ್, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಮೈಕ್ರೋ-ಯುಎಸ್ಬಿ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ.

ಮೊಟೊ G52 : ಮೆಮೊರಿ ಮತ್ತು ಕಲರ್
ಮೊಟೊ G52 ಸ್ಮಾರ್ಟ್‌ಫೋನ್ 4GB + 64GB ಸ್ಟೋರೇಜ್ ಹಾಗೂ 6GB + 128GB ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಈ ಫೋನ್ ಚಾರ್ಕೋಲ್ ಗ್ರೇ ಮತ್ತು ಪಿಂಗಾಣಿ ವೈಟ್ ಕಲರ್ ಆಯ್ಕೆಯಲ್ಲಿ ಲಭ್ಯವಾಗಲಿದೆ.


Click it and Unblock the Notifications








