Home
ಸುದ್ದಿಜಾಲ

ಬಹುನಿರೀಕ್ಷಿತ ಮೊಟೊ G54 5G ಸ್ಮಾರ್ಟ್‌ಫೋನ್‌ ಲಾಂಚ್‌: ಫೀಚರ್ಸ್ ಏನಿದೆ? ಬೆಲೆ ಎಷ್ಟು?

ಮೊಟೊರೊಲಾ (Motorola) ಕಂಪೆನಿಯ ಫೋನ್‌ಗಳು ಭಾರತದಲ್ಲಿ ಬಹುಬೇಡಿಕೆಯ ಫೋನ್‌ಗಳಾಗಿ ಗುರುತಿಸಿಕೊಂಡಿವೆ. ಅದರಲ್ಲೂ ಈ ಕಂಪೆನಿ ಇಲ್ಲಿನ ಗ್ರಾಹಕರ ನಾಡಿ ಮಿಡಿತ ಅರಿತಿದ್ದು, ಅವರ ಅನುಕೂಲಕ್ಕೆ ತಕ್ಕಂತ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿಕೊಂಡು ಬರುತ್ತಿದೆ. ಈ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಈಗ ಮತ್ತೊಂದು ಹೊಸ ಫೋನ್‌ ಸೇರಿಕೊಳ್ಳಲಿದೆ.

ಹೌದು, ಮೊಟೊರೊಲಾ ಭಾರತದಲ್ಲಿ ಮೊಟೊ G54 5G (Moto G54 5G) ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಈ ಫೋನ್ ಎರಡು ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಮೀಡಿಯಾಟೆಕ್‌ ಡೈಮೆನ್ಸಿಟಿ 7020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಆಂಡ್ರಾಯ್ಡ್ 14ಗೆ ಅಪ್‌ಗ್ರೇಡ್ ಆಗುವಂತೆ ಅನುಕೂಲ ಹೊಂದಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಏನು?, ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

ಬಹುನಿರೀಕ್ಷಿತ ಮೊಟೊ G54 5G ಸ್ಮಾರ್ಟ್‌ಫೋನ್‌ ಲಾಂಚ್‌: ಫೀಚರ್ಸ್ ಏನಿದೆ?

ಮೊಟೊ G54 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಫೋನ್ 6.5 ಇಂಚಿನ ಫುಲ್‌ ಹೆಚ್‌ಡಿ+ LED ಡಿಸ್‌ಪ್ಲೇ ಹೊಂದಿದ್ದು, ಇದು 2400 x 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ HDR10 ಬೆಂಬಲ ಪಡೆದಿದ್ದು, 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಇಷ್ಟೇ ಅಲ್ಲದೆ ಪಾಂಡಾ ಗ್ಲಾಸ್ ಮೂಲಕ ರಕ್ಷಣೆ ನೀಡಲಾಗಿದ್ದು, ಇದು ಗೊರಿಲ್ಲಾ ಗ್ಲಾಸ್‌ನಂತೆ ಅಲ್ಯೂಮಿನೋಸಿಲಿಕೇಟ್ ಗ್ಲಾಸ್ ಆಗಿದೆ.

ಮೊಟೊ G54 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಮಾಹಿತಿ: ಈ ಫೋನ್ ಗರಿಷ್ಠ 2.2GHz ಆಕ್ಟಾ-ಕೋರ್ CPU ಮತ್ತು IMG BXM-8-256 GPU ಜೊತೆಗೆ ಮೀಡಿಯಾಟೆಕ್‌ ಡೈಮೆನ್ಸಿಟಿ 7020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಮೊಟೊ ಫೋನ್‌ಗಳು ಆಂಡ್ರಾಯ್ಡ್‌ನ ಕ್ಲೀನರ್ ಆವೃತ್ತಿಯನ್ನು ಬಳಕೆ ಮಾಡುತ್ತಿದ್ದು ಅದರಂತೆ ಈ ಫೋನ್‌ ಸಹ ಆಂಡ್ರಾಯ್ಡ್ 13 ಆಧಾರಿತ ಸಾಫ್ಟ್‌ವೇರ್‌ನೊಂದಿಗೆ ಕಾಣಿಸಿಕೊಂಡಿದೆಯಾದರೂ ಆಂಡ್ರಾಯ್ಡ್‌14 ಅಪ್‌ಡೇಟ್‌ಗೂ ಬೆಂಬಲ ಹೊಂದಿದೆ.

ಇನ್ನು ಸ್ಟೋರೇಜ್‌ ವಿಚಾರಕ್ಕೆ ಬಂದರೆ ಈ ಫೋನ್ ಎರಡು ಸ್ಟೋರೇಜ್ ಆಯ್ಕೆಗಳನ್ನು ಪಡೆದಿದೆ. ಅದರಲ್ಲಿ ಪ್ರಮುಖವಾಗಿ 8GB RAM ಹಾಗೂ 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಮತ್ತು 12GB RAM ಹಾಗೂ 256GB ಇಂಟರ್‌ ಸ್ಟೋರೇಜ್‌ ಆಯ್ಕೆ ನೀಡಲಾಗಿದೆ. ಈ ಮೂಲಕ ಬಳಕೆದಾರರು ವಿಡಿಯೋ ವೀಕ್ಷಣೆಯಲ್ಲಿ ಹಾಗೂ ಗೇಮಿಂಗ್‌ನಲ್ಲಿ ಉತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ.

ಮೊಟೊ G54 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, 50 ಮೆಗಾಪಿಕ್ಸೆಲ್ OIS ಮುಖ್ಯ ಕ್ಯಾಮೆರಾ ಹಾಗೂ ಆಟೋ ಫೋಕಸ್‌ಗಾಗಿ 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದಿದೆ. ಆದರೆ ಈ ವಿಭಾಗದಲ್ಲಿ ಹೆಚ್ಚುವರಿ ಮ್ಯಾಕ್ರೋ ಅಥವಾ ಡೆಪ್ತ್ ಸೆನ್ಸರ್‌ ಆಯ್ಕೆ ನೀಡಲಾಗಿಲ್ಲ. ಉಳಿದಂತೆ ಸೆಲ್ಫಿ ಉದ್ದೇಶಕ್ಕೆ 16 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಮೊಟೊ G54 5G ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 33W ಚಾರ್ಜಿಂಗ್ ಬೆಂಬಲದೊಂದಿಗೆ 6000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಈ ಮೂಲಕ ದೀರ್ಘ ಬ್ಯಾಕಪ್‌ ನೀಡಲಿದೆ. ಜೊತೆಗೆ ಈ ವಿಶೇಷವಾದ ಚಿಪ್‌ನೊಂದಿಗೆ ಬೆಲೆ ವಿಭಾಗದಲ್ಲಿ ಮೊದಲ ಫೋನ್ ಆಗಿ ಗುರುತಿಸಿಕೊಮಡಿದ್ದು, ರೆಡ್ಮಿ 12 5G ಮತ್ತು ರಿಯಲ್‌ಮಿ 11X 5G ಗೆ ಪ್ರತಿಸ್ಪರ್ಧಿಯಾಗಿದೆ.

ಮೊಟೊ G54 5G ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಲಭ್ಯತೆ: ಈ ಫೋನ್‌ನ 8GB RAM ಹಾಗೂ 128GB ಸ್ಟೋರೇಜ್ ವೇರಿಯಂಟ್ ಗೆ 15,999ರೂ.ಗಳು ಹಾಗೂ 12GB RAM ಜೊತೆಗೆ 256GB ಸ್ಟೋರೇಜ್ ವೇರಿಯಂಟ್‌ಗೆ 18,999ರೂ.ಗಳನ್ನು ನಿಗದಿ ಮಾಡಲಾಗಿದೆ. ಇನ್ನು ಬ್ಯಾಂಕ್ ಅಥವಾ ವಿನಿಮಯ ಕೊಡುಗೆಗಳೊಂದಿಗೆ ಗ್ರಾಹಕರು ಇನ್ನೂ ಕಡಿಮೆ ಬೆಲೆಗೆ ಫೋನ್ ಖರೀದಿಸಬಹುದು.ಬ್ಯಾಂಕ್ ಕೊಡುಗೆಗಳೊಂದಿಗೆ ಫೋನ್‌ ಖರೀದಿ ಮಾಡಿದರೆ ಒಂದು ಸಾವಿರ ಹಣ ಉಳಿತಾಯ ಮಾಡಬಹುದಾಗಿದೆ.

ಬಹುನಿರೀಕ್ಷಿತ ಮೊಟೊ G54 5G ಸ್ಮಾರ್ಟ್‌ಫೋನ್‌ ಲಾಂಚ್‌: ಫೀಚರ್ಸ್ ಏನಿದೆ?

ಹೆಚ್ಚುವರಿಯಾಗಿ, ಮೋಟೋರೋಲಾ ಜಿಯೋ ಜೊತೆಗೆ 5,000 ರೂಪಾಯಿಗಳ ಮೌಲ್ಯದ ಪ್ರಯೋಜನಗಳನ್ನು ನೀಡಲು ಪಾಲುದಾರಿಕೆ ಸಹ ಹೊಂದಿದೆ ಅಂದರೆ 399 ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ 2,000 ರೂ.ಗಳ ಕ್ಯಾಶ್‌ಬ್ಯಾಕ್ ಮತ್ತು ಪಾಲುದಾರ ಕೂಪನ್‌ಗಳಾಗಿ 3,000 ರೂ.ಗಳ ಕ್ಯಾಶ್‌ಬ್ಯಾಕ್ ಸಹ ಲಭ್ಯವಾಗಲಿದೆ. ಇನ್ನು ಈ ಫೋನ್ ಮಿಡ್‌ನೈಟ್ ಬ್ಲೂ, ಪರ್ಲ್ ಬ್ಲೂ ಮತ್ತು ಮಿಂಟ್ ಗ್ರೀನ್‌ನಲ್ಲಿ ಕಾಣಿಸಿಕೊಂಡಿದ್ದು, ಫ್ಲಿಪ್‌ಕಾರ್ಟ್‌ ಮೂಲಕ ಖರೀದಿ ಮಾಡಬಹುದು.
Best Mobiles in India

English summary
Motorola has launched the Moto G54 5G smartphone in India. The phone has a dual storage option and is powered by MediaTek Dimensity 7020 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+