Home
ಸುದ್ದಿಜಾಲ

Moto G54 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ! ಇನ್ಯಾಕೆ ತಡ ಕೂಡಲೇ ಖರೀದಿಸಿ!

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಮೊಟೊರೊಲಾ ಕಂಪೆನಿ ಗುಡ್‌ನ್ಯೂಸ್‌ ನೀಡಿದೆ. ಕಳೆದ ವರ್ಷ ಭಾರತದಲ್ಲಿ ಪರಿಚಯಿಸಿದ್ದ ತನ್ನ ಮೋಟೋ G54 ಸ್ಮಾರ್ಟ್‌ಫೋನ್‌ ಮೇಲಿನ ಬೆಲೆಯನ್ನು ಕಡಿತ ಮಾಡಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಹೊಸ ಸಿಹಿ ಸುದ್ದಿ ನೀಡಿದೆ. ಈ ಫೋನ್‌ನ ಎರಡೂ ಸ್ಟೋರೇಜ್‌ ರೂಪಾಂತರಗಳು ಕೂಡ ಬೆಲೆ ಕಡಿತ ಪಡೆದುಕೊಂಡಿವೆ.

ಹೌದು, ಮೋಟೋ G54 ಸ್ಮಾರ್ಟ್‌ಫೋನ್‌ನ ಎರಡೂ ರೂಪಾಂತರಗಳು ಬೆಲೆ ಇಳಿಕೆಯಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 8GB+128GB ಮತ್ತು 12GB+256GB ಸ್ಟೋರೇಜ್‌ ಸಾಮರ್ಥ್ಯದ ಎರಡು ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ. ಹಾಗಾದರೆ ಮೋಟೋ G54 ಸ್ಮಾರ್ಟ್‌ಫೋನ್‌ ಬೆಲೆ ಎಷ್ಟು ಇಳಿಕೆಯಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

Moto G54 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!.ಇನ್ಯಾಕೆ ತಡ ಕೂಡಲೇ ಖರೀದಿಸಿ

ಮೋಟೋ G54 ಬೆಲೆ ಇಳಿಕೆ
ಮೋಟೋ G54 ಸ್ಮಾರ್ಟ್‌ಫೋನಿನ ಎರಡೂ ಸ್ಟೋರೇಜ್‌ ಆಯ್ಕೆಗಳು ಕೂಡ 3000ರೂ ಬೆಲೆ ಕಡಿತವನ್ನು ಪಡೆದುಕೊಂಡಿವೆ. ಇದರಿಂದಾಗಿ Moto G54 ಸ್ಮಾರ್ಟ್‌ಫೋನಿನ 8GB+128GB ಆಯ್ಕೆಯು 15,999ರೂ ಬದಲಿಗೆ 13,999ರೂ ಬೆಲೆಯಲ್ಲಿ ದೊರೆಯಲಿದೆ. ಅಲ್ಲದೆ 12GB+256GB ಸ್ಟೋರೇಜ್‌ ಆಯ್ಕೆಯು 18,999ರೂ ಬದಲಿಗೆ 15,999ರೂ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ನೀವು ಮಿಂಟ್ ಗ್ರೀನ್, ಮಿಡ್ನೈಟ್ ಬ್ಲೂ ಮತ್ತು ಪರ್ಲ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು.

Moto G54 ಫೀಚರ್ಸ್‌ ಹೇಗಿದೆ?
Moto G54 ಸ್ಮಾರ್ಟ್‌ಫೋನ್‌ 1080x2400 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ FHD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು HDR10 ಬೆಂಬಲ ಪಡೆದಿದ್ದು, 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಇದಲ್ಲದೆ ಪಾಂಡ ಗಾಜಿನ ಲೆಯರ್‌ ಪ್ರೊಟೆಕ್ಷನ್‌ ಪಡೆದಿದೆ.

Moto G54 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!.ಇನ್ಯಾಕೆ ತಡ ಕೂಡಲೇ ಖರೀದಿಸಿ

Moto G54 ಪ್ರೊಸೆಸರ್‌ ಯಾವುದು?
Moto G54 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7020 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಹಾಗೂ 12GB RAM ಮತ್ತು 256GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಿದೆ.

Moto G54 ಕ್ಯಾಮೆರಾ ಸೆಟಪ್‌ ಏನಿದೆ?
Moto G54 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಸಹ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೆನ್ಸಾರ್‌ನಲ್ಲಿದೆ. ಎರಡನೇ ಕ್ಯಾಮೆರಾ 8MP ಸೆನ್ಸಾರ್‌ನಲ್ಲಿದೆ. ಇದಲ್ಲದೆ 16MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

Moto G54 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!.ಇನ್ಯಾಕೆ ತಡ ಕೂಡಲೇ ಖರೀದಿಸಿ

Moto G54 ಸ್ಮಾರ್ಟ್‌ಫೋನ್ ಬ್ಯಾಟರಿ ಮತ್ತು ಇತರೆ
Moto G54 ಸ್ಮಾರ್ಟ್‌ಫೋನ್‌ 6,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಪೋನ್‌ ಜ್ಯಾಕ್‌ ಅನ್ನು ಪಡೆದಿದೆ. ಇದಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

ಇನ್ನು Motorola razr 40 Ultra ಸ್ಮಾರ್ಟ್‌ಫೋನ್‌ ಅಮೆಜಾನ್‌ನಲ್ಲಿ 1,19,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಮೇಲೆ ಬರೋಬ್ಬರಿ 42% ಡಿಸ್ಕೌಂಟ್‌ ಲಭ್ಯವಿದ್ದು, ಇದೀಗ ಕೇವಲ 69,999ರೂ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಇದಲ್ಲದೆ ಸ್ಮಾರ್ಟ್‌ಪೋನ್‌ ಮೇಲೆ ವಿವಿಧ ಬ್ಯಾಂಕ್‌ ಕಾರ್ಡ್‌ಗಳ ಆಫರ್‌ ಕೂಡ ದೊರೆಯಲಿದೆ. ಇದರಿಂದ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಪರಿಣಾಮಕಾರಿ ಬೆಲೆ ಇಳಿಕೆಯನ್ನು ಕಾಣಬಹುದಾಗಿದೆ. ಇನ್ನು ಮೊಟೊರೊಲಾ ರೇಜರ್‌ 40 ಅಲ್ಟ್ರಾ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್‌ OIS ಮತ್ತು ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಸೆನ್ಸರ್‌ ಪಡೆದಿದೆ.

Best Mobiles in India

English summary
Moto G54 gets a Massive price cut in India: Complete Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+