Home
ಸುದ್ದಿಜಾಲ

ಸದ್ದಿಲ್ಲದೆ ಮೊಟೊ G55 ಮತ್ತು ಮೊಟೊ G35 ಬಿಡುಗಡೆ: ಬೆಲೆ ಎಷ್ಟು?

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೊಟೊ ಮೊಬೈಲ್‌ ಸಂಸ್ಥೆಯು ಹಲವು ಶ್ರೇಣಿಯ ಫೋನ್‌ಗಳ ಮೂಲಕ ಗುರುತಿಸಿಕೊಂಡಿದೆ. ಇದೀಗ ಸಂಸ್ಥೆಯು ನೂತನವಾಗಿ ಮೊಟೊ G55 ಹಾಗೂ ಮೊಟೊ G35 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಫೋನ್‌ಗಳು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, 5000mAh ಬ್ಯಾಟರಿ ಸೌಲಭ್ಯ ಸಹ ಪಡೆದಿವೆ.

ಹೌದು, ಮೊಟೊ ಸಂಸ್ಥೆಯು ಹೊಸದಾಗಿ ಮೊಟೊ G55 ಹಾಗೂ ಮೊಟೊ G35 ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಫೋನ್‌ಗಳಲ್ಲಿ ಮೊಟೊ G55 ಮೀಡಿಯಾಟೆಕ್ ಡೈಮನಸಿಟಿ 7025 ಪ್ರೊಸೆಸರ್‌ ಪಡೆದಿದೆ. ಹಾಗೆಯೇ ಮೊಟೊ G35 unisoc T760 ಪ್ರೊಸೆಸರ್‌ ಬಲ ಪಡೆದಿದೆ. ಇನ್ನುಳಿದಂತೆ ಈ ಎರಡು ಫೋನ್‌ಗಳ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸದ್ದಿಲ್ಲದೆ ಮೊಟೊ G55 ಮತ್ತು ಮೊಟೊ G35 ಬಿಡುಗಡೆ: ಬೆಲೆ ಎಷ್ಟು?

ಮೊಟೊ G55 ಫೋನ್‌ ಫೀಚರ್ಸ್‌

ಹೊಸ ಮೊಟೊ G55 5G ಫೋನಿನ 6.49 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಫೋನ್‌ ಈ ಫೋನ್ 50MP ಮುಖ್ಯ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಇದು 256GB ಸ್ಟೋರೇಜ್‌ನೊಂದಿಗೆ ಬರಲಿದೆ. 5,000mAh ಬ್ಯಾಟರಿ, 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಮೊಟೊ G55 5G ಫೋನ್ ಬೂದು ಮತ್ತು ನೇರಳೆ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ ಮೊಟೊ G45 ಫೋನಿನಂತೆಯೇ ಮೊಟೊ G55 ಮೊಬೈಲ್‌ನ ವಿನ್ಯಾಸ ಇರುತ್ತದೆ. ಇದು ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಮತ್ತು ಎಲ್ಇಡಿ ಫ್ಲ್ಯಾಷ್ ಹೊಂದಿರುವ ಸಾಧ್ಯತೆಯಿದೆ. ಫೋನಿನ ಹಿಂಭಾಗದಲ್ಲಿ ಮೊಟೊರೊಲಾ ಲೋಗೋವನ್ನು ಕಾಣಬಹುದು.

ಫೋನಿನ ಬಲ ಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಬಟನ್‌ಗಳು ಇರಲಿದೆ. ಫೋನಿನ ಮುಂಭಾಗದಲ್ಲಿ ಪಂಚ್ ಹೋಲ್ ಡಿಸೈನ್ ಕಾಣುತ್ತದೆ. ಈ ಮೊಬೈಲ್ 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ ಟೈಪ್ ಸಿ ಪೋರ್ಟ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಈ ಫೋನಿನ ಡಿಸ್ಲ್ಪೇ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮುಂಬರುವ ಹೊಸ ಮೊಟೊ G55 5G ಫೋನಿನ ಪ್ರೊಸೆಸರ್‌ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ, ವರದಿಯ ಪ್ರಕಾರ MediaTek ಡೈಮೆನ್ಸಿಟಿ 5G ಚಿಪ್ಸೆಟ್‌ ಅನ್ನು ಅಳವಡಿಸಲಾಗಿದೆ ಎಂದು ಹೇಳಲಾಗಿದೆ. ಈ ಫೋನ್ 8GB RAM ಮತ್ತು ವರ್ಚುವಲ್ ಮೆಮೊರಿ ಹೊಂದಿದೆ ಎಂದು ತಿಳಿದುಬಂದಿದೆ. ಇದಲ್ಲದೆ, 256GB UFS 2.2 ಆಂತರಿಕ ಸ್ಟೋರೇಜ್‌ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಈ ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನ ಅನ್ನು ಹೊಂದಿದೆ.

50MP ಮುಖ್ಯ ಕ್ಯಾಮೆರಾ, 16MP ಸೆಲ್ಫಿ ಶೂಟರ್
ಮೊಟೊ G55 5G ಮೊಬೈಲ್ f/1.8 ಅಪರ್ಚರ್‌ನೊಂದಿಗೆ 50 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಓಐಎಸ್ (OIS) ಮತ್ತು ಕ್ವಾಡ್ PDAF ಬೆಂಬಲದೊಂದಿಗೆ ಎಂಟ್ರಿ ನೀಡಿದೆ. ಜೊತೆಗೆ, f/2.2 ಅಪರ್ಚರ್ ಮತ್ತು ಮ್ಯಾಕ್ರೋ ಶೂಟಿಂಗ್ ಸಾಮರ್ಥ್ಯದೊಂದಿಗೆ 8MP ಅಲ್ಟ್ರಾವೈಡ್ ಲೆನ್ಸ್ ಇದೆ. ಸೆಲ್ಪಿ ಕ್ಲಿಕ್ಕಿಸಲು f/2.4 ಅಪರ್ಚರ್‌ನೊಂದಿಗೆ 16 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ನೀಡಿದೆ.

5,000mAh ಬ್ಯಾಟರಿ, 30 ವ್ಯಾಟ್ ಚಾರ್ಜಿಂಗ್
ಹೊಸ ಮೊಟೊ G55 5G ಫೋನ್ 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಇದು 30 ವ್ಯಾಟ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಪಡೆದಿದೆ. ಈ ಫೋನಿನ ಮುಂಭಾಗದ ಡಿಸ್ಲ್ಪೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರ ರಕ್ಷಣೆಯನ್ನು ಹೊಂದಿದೆ. ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP54 ರೇಟಿಂಗ್ ಅನ್ನು ಪಡೆದಿದೆ.

Best Mobiles in India

English summary
Moto G55 5G and Moto G35 5G Launched: Price and Specifications. check details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+