Home
ಸುದ್ದಿಜಾಲ

Moto G55 5G: ಬರ್ತಿದೆ ಹೊಸ ಫೋನ್; ರಗಡ್‌ ಲುಕ್‌.. ಫೀಚರ್ಸ್ ಲೀಕ್!

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 'ಮೊಟೊ ಮೋಡಿ' ಮಾಡುತ್ತಿದೆ. ತನ್ನ ಗ್ರಾಹಕರಿಗೆ ಒಂದಾದ ಮೇಲೊಂದರಂತೆ ಅಚ್ಚರಿ ಸುದ್ದಿಗಳನ್ನು ನೀಡುತ್ತಿದೆ. ಹೌದು, ಇತ್ತೀಚೆಗೆ ಮೊಟೊ G45 5G (Moto G45 5G) ಫೋನನ್ನು ಬಿಡುಗಡೆ ಮಾಡಲಾಗಿದೆ. ಈಗ 'G' ಸರಣಿಯಲ್ಲಿ ಮತ್ತೊಂದು ಹೊಸ ಫೋನನ್ನು ಪರಿಚಯಿಸಲು ಸಜ್ಜಾಗಿದೆ. ಮುಂಬರುವ ಕೆಲವೇ ದಿನಗಳಲ್ಲಿ ಹೊಸ ಮೊಟೊ G55 5G (Moto G55 5G) ಸ್ಮಾರ್ಟ್‌ಫೋನನ್ನು ಲಾಂಚ್ ಮಾಡಲಾಗುತ್ತದೆ. ಈ ಫೋನನ್ನು ಮೊದಲು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಭಾರತಕ್ಕೆ ಯಾವಾಗ ಬರಲಿದೆ ಎನ್ನುವುದನ್ನು ತಿಳಿಯೋಣ ಬನ್ನಿ.

ಮುಂಬರುವ ಮೊಟೊ G55 5G ಫೋನಿನ ವಿನ್ಯಾಸ, ಬಣ್ಣ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಕಂಪನಿಯು ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆಯಿದೆ. ಈ ಫೋನ್ 50MP ಮುಖ್ಯ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಇದು 256GB ಸ್ಟೋರೇಜ್‌ನೊಂದಿಗೆ ಬರಲಿದೆ. 5,000mAh ಬ್ಯಾಟರಿ, 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

Moto G55 5G: ಬರ್ತಿದೆ ಹೊಸ ಫೋನ್; ರಗಡ್‌ ಲುಕ್‌.. ಫೀಚರ್ಸ್ ಲೀಕ್!

ಮೊಟೊ G55 5G ಡಿಸೈನ್ ಮತ್ತು ಬಣ್ಣ

ಮೊಟೊ G55 5G ಫೋನ್ ಬೂದು ಮತ್ತು ನೇರಳೆ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಬಿಡುಗಡೆಯಾದ ಮೊಟೊ G45 ಫೋನಿನಂತೆಯೇ ಮೊಟೊ G55 ಮೊಬೈಲ್‌ನ ವಿನ್ಯಾಸ ಇರುತ್ತದೆ. ಇದು ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಮತ್ತು ಎಲ್ಇಡಿ ಫ್ಲ್ಯಾಷ್ ಹೊಂದಿರುವ ಸಾಧ್ಯತೆಯಿದೆ. ಫೋನಿನ ಹಿಂಭಾಗದಲ್ಲಿ ಮೊಟೊರೊಲಾ ಲೋಗೋವನ್ನು ಕಾಣಬಹುದು.

ಫೋನಿನ ಬಲ ಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಬಟನ್‌ಗಳು ಇರಲಿದೆ. ಫೋನಿನ ಮುಂಭಾಗದಲ್ಲಿ ಪಂಚ್ ಹೋಲ್ ಡಿಸೈನ್ ಕಾಣುತ್ತದೆ. ಈ ಮೊಬೈಲ್ 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ ಟೈಪ್ ಸಿ ಪೋರ್ಟ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಈ ಫೋನಿನ ಡಿಸ್ಲ್ಪೇ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ಸುದ್ದಿ ಓದಿದ್ಧೀರಾ?: ಕೇವಲ 9,999 ರೂ.! Moto G45 5G ಭಾರತದಲ್ಲಿ ಬಿಡುಗಡೆ; ಅಚ್ಚರಿ ಫೀಚರ್ಸ್

ಮೊಟೊ G55 5G ಫೋನಿನ ಸಂಭಾವ್ಯ ವೈಶಿಷ್ಟ್ಯಗಳು

ಮುಂಬರುವ ಹೊಸ ಮೊಟೊ G55 5G ಫೋನಿನ ಪ್ರೊಸೆಸರ್‌ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ, ವರದಿಯ ಪ್ರಕಾರ MediaTek ಡೈಮೆನ್ಸಿಟಿ 5G ಚಿಪ್ಸೆಟ್‌ ಅನ್ನು ಅಳವಡಿಸಲಾಗಿದೆ ಎಂದು ಹೇಳಲಾಗಿದೆ. ಈ ಫೋನ್ 8GB RAM ಮತ್ತು ವರ್ಚುವಲ್ ಮೆಮೊರಿ ಹೊಂದಿದೆ ಎಂದು ತಿಳಿದುಬಂದಿದೆ. ಇದಲ್ಲದೆ, 256GB UFS 2.2 ಆಂತರಿಕ ಸ್ಟೋರೇಜ್‌ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಈ ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನ ಅನ್ನು ಹೊಂದಿರಲಿದೆ.

50MP ಮುಖ್ಯ ಕ್ಯಾಮೆರಾ, 16MP ಸೆಲ್ಫಿ ಶೂಟರ್

ಮೊಟೊ G55 5G ಮೊಬೈಲ್ f/1.8 ಅಪರ್ಚರ್‌ನೊಂದಿಗೆ 50 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಓಐಎಸ್ (OIS) ಮತ್ತು ಕ್ವಾಡ್ PDAF ಬೆಂಬಲದೊಂದಿಗೆ ಬರಲಿದೆ. ಜೊತೆಗೆ, f/2.2 ಅಪರ್ಚರ್ ಮತ್ತು ಮ್ಯಾಕ್ರೋ ಶೂಟಿಂಗ್ ಸಾಮರ್ಥ್ಯದೊಂದಿಗೆ 8MP ಅಲ್ಟ್ರಾವೈಡ್ ಲೆನ್ಸ್ ಇರಲಿದೆ. ಸೆಲ್ಪಿ ಕ್ಲಿಕ್ಕಿಸಲು f/2.4 ಅಪರ್ಚರ್‌ನೊಂದಿಗೆ 16 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ನೀಡುವ ಸಾಧ್ಯತೆಯಿದೆ.

5,000mAh ಬ್ಯಾಟರಿ, 30 ವ್ಯಾಟ್ ಚಾರ್ಜಿಂಗ್

ಮುಂಬರುವ ಮೊಟೊ G55 5G ಫೋನ್ 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದು 30 ವ್ಯಾಟ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಈ ಫೋನಿನ ಮುಂಭಾಗದ ಡಿಸ್ಲ್ಪೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರ ರಕ್ಷಣೆಯನ್ನು ಹೊಂದಿರಲಿದೆ. ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP54 ರೇಟಿಂಗ್ ಅನ್ನು ಪಡೆದಿರಲಿದೆ ಎಂದು ಹೇಳಲಾಗಿದೆ.

Best Mobiles in India

English summary
Moto G55 5G Launch soon in India: design and specifications leaked: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+