ಮೊಟೊ G60s ಫೋನ್ ಬಿಡುಗಡೆ: ಫೀಚರ್ಸ್ ಏನು?..ಬೆಲೆ ಎಷ್ಟು?
ಪ್ರತಿಷ್ಠಿತ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಮೊಟೊರೊಲಾ ಕಂಪೆನಿಯ ತನ್ನ ಮೊಟೊ G ಸರಣಿಯಲ್ಲಿ ಈಗಾಗಲೇ ಕೆಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಇದೀಗ ಅದೇ ಸರಣಿಯಲ್ಲಿ ಈಗ ಹೊಸದಾಗಿ ಮೊಟೊ G60s ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್‌ಫೋನಿನ ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದ್ದು, ಗ್ರಾಹಕರನ್ನು ಅಕರ್ಷಿಸಿದೆ.

ಹೌದು, ಮೊಟೊರೊಲಾ ಕಂಪೆನಿ ನೂತನವಾಗಿ ಮೊಟೊ G60s ಸ್ಮಾರ್ಟ್‌ಫೋನ್ ಬ್ರೆಜಿಲ್‌ನಲ್ಲಿ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಎಂಪಿ ಸೆನ್ಸಾರ್‌ನಲ್ಲಿರಲಿದೆ. ಇದರೊಂದಿಗೆ 6,000mAh ಬ್ಯಾಟರಿ ಬಾಳಿಕೆ ಪಡೆದಿರುವುದು ಮತ್ತೊಂದು ಹೈಲೈಟ್ ಆಗಿದೆ. ಇದಲ್ಲದೇ 6GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿದೆ. ಇನ್ನುಳಿದಂತೆ ಮೊಟೊ G60s ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸವೇನು
ಮೊಟೊ G60s ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಫೋರ್ಟ್ ಪಡೆದಿದ್ದು, 6.8 ಇಂಚಿನ ಮ್ಯಾಕ್ಸ್ ವಿಜನ್ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಪಡೆದಿದೆ. ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಅನುಪಾತವು 20:9 ಆಗಿದೆ.

ಪ್ರೊಸೆಸರ್ ಕಾರ್ಯವೇನು
ಮೊಟೊ G60s ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೀ G95 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಅಲ್ಲದೆ ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿದ್ದು, ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ವಿಸ್ತರಣೆಗೆ ಅವಕಾಶ ನೀಡುವ ಆಯ್ಕೆ ನೀಡಿದೆ.

ಕ್ವಾಡ್ ಕ್ಯಾಮೆರಾ ರಚನೆ
ಮೊಟೊ G60s ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿರಲಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್‌ನಲ್ಲಿದೆ ಹಾಗೂ ನಾಲ್ಕನೇ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಹೊಂದಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ.

ಬ್ಯಾಟರಿ ಮತ್ತು ಇತರೆ
ಮೊಟೊ G60s ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಹಾಗೆಯೇ 50W ಸಾಮರ್ಥ್ಯದ ಟರ್ಬೋ ಪವರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಆನ್‌ಬೋರ್ಡ್‌ನಲ್ಲಿರುವ ಸೆನ್ಸರ್‌ಗಳು ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಆಂಬಿಯೆಂಟ್ ಲೈಟ್ ಸೆನ್ಸರ್ ಅನ್ನು ಒಳಗೊಂಡಿವೆ ಮತ್ತು ಹಿಂಭಾಗದಲ್ಲಿ ಜೋಡಿಸಲಾದ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡ ಇದೆ.

ಬೆಲೆ ಮತ್ತು ಲಭ್ಯತೆ
ಮೊಟೊ G60s ಸ್ಮಾರ್ಟ್‌ಫೋನ್ 6GB + 128GB ಸ್ಟೋರೇಜ್ ವೇರಿಯಂಟ್ ಬೆಲೆಯು ಬ್ರೆಜಿಲ್‌ನಲ್ಲಿ BRL 2,249 (ಭಾರತದಲ್ಲಿ ಅಂದಾಜು 32,000ರೂ. ಎನ್ನಲಾಗಿದೆ.). ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇದರ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ.


Click it and Unblock the Notifications








