Home
ಸುದ್ದಿಜಾಲ

ಇಂದು ಮೊಟೊ G64 5G ಫೋನ್‌ ಫಸ್ಟ್‌ ಸೇಲ್‌!..ಈ ಫೋನಿನ ಪ್ಲಸ್‌ ಪಾಯಿಂಟ್‌ ಏನು?

ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ ಎನಿಸಿಕೊಂಡಿರುವ ಮೊಟೊರೊಲಾ ಕಂಪನಿಯ ಮೊಟೊ g64 5g ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ತನ್ನ ವಿಭಾಗದಲ್ಲೇ ಗ್ರಾಹಕರನ್ನ ಸೆಳೆದಿದೆ. ಈ ಫೋನಿನ ಫಸ್ಟ್‌ ಸೇಲ್‌ ಇಂದು (ಏಪ್ರಿಲ್‌ 23 ರಂದು) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದ ಮೂಲಕ ಪ್ರಾರಂಭವಾಗಲಿದೆ.

ಹೌದು, ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ನಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಮೊಟೊರೊಲಾ ಸಂಸ್ಥೆಯ ಮೊಟೊ g64 5g ಫೋನ್‌ ಮಾರಾಟ ಶುರುವಾಗಲಿದೆ. ಈ ಫೋನ್‌ 12GB + 256GB ಸ್ಟೋರೇಜ್‌ ವೇರಿಯಂಟ್‌ ಪಡೆದಿದ್ದು, ಹೈಲೈಟ್‌ ಎನಿಸಿದೆ. ಹಾಗೆಯೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ.

ಇಂದು ಮೊಟೊ G64 5G ಫೋನ್‌ ಫಸ್ಟ್‌ ಸೇಲ್‌!..ಈ ಫೋನಿನ ಪ್ಲಸ್‌ ಪಾಯಿಂಟ್‌ ಏನು?

ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಅಲ್ಲದೇ ಇದು 6000mAh ಸಾಮರ್ಥ್ಯದ ಬ್ಯಾಟರಿ ವ್ಯವಸ್ಥೆ ಒಳಗೊಂಡಿರುವುದು ಪ್ಲಸ್‌ ಪಾಯಿಂಟ್‌ ಎನಿಸಿಕೊಂಡಿದೆ. ಹಾಗಾದರ ಮೊಟೊ g64 5g ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊ g64 5g ಫೋನ್‌ ಫೀಚರ್ಸ್‌

ಮೊಟೊ ಸಂಸ್ಥೆಯ ಈ ಮೊಬೈಲ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LCD ಅನ್ನು ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಈ ಡಿಸ್‌ಪ್ಲೇಯು 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಪೋರ್ಟ್‌ ಪಡೆದಿದೆ. ಇದಲ್ಲದೆ ಸ್ಕ್ರೀನ್‌ ಕಡಿಮೆ ಅಂಚಿನ ರಚನೆ ಪಡೆದಿದ್ದು, ಹಾಗೆಯೇ ಈ ಡಿಸ್‌ಪ್ಲೇ 120 Hz ರಿಫ್ರೆಶ್‌ ರೇಟ್‌ ಸೌಲಭ್ಯ ಹೊಂದಿದೆ. ಅಲ್ಲದೇ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್‌ ಸಪೋರ್ಟ್‌ ಸಹ ಇದೆ.

ಇಂದು ಮೊಟೊ G64 5G ಫೋನ್‌ ಫಸ್ಟ್‌ ಸೇಲ್‌!..ಈ ಫೋನಿನ ಪ್ಲಸ್‌ ಪಾಯಿಂಟ್‌ ಏನು?

ಮೊಟೊದ ಈ 5G ಮೊಬೈಲ್‌ ಮೀಡಿಯಾಟೆಕ್ ಡೈಮೆನ್ಸಿಟಿ 7025 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದ್ದು, ಇದಕ್ಕೆ ಸಪೋರ್ಟ್‌ ಆಗಿ ಆಂಡ್ರಾಯ್ಡ್‌ 14 ಓಎಸ್‌ ಸೌಲಭ್ಯ ಇದೆ. ಹಾಗೆಯೇ ಇದು 8GB + 128GB ಸ್ಟೋರೇಜ್‌ ಹಾಗೂ 12 GB RAM + 256 GB ಸ್ಟೋರೇಜ್‌ನ ಮಾಡೆಲ್‌ ಆಯ್ಕೆಗಳನ್ನು ಕೂಡಾ ಒಳಗೊಂಡಿದ್ದು, ಹೆಚ್ಚುವರಿ RAM ಸೌಲಭ್ಯವು ಕೂಡಾ ಲಭ್ಯ ಮಾಡಲಾಗಿದೆ.

ಮೊಟೊ g64 5g ಮೊಬೈಲ್‌ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಮತ್ತು ತೃತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ನಲ್ಲಿ ಇವೆ. ಇನ್ನು ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಮೊಟೊ g64 5g ಮೊಬೈಲ್ 6000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದ್ದು, ಇದು ಪ್ಲಸ್‌ ಪಾಯಿಂಟ್‌ ಎನಿಸಿದೆ. ಇದಕ್ಕೆ ಪೂರಕವಾಗಿ 33W ಟರ್ಬೋ ಪವರ್‌ ಚಾರ್ಜಿಂಗ್ ಸೌಲಭ್ಯ ಕೂಡಾ ಒದಗಿಸಲಾಗಿದೆ. ಇದಲ್ಲದೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5GG, 4G LTE, Wi-Fi, ಬ್ಲೂಟೂತ್ 5.3, NFC, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಫೋನ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP52 ರೇಟಿಂಗ್ ಅನ್ನು ಪಡೆದಿದೆ.

ಬೆಲೆ ಮಾಹಿತಿ

ಈ ಫೋನಿನ 8GB RAM + 128GB ವೇರಿಯಂಟ್‌ ದರ - 14,999ರೂ. ಆಗಿದೆ
ಈ ಫೋನಿನ 12 GB RAM + 256 GB ವೇರಿಯಂಟ್‌ ದರ - 16,999ರೂ. ಆಗಿದೆ.
ಇನ್ನು ಈ ಫೋನ್‌ ಐಸ್ ಲಿಲಾಕ್, ಮಿಂಟ್ ಗ್ರೀನ್ ಮತ್ತು ಪರ್ಲ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
moto g64 5G first sale in india today. price, features, camera, battery and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+