ಮೊಟೊ G73 v/s ರೆಡ್ಮಿ ನೋಟ್ 12 5G; ಖರೀದಿಗೆ ಯಾವುದು ಬೆಸ್ಟ್ !?
ಪ್ರತಿ ತಿಂಗಳು ಡಜನ್ ಗಟ್ಟಲೆ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಅನಾವರಣ ಆಗುತ್ತವೆ. ಈ ಪ್ರತಿ ಫೋನ್‌ಗಳು ಸಹ ಬೆಲೆ ವಿಚಾರದಲ್ಲಿ, ಫೀಚರ್ಸ್ ವಿಚಾರದಲ್ಲಿ ಹಾಗೂ ಇನ್ನಿತರೆ ವಿಷಯದಲ್ಲಿ ಭಿನ್ನತೆ ಹೊಂದಿದ್ದು, ಗ್ರಾಹಕರು ಅವರ ಅಗತ್ಯಕ್ಕೆ ತಕ್ಕಂತಹ ಫೋನ್ ಖರೀದಿ ಮಾಡಲು ಅವಕಾಶ ಕಲ್ಪಿಸಿಕೊಡುತ್ತವೆ.
ಹೌದು, ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳಲ್ಲಿ ರೆಡ್ಮಿ ಹಾಗೂ ಮೊಟೊರೊಲಾ ಪ್ರಮುಖವಾದ ಕಂಪೆನಿಗಳಾಗಿದ್ದು, ಈ ಕಂಪೆನಿಗಳು ಗ್ರಾಹಕರು ಮೆಚ್ಚಿರುವ ಹಲವಾರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿವೆ. ಇದರ ಭಾಗವಾಗಿಯೇ ಕೆಲವು ದಿನಗಳ ಹಿಂದೆ ರೆಡ್ಮಿ ನೋಟ್ 12 5G ಹಾಗೂ ಮೊಟೊ G73 ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಾಗಿದ್ದು, ಇವು ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಧೂಳೆಬ್ಬಿಸಿವೆ. ಹೀಗಾಗಿ ಈ ಎರಡೂ ಉತ್ತಮ ಫೋನ್‌ಗಳಲ್ಲಿ ಯಾವುದು ಅತ್ಯುತ್ತಮ ಎನ್ನುವುದು ನಿಮಗೆ ಗೊತ್ತಾ!?.

ರೆಡ್ಮಿ ನೋಟ್ 12 5G v/s ಮೊಟೊ G73
ರೆಡ್ಮಿಯ ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್4 ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಿದರೆ, ಮೊಟೊ G73 ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 930 ಪ್ರೊಸೆಸರ್‌ನ ಶಕ್ತಿ ಪಡೆದಿಕೊಂಡಿದೆ. ಹಾಗೆಯೇ ರೆಡ್ಮಿ ಟ್ರಿಪಲ್ ರಿಯರ್ ಕ್ಯಾಮೆರಾ ಪಡೆದರೆ ಮೊಟೊ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. ಈ ನಡುವೆ ಈ ಎರಡೂ ಮೊಬೈಲ್‌ನಲ್ಲಿ ಯಾವುದು ಬೆಸ್ಟ್ ಎಂದು ಆಲೋಚನೆ ಮಾಡುತ್ತಿದ್ರೆ ಈ ಲೇಖನ ಓದಿ.
ರೆಡ್ಮಿ ನೋಟ್ 12 5G ಹಾಗೂ ಮೊಟೊ G73 ಡಿಸ್‌ಪ್ಲೇ ವಿವರ
ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ ಈ ವಿಚಾರದಲ್ಲಿ ಉತ್ತಮವಾದ ಡಿಸ್‌ಪ್ಲೇ ಹೊಂದಿದೆ ಎನ್ನಬಹುದು. ಯಾಕೆಂದರೆ ಈ ಫೋನ್ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ನೀಡಲಿದೆ, ಜೊತೆಗೆ 1200nits ಬ್ರೈಟ್‌ನೆಸ್ ಸಹ ಇದರಿಂದ ಲಭ್ಯ. ಹಾಗೆಯೇ ಇದರ ಪ್ರತಿಸ್ಪರ್ಧಿ ಫೋನ್ ಆಗಿರುವ ಮೊಟೊ G73 6.5 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು,120Hz ರಿಫ್ರೆಶ್ ರೇಟ್ ಹೊಂದಿದೆ. ಜೊತೆಗೆ ಇದು 2400×1080 ಪಿಕ್ಸೆಲ್ ರೆಸಲ್ಯೂಶನ್‌ಗೆ ಬೆಂಬಲಿಸಲಿದೆ.

ರೆಡ್ಮಿ ನೋಟ್ 12 5G, ಮೊಟೊ G73 ಫೋನ್‌ನ ಪ್ರೊಸೆಸರ್ ವ್ಯಾತ್ಯಾಸ
ಪ್ರೊಸೆಸರ್ ವಿಷಯದಲ್ಲಿ ರೆಡ್ಮಿ ನೋಟ್ 12 5G ಫೋನ್‌ಗಿಂತ ಮೊಟೊ G73 ಫೋನ್ ಉತ್ತಮ ಕಾರ್ಯಕ್ಷಮತೆ ಇರುವ ಪ್ರೊಸೆಸರ್ ಅನ್ನು ಹೊಂದಿದೆ. ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 930 SoC ಪ್ರೊಸೆಸರ್ ಬಲ ಪಡೆದುಕೊಂಡಿದ್ದು, 8GB RAM ಹಾಗೂ 256GB ಇಂಟರ್ ಸ್ಟೋರೇಜ್‌ನ ಒಂದೇ ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ.
ಹಾಗೆಯೇ, ರೆಡ್ಮಿ ನೋಟ್ 12 5G ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 4 ಜನ್1ಪ್ರೊಸೆಸರ್ ಶಕ್ತಿ ಪಡೆದಿದೆ. ಜೊತೆಗೆ 4GB/6GB RAM ಮತ್ತು 128GB ಇಂಟರ್ ಸ್ಟೋರೇಜ್ ವೇರಿಯಂಟ್‌ನಲ್ಲಿ ಈ ಫೋನ್ ಲಭ್ಯ. ಇದೆಲ್ಲಕ್ಕೂ ಮಿಗಿಲಾಗಿ ಈ ಎರಡೂ ಫೋನ್‌ಗಳ ಸಹ ಹೆಚ್ಚುವರಿ ಇಂಟರ್‌ಸ್ಟೋರೇಜ್‌ಗಾಗಿ ಮೈಕ್ರೋ ಎಸ್‌ಡಿ ಕಾರ್ಡ್ ಸೌಲಭ್ಯ ಪಡೆದುಕೊಂಡಿವೆ.
ರೆಡ್ಮಿ ನೋಟ್ 12 5G ಹಾಗೂ ಮೊಟೊ G73 ಫೋನ್‌ನ ಕ್ಯಾಮೆರಾ ಭಿನ್ನತೆ
ಕ್ಯಾಮೆರಾ ವಿಚಾರದಲ್ಲಿ ರೆಡ್ಮಿ ಫೋನ್ ಮೊಟೊಗಿಂತ ಉತ್ತಮವಾಗಿದೆ ಎನ್ನಲಾಗಿದೆ. ಯಾಕೆಂದರೆ ರೆಡ್ಮಿ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಇದರಲ್ಲಿ 48MP ಪ್ರಾಥಮಿಕ ಸೆನ್ಸರ್ ಆಕರ್ಷಕವಾಗಿದೆ. ಅದರಂತೆ ಮೊಟೊ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಇದು 50MP ಪ್ರಾಥಮಿಕ ಸೆನ್ಸರ್‌ನಿಂದ ಸಜ್ಜುಗೊಂಡಿದೆ. ಹಾಗೆಯೇ ಎರಡರಲ್ಲೂ1080p ರೆಸಲ್ಯೂಶನ್‌ನಲ್ಲಿ ವಿಡಿಯೋ ಮಾಡಬಹುದಾಗಿದ್ದರೂ ಮೊಟೊ 60 fps ಆಯ್ಕೆ ಹೊಂದಿದ್ದು, ರೆಡ್ಮಿ 30fps ನಲ್ಲಿ ರೆಕಾರ್ಡ್ ಮಾಡುವ ಸಾಮರ್ಥ್ಯ ಪಡೆದಿದೆ.
ರೆಡ್ಮಿ ನೋಟ್ 12 5G ಹಾಗೂ ಮೊಟೊ G73 ಫೋನ್‌ನ ಬ್ಯಾಟರಿ ಸಾಮರ್ಥ್ಯ
ರೆಡ್ಮಿ ಫೋನ್ 33W ವೇಗದ ಚಾರ್ಜಿಂಗ್ ನೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಇಡೀ ದಿನ ಬಳಕೆ ಮಾಡಬಹುದು. ಹಾಗೆಯೇ ಇದು ಪೂರ್ಣವಾಗಿ ಚಾರ್ಜ್ ಆಗಲು ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಇನ್ನು ಮೊಟೊ ಫೋನ್ ಸಹ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, 30W ಟರ್ಬೋಪವರ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಈ ವಿಚಾರದಲ್ಲಿ ರೆಡ್ಮಿ ಕೊಂಚ ಉತ್ತಮ ಎನ್ನಬಹುದಾಗಿದೆ.

ರೆಡ್ಮಿ ನೋಟ್ 12 5G ಹಾಗೂ ಮೊಟೊ G73 ಫೋನ್‌ಗಳ ಬೆಲೆ ವಿವರ
ರೆಡ್ಮಿ ನೋಟ್ 12 5Gಯ 4GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಫೋನ್‌ಗೆ 17,999 ರೂ. ನಿಗದಿ ಮಾಡಲಾಗಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೇಜ್ ವೇರಿಯಂಟ್‌ಗೆ 19,999ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಇದರ ಪ್ರತಿಸ್ಪರ್ಧಿ ಫೋನ್ ಆಗಿರುವ ಮೊಟೊದ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಫೋನ್‌ಗೆ 18,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಅದಾಗ್ಯೂ ಆಫರ್ ಬೆಲೆ 16,999ರೂ. ಗಳಿಗೆ ಖರೀದಿಸಬಹುದು.
ಈ ಫೋನ್‌ಗಳಲ್ಲಿ ಎರಡೂ ಸಹ ಸಣ್ಣ ಪ್ರಮಾಣದ ಭಿನ್ನತೆ ಹೊಂದಿದ್ದು, ಇನ್ನುಳಿದಂತೆ ಬೆಲೆಗೆ ತಕ್ಕಂತದ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಈ ಮೂಲಕ ಉತ್ತಮ ಕಾರ್ಯಕ್ಷಮತೆ ಇಷ್ಟಪಡುವವರು ಮೊಟೊ ಫೋನ್ ಖರೀದಿ ಮಾಡಬಹುದು. ಹಾಗೆಯೇ ಕ್ಯಾಮೆರಾ ಹಾಗೂ ಬ್ಯಾಟರಿ ಸಾಮರ್ಥ್ಯಕ್ಕೆ ಗಮನಕೊಡುವವರು ರೆಡ್ಮಿ ಫೋನ್ ಅನ್ನು ಖರೀದಿ ಮಾಡಬಹುದು. ಇದರಲ್ಲಿ ರೆಡ್ಮಿ ಈಗಾಗಲೆ ಮಾರಾಟಕ್ಕೆ ಲಭ್ಯವಾಗಿದ್ದು, ಮೊಟೊ ಫೋನ್ ಅನ್ನು ಈ ತಿಂಗಳ 16 ರಿಂದ ಖರೀದಿ ಮಾಡಬಹುದಾಗಿದೆ.


Click it and Unblock the Notifications








