Subscribe to Gizbot

ರೂ.17,999 ಮೌಲ್ಯದ Moto M ಫ್ಲಿಪ್‌ಕಾರ್ಟ್ ಏಕ್ಸ್‌ಚೇಂಜ್ ಆಫರ್‌ನಲ್ಲಿ ಕೇವಲ ರೂ 2,999ಕ್ಕೆ ಲಭ್ಯ

Written By:

ಸದ್ಯ ದೇಶದಲ್ಲಿ ಆನ್‌ಲೈನ್ ಶಾಪಿಂಗ್ ಅಧಿಕವಾಗುತ್ತಿದ್ದು, ಅದರಲ್ಲಿಯೂ ಮೊಬೈಲ್ ಸೇಲ್ ಅಂತೂ ಇ-ಕಾಮರ್ಸ್ ಸೈಟುಗಳಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಸಾಮಾನ್ಯ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಮತ್ತು ಆಕರ್ಷಕ ಕೊಡುಗೆಗಳು ಆನ್ ಲೈನ್ ನಲ್ಲಿ ಲಭ್ಯವಿದೆ.

Moto M ಫ್ಲಿಪ್‌ಕಾರ್ಟ್ ಏಕ್ಸ್‌ಚೇಂಜ್ ಆಫರ್‌ನಲ್ಲಿ ಕೇವಲ ರೂ 2,999ಕ್ಕೆ ಲಭ್ಯ

ಓದಿರಿ..: ಪೋನಿಲ್ಲವಾದರು ಡಾಂಗಲ್ ನಲ್ಲಿ ಜಿಯೋ 4G ಬಳಸಬಹುದು..!

ಸದ್ಯ ಮಾರುಕಟ್ಟೆಗೆ ಬಂದಿರುವ 4GB RAM, 64GB ಸಾಮಾರ್ಥ್ಯದ 'ಮೊಟೋ ಎಂ' ಸ್ಮಾರ್ಟ್‌ಪೋನು ಫ್ಲಿಪ್ ಕಾರ್ಟಿನಲ್ಲಿ ಕೇವಲ ರೂ 2,999ಕ್ಕೆ ಮಾರಾಟ ಮಾಡಲಾಗುತ್ತಿದೆ.

Moto M ಸ್ಮಾರ್ಟ್‌ಪೋನು 2.2 GHz ಆಕ್ಟಾಕೋರ್ ಮಿಡಿಯಾ ಟೆಕ್ Helio P15 ಪ್ರೋಸೆಸರ್ ಹೊಂದಿದ್ದು, ಸದ್ಯ ಪೋನು ಎರಡು ಮಾದರಿಯಲ್ಲಿ ದೊರೆಯಲಿದ್ದು, 3GB RAM/32GB ಇಂಟರ್ನಲ್ ಮೆಮೊರಿ ಹೊಂದಿರುವ ಪೋನು ರೂ.15,999ಕ್ಕೆ ಲಭ್ಯವಿದ್ದರೆ, 4GB RAM/64GB ಇಂಟರ್ನಲ್ ಮೆಮೊರಿ ಹೊಂದಿರುವ ಪೋನು ರೂ. 17,999ಕ್ಕೆ ಲಭ್ಯವಿದೆ. ಆದರೆ ಈ ಬೆಲೆಯ ಮೇಲೆ ಪ್ಲಿಪ್‌ಕಾರ್ಟ್ ಕೊಡುಗೆಯನ್ನು ನೀಡಿದೆ.

Moto M ಫ್ಲಿಪ್‌ಕಾರ್ಟ್ ಏಕ್ಸ್‌ಚೇಂಜ್ ಆಫರ್‌ನಲ್ಲಿ ಕೇವಲ ರೂ 2,999ಕ್ಕೆ ಲಭ್ಯ

ಓದಿರಿ..:ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಸೇವೆ ನೀಡಲು ಮುಂದಾದ ಅಮೆಜಾನ್

ಮೊಬೈಲ್ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಫ್ಲಿಪ್‌ಕಾರ್ಟ್‌ ಮೊಟೋ ಎಂ ಸಿಲ್ವರ್ ಪೋನಿನ ಮೇಲೆ ರೂ. 15000 ವರೆಗೆ ಏಕ್ಸಚೇಂಜ್ ಆಫರ್ ನೀಡಿದ್ದು, ನೀವು ನೀಡುವ ಹಳೇ ಪೋನಿಗೆ 15000 ವರೆಗೆ ಹಣವನ್ನು ನೀಡಲಿದೆ. ಈ ಹಿನ್ನಲೆಯಲ್ಲಿ ಡೆಲಿವರಿ ಚಾರ್ಜ್ ಸೇರಿದಂತೆ ಪೋನಿನ ಬೆಲೆ ರೂ 2,999 ಆಗಲಿದೆ. ಒಟ್ಟಿನಲ್ಲಿ ಕಡಿಮೆ ಬೆಲೆಗೆ ಪೋನ್ ಬೇಕು ಅಂದವರು ನಿಮ್ಮ ಪೋನನ್ನು ನೀಡಿ ಮೊಟೋ ಎಂ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Read more about:
English summary
Flipkart is also offering exchange offers of up to Rs 15,000 for the Silver variant which reduces the total cost to just Rs 2,999 excluding delivery charges. to know more visit kannada.goizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot