Home
ಸುದ್ದಿಜಾಲ

Moto: ಭಾರತದಲ್ಲಿ ಶೀಘ್ರವೇ ಲಾಂಚ್‌ ಆಗಲಿದೆ ಮೊಟೊ ರೇಜರ್ 50 ಅಲ್ಟ್ರಾ ಫ್ಲಿಪ್ ಫೋನ್..

ಮೊಟೊರೊಲಾ ಫೋನ್‌ಗಳು (Motorola phone) ವಿಶೇಷ ಫೀಚರ್ಸ್‌ ಆಯ್ಕೆಯ ಜೊತೆಗೆ ಭಾರೀ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಭಾರತದಲ್ಲಿ ಮೊಟೊ ರೇಜರ್ 50 ಅಲ್ಟ್ರಾ ಫ್ಲಿಪ್ ಫೋನ್ (Moto Razr 50 Ultra Flip Phone) ಶೀಘ್ರದಲ್ಲೇ ಲಾಂಚ್‌ ಆಗಲಿದೆ ಎನ್ನುವ ಮಾಹಿತಿ ಇದೆ.

ಹೌದು, ಮೊಟೊರೊಲಾದ ಮುಂದಿನ ಜನ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತಕ್ಕೆ ಆಗಮಿಸಬಹುದು ಎಂದು ತಿಳಿದುಬಂದಿದೆ. ಕಂಪನಿಯ ಹೊಸ ಫ್ಲಿಪ್ ಫೋನ್ ಅನ್ನು ಮೋಟೋ ರೇಜರ್ 50 ಅಲ್ಟ್ರಾ ಎಂದು ಕರೆಯಲಾಗಿದ್ದು. BIS ಪ್ರಮಾಣೀಕರಣ ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಹಾಗಿದ್ರೆ, ಇದು ಯಾವಾಗ ಲಾಂಚ್‌ ಆಗಲಿದೆ?, ಏನೆಲ್ಲಾ ಫೀಚರ್ಸ್‌ ಆಯ್ಕೆ ಪಡೆದಿರಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿ ಶೀಘ್ರವೇ ಲಾಂಚ್‌ ಆಗಲಿದೆ ಮೊಟೊ ರೇಜರ್ 50 ಅಲ್ಟ್ರಾ ಫ್ಲಿಪ್ ಫೋನ್..

ಮೋಟೋ ರೇಜರ್ 50 ಅಲ್ಟ್ರಾ ಸ್ಮಾರ್ಟ್‌ಫೋನ್: ಜನವರಿ 2024 ರಲ್ಲಿ ಮೋಟೋ ರೇಜರ್ 40 ಫೋನ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಪೀಚ್ ಫಜ್ ಬಣ್ಣ ಆಯ್ಕೆಯಲ್ಲಿ ಘೋಷಣೆ ಮಾಡಿತ್ತು. ಅದರಂತೆ ಈಗ ಮುಂದಿನ ಜನ್‌ನ ಫೋನ್‌ ಅನ್ನು ಘೋಷಣೆ ಮಾಡುವ ಕೆಲಸದಲ್ಲಿ ಮೊಟೊ ನಿರತವಾಗಿದೆ ಎಂದು ತಿಳಿದುಬಂದಿದೆ. ಅದರಂತೆ ಶೀಘ್ರದಲ್ಲೇ ಈ ಫೋನ್‌ ಭಾರತಕ್ಕೆ ಆಗಮಿಸಬಹುದು ಎಂದು ತೋರುತ್ತಿದೆ. ಮೊಟೊ ರೇಜರ್ 50 ಅಲ್ಟ್ರಾ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಪ್ರಮಾಣೀಕರಣದಲ್ಲಿ ಗುರುತಿಸಲ್ಪಟ್ಟಿದ್ದು, ಇದು XT2453-1 ಮಾಡೆಲ್ ಸಂಖ್ಯೆಯನ್ನು ಹೊಂದಿದೆ.

ಇನ್ನು ಮುಂಬರುವ ಫ್ಲಿಪ್ ಫೋನ್‌ನ ಫೀಚರ್ಸ್‌ ಮತ್ತು ವಿನ್ಯಾಸದಂತಹ ಯಾವುದೇ ಸೂಕ್ಷ್ಮ ವಿವರಗಳನ್ನು BIS ಪ್ರಮಾಣೀಕರಣವು ಬಹಿರಂಗಪಡಿಸಲಿಲ್ಲ. ಆದಾಗ್ಯೂ, ಇಲ್ಲಿಯವರೆಗೆ ತಿಳಿದಿರುವ ವಿಷಯಗಳ ಆಧಾರದ ಮೇಲೆ ಈ ರೇಜರ್‌ 50 ಅಲ್ಟ್ರಾ ಬಹುಶಃ ರೇಜರ್‌ 40 ಅಲ್ಟ್ರಾಗೆ ಹೋಲುವ ವಿನ್ಯಾಸವನ್ನು ಪಡೆಯಲಿದೆ ಎನ್ನಲಾಗಿದೆ. ಅದರಂತೆ ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್ ಸರಣಿಯ ಪ್ರೊಸೆಸರ್ ಅನ್ನು ಹೊಂದಿರುವ ಸಾಧ್ಯತೆ ಇದೆ. ರೇಜರ್ 40 ಅಲ್ಟ್ರಾ ಸ್ನಾಪ್ಡ್ರಾಗನ್ 8+ ಜನ್ 1 ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಂಡಿದೆ.

ಭಾರತದಲ್ಲಿ ಶೀಘ್ರವೇ ಲಾಂಚ್‌ ಆಗಲಿದೆ ಮೊಟೊ ರೇಜರ್ 50 ಅಲ್ಟ್ರಾ ಫ್ಲಿಪ್ ಫೋನ್..

ಇನ್ನು ರೇಜರ್‌ 40 ಅಲ್ಟ್ರಾದ ಇತರೆ ಫೀಚರ್ಸ್‌ ಕಡೆ ಕಣ್ಣಾಯಿಸುವುದಾದರೆ ಈ ಫೋನ್‌ 6.9 ಇಂಚಿನ LTPO OLED ಪ್ರಾಥಮಿಕ ಡಿಸ್‌ಪ್ಲೇ ಮತ್ತು 3.6 ಇಂಚಿನ ಕವರ್ ಡಿಸ್‌ಪ್ಲೇಯನ್ನು ಹೊಂದಿದೆ. ರಿಯರ್‌ನಲ್ಲಿ 12 ಮೆಗಾಪಿಕ್ಸೆಲ್ ಹಾಗೂ 13 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಆಯ್ಕೆ ಪಡೆದುಕೊಂಡಿದೆ.

ಇದರ ಜೊತೆಗೆ ಈ ಫೋನ್ 3,800mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 5W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.ಈ ಕಾರಣದಿಂದಾಗಿ ಮುಂದಿನ ಜನ್‌ನ ಫೋನ್‌ನಲ್ಲಿ ಬ್ಯಾಟರಿ, ಪ್ರೊಸೆಸರ್ ಮತ್ತು ಕ್ಯಾಮೆರಾಗಳ ವಿಷಯದಲ್ಲಿ ಕೆಲವು ದೊಡ್ಡ ನವೀಕರಣಗಳನ್ನು ನಿರೀಕ್ಷಿಸಬಹುದು. ಈ ಫೋನ್‌ನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ನೀವು ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿ ಇರಿ.

ಭಾರತದಲ್ಲಿ ಶೀಘ್ರವೇ ಲಾಂಚ್‌ ಆಗಲಿದೆ ಮೊಟೊ ರೇಜರ್ 50 ಅಲ್ಟ್ರಾ ಫ್ಲಿಪ್ ಫೋನ್..

ಮೊಟೊ G64 5G : ಈ ನಡುವೆ ಕೆಲವು ದಿನಗಳ ಹಿಂದೆ ಭಾರತದಲ್ಲಿ ಮೊಟೊ G64 5G (Moto G64 5G) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲಾಗಿದೆ. ಈ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಲು ಲಭ್ಯವಿದ್ದು, 8 GB RAM + 128 GB ಕಾನ್ಫಿಗರೇಶನ್‌ನ ಬೆಲೆ 14,999 ರೂ.ಗಳಾಗಿದ್ದರೆ, 12 GB RAM + 256 GB ಸ್ಟೋರೇಜ್ ಆಯ್ಕೆಯ ಬೆಲೆ 16,999 ರೂ.ಗಳಾಗಿದೆ. ಅಲ್ಲದೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಈ ಫೋನ್‌ ಅನ್ನು ಖರೀದಿ ಮಾಡಿದ್ರೆ 1000 ರಿಯಾಯಿತಿ ಸಹ ಸಿಗಲಿದೆ.

ಈ ಫೋನ್ 6.5 ಇಂಚಿನ IPS LCD FHD+ ಪಂಚ್-ಹೋಲ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಡೈಮೆನ್ಸಿಟಿ 7025 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಹಾಗೆಯೇ 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಮೈಕ್ರೋ SD ಕಾರ್ಡ್ ಮೂಲಕ ಮೆಮೊರಿ ವಿಸ್ತರಣೆಯನ್ನು ಸಹ ಬೆಂಬಲಿಸುತ್ತದೆ.

Best Mobiles in India

English summary
Motorola's next-gen foldable smartphone may arrive in India soon. The company's new flip phone is called the Moto Razr 50 Ultra. Featured on BIS certification site.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+