ಭಾರತದಲ್ಲಿ ಮೊಟೊ ಟ್ಯಾಬ್ G62 ಬಿಡುಗಡೆ!..ಜಬರ್ದಸ್ತ್ ಬ್ಯಾಟರಿ ಬ್ಯಾಕ್‌ಅಪ್!
ಮೊಟೊರೊಲಾ ಸಂಸ್ಥೆಯು ಭಿನ್ನ ಶ್ರೇಣಿಯ ಡಿವೈಸ್‌ಗಳಿಂದ ಟೆಕ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಮೊಟೊರೊಲಾ ಸಂಸ್ಥೆಯು ಇದೀಗ ಭಾರತದಲ್ಲಿ ಹೊಸ ಆಂಡ್ರಾಯ್ಡ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ. ಅದುವೇ ಮೊಟೊ ಟ್ಯಾಬ್ G62 (Moto Tab G62) ಆಗಿದೆ. ಈ ಸಾಧನವು ಬಜೆಟ್ ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ಕೆಲವೊಂದು ಆಕರ್ಷಕ ಫೀಚರ್ಸ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ.

ಹೌದು, ಮೊಟೊರೊಲಾ ತನ್ನ ಹೊಸದಾಗಿ ಮೊಟೊ ಟ್ಯಾಬ್ G62 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸಾಧನವು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 680 SoC ಅನ್ನು ಹೊಂದಿದ್ದು, ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಸಹ ಪಡೆದಿದೆ. ಜೊತೆಗೆ ಈ ಫೋನ್ ರೀಡಿಂಗ್ ಮೋಡ್, ಗೂಗಲ್ ಕಿಡ್ಸ್ ಸ್ಪೇಸ್ ನಂತಹ ಕೆಲವು ಆಕರ್ಷಕ ಆಯ್ಕೆಗಳನ್ನು ಪಡೆದಿದೆ. ಇನ್ನುಳಿದಂತೆ ಮೊಟೊ ಟ್ಯಾಬ್ G62 ಸಾಧನವು ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ? ಈ ಡಿವೈಸ್‌ನ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ಪ್ರೊಸೆಸರ್
ಮೊಟೊ ಟ್ಯಾಬ್ G62 ಡಿವೈಸ್ ವಿಶಾಲ ಸ್ಕ್ರೀನ್ ಗಾತ್ರ ಒಳಗೊಂಡಿದ್ದು, 10.6 ಇಂಚಿನ IPS LCD ಡಿಸ್‌ಪ್ಲೇ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 2K ರೆಸಲ್ಯೂಶನ್ ಅನ್ನು ಪಡೆದಿದೆ. ಹಾಗೆಯೇ ಈ ಟ್ಯಾಬ್‌ನ ಡಿಸ್‌ಪ್ಲೇಯು 60Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಈ ಸಾಧನವು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 680 SoC ಅನ್ನು ಹೊಂದಿದ್ದು, ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಸಹ ಪಡೆದಿದೆ.

ಕ್ಯಾಮೆರಾ ಮತ್ತು ಬ್ಯಾಟರಿ
ಮೊಟೊ ಟ್ಯಾಬ್ G62 ಡಿವೈಸ್ ಹಿಂಬದಿಯಲ್ಲಿ ಒಂದು ರಿಯರ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಅದು 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಟ್ಯಾಬ್ 7700 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 20W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ.

ಇತರೆ ಸೌಲಭ್ಯಗಳು
ಮೊಟೊ ಟ್ಯಾಬ್ G62 ಡಿವೈಸ್ ಟ್ಯಾಬ್ಲೆಟ್ ಉನ್ನತ ದರ್ಜೆಯ ಅಲ್ಯೂಮಿನಿಯಂ ಬಿಲ್ಡ್ ಮತ್ತು ಡ್ಯುಯಲ್-ಟೋನ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದೆ. ಇದು ಡಾಲ್ಬಿ ಆಡಿಯೊದಿಂದ ಟ್ಯೂನ್ ಮಾಡಲಾದ ಕ್ವಾಡ್ ಸ್ಪೀಕರ್‌ಗಳನ್ನು ಹೊಂದಿದೆ. 4GB RAM ಮತ್ತು 64GB ಆನ್‌ಬೋರ್ಡ್ ಸಂಗ್ರಹಣೆಯ ಆಯ್ಕೆ ಪಡೆದಿದ್ದು, ಜೊತೆಗೆ ಬಾಹ್ಯ ಮೆಮೊರಿಯನ್ನು ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 1TB ವರೆಗೂ ವಿಸ್ತರಿಸಬಹುದಾಗಿದೆ. ಜೊತೆಗೆ ಟ್ಯಾಬ್ಲೆಟ್ ವಿಶೇಷ ರೀಡಿಂಗ್ ಮೋಡ್, ಬಹು ಬಳಕೆದಾರ ಖಾತೆಗಳು, ಗೂಗಲ್ ಕಿಡ್ಸ್ ಸ್ಪೇಸ್ ಇತ್ಯಾದಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಮೊಟೊ ಟ್ಯಾಬ್ G62 ಬೆಲೆ ಎಷ್ಟು? ಮತ್ತು ಲಭ್ಯತೆ?
ಮೊಟೊ ಟ್ಯಾಬ್ G62 ಡಿವೈಸ್ ಮೂರು ವಿಭಿನ್ನ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಮೊಟೊ ಟ್ಯಾಬ್ G62 ಡಿವೈಸ್ Wi-Fi ಮಾತ್ರ ವೇರಿಯಂಟ್ 4GB RAM ಮತ್ತು 64GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಇದರ ಬೆಲೆ 15,999 ರೂ. ಆಗಿದೆ. ಹಾಗೆಯೇ ಮೊಟೊ ಟ್ಯಾಬ್ G62 ಡಿವೈಸ್ LTE ವೇರಿಯಂಟ್ ಬೆಲೆ 17,999 ರೂ. ಆಗಿದೆ. ಇನ್ನು ಈ ಡಿವೈಸ್ ಇದೇ ಆಗಸ್ಟ್ 17 ರಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದ್ದು, ಫ್ರಾಸ್ಟ್ ಬ್ಲೂ ಬಣ್ಣದಲ್ಲಿ ಖರೀದಿಗೆ ಲಭ್ಯ.


Click it and Unblock the Notifications








