ಮೊಟೊ ಟ್ಯಾಬ್ G70 ಬೆಲೆಯಲ್ಲಿ ಭರ್ಜರಿ ಇಳಿಕೆ!..ಈ ಆಫರ್ ಬಿಡಬೇಡಿ!
ಮೊಟೊರೊಲಾ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಟ್ಯಾಬ್ ಡಿವೈಸ್‌ಗಳು ಸಹ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿವೆ. ಆ ಪೈಕಿ ಮೊಟೊ ಟ್ಯಾಬ್ G70 ಟ್ಯಾಬ್ಲೆಟ್ ಕೆಲವು ಆಕರ್ಷಕ ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಈ ಮೊಟೊ ಟ್ಯಾಬ್ G70 ಡಿವೈಸ್ ಬೆಲೆಯಲ್ಲಿ ಈಗ ಭರ್ಜರಿ ಇಳಿಕೆ ಆಗಿದೆ.
ಹೌದು, ಮೊಟೊ ಟ್ಯಾಬ್ G70 ಟ್ಯಾಬ್ ಬೆಲೆಯಲ್ಲಿ ಈಗ 2,000ರೂ. ಗಳ ಇಳಿಕೆ ಆಗಿದೆ. ಹೀಗಾಗಿ ಬೆಲೆ ಇಳಿಕೆ ಬಳಿಕ ಈ ಟ್ಯಾಬ್ 4GB RAM ಮತ್ತು 64GB ಸ್ಟೋರೇಜ್ 19,999ರೂ. ಗಳ ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಡಿವೈಸ್ ಮಾಡರ್ನಿಸ್ಟ್ ಟೀಲ್ ಕಲರ್ ಆಯ್ಕೆಯಲ್ಲಿ ಲಭ್ಯ.

ಮೊಟೊ ಟ್ಯಾಬ್ G70 ಟ್ಯಾಬ್ ಡಿವೈಸ್ ಹೆಲಿಯೊ G90T ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 13 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಹಾಗಾದರೆ ಮೊಟೊ ಟ್ಯಾಬ್ G70 ಟ್ಯಾಬ್ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಮೊಟೊ ಟ್ಯಾಬ್ G70 ಡಿಸ್‌ಪ್ಲೇ : ಮೊಟೊ ಟ್ಯಾಬ್ G70 LTE 2,000 x 1,200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 11-ಇಂಚಿನ IPS 2K ಡಿಸ್‌ಪ್ಲೇ ಹೊಂದಿದೆ. ಇದು LCD ಡಿಸ್‌ಪ್ಲೇ ಆಗಿದ್ದು 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಟ್ಯಾಬ್ಲೆಟ್‌ನ ಸ್ಕ್ರೀನ್ ಕಡಿಮೆ ನೀಲಿ ಬೆಳಕಿನ ಮಾನ್ಯತೆ ಮತ್ತು ಸುಧಾರಿತ ಐ ಪ್ರೊಟೆಕ್ಷನ್‌ಗಾಗಿ TUV ರೈನ್‌ಲ್ಯಾಂಡ್ ಪ್ರಮಾಣೀಕರಿಸಲ್ಪಟ್ಟಿದೆ.

ಮೊಟೊ ಟ್ಯಾಬ್ G70 ಪ್ರೊಸೆಸರ್ : ಮೊಟೊ ಟ್ಯಾಬ್ G70 LTE ಟ್ಯಾಬ್ಲೆಟ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G90T ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಮೊಟೊ ಟ್ಯಾಬ್ G70 ಕ್ಯಾಮೆರಾ : ಮೊಟೊ ಟ್ಯಾಬ್ G70 ಸಿಂಗಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಜೊತೆಗೆ ಈ ಟ್ಯಾಬ್ಲೆಟ್ f/2.2 ಅಪರ್ಚರ್ ಲೆನ್ಸ್‌ನೊಂದಿಗೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಮೊಟೊ ಟ್ಯಾಬ್ G70 ಬ್ಯಾಟರಿ : ಮೊಟೊ ಟ್ಯಾಬ್ G70 7,700 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು USB ಟೈಪ್ ಸಿ ಮೂಲಕ 20W ನಲ್ಲಿ ಟರ್ಬೋಪವರ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಈ ಟ್ಯಾಬ್ಲೆಟ್ ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಕ್ವಾಡ್-ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.

ಮೊಟೊ ಟ್ಯಾಬ್ G70 ಕನೆಕ್ಟಿವಿಟಿ ಆಯ್ಕೆಗಳಲ್ಲಿ GPS ಮತ್ತು GLONASS ಜೊತೆಗೆ 4G LTE, Wi-Fi ಮತ್ತು Bluetooth v5.1 ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಅಕ್ಸಿಲೆರೊ ಮೀಟರ್, ಗೈರೊಸ್ಕೋಪ್, ಹಾಲ್ ಎಫೆಕ್ಟ್ ಸೆನ್ಸರ್ ಮತ್ತು ಆಂಬಿಯೆಂಟ್ ಲೈಟ್ ಸೆನ್ಸರ್ ಅನ್ನು ಒಳಗೊಂಡಿದೆ.
ಮೊಟೊ ಟ್ಯಾಬ್ G70 ಬೆಲೆ ಮತ್ತು ಕಲರ್ ಆಯ್ಕೆ : ಮೊಟೊ ಟ್ಯಾಬ್ G70 ಟ್ಯಾಬ್ಲೆಟ್ 4GB RAM ಮತ್ತು 64 GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದ್ದು, ಈ ಟ್ಯಾಬ್ಲೆಟ್ ಮಾಡರ್ನಿಸ್ಟ್ ಟೀಲ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ.


Click it and Unblock the Notifications








