ಮೊಟೊರೊಲಾ 4K ಆಂಡ್ರಾಯ್ಡ್ ಟಿವಿ ಸ್ಟಿಕ್ ಬಿಡುಗಡೆ!..ಬೆಲೆ ಎಷ್ಟು?

|

ಮೊಟೊರೊಲಾ ಸಂಸ್ಥೆ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ವಲಯದಲ್ಲಿಯೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈಗಾಗಲೇ ಹಲವು ವೈವಿಧ್ಯಮಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಫ್ಲಿಪ್‌ಕಾರ್ಟ್‌ನ ಪಾಲುದಾರಿಕೆಯಲ್ಲಿ ಮೊಟೊರೊಲಾ ತನ್ನ ಮೊದಲ ಸ್ಟ್ರೀಮಿಂಗ್ ಸ್ಟಿಕ್ ಅನ್ನು ಬಿಡುಗಡೆ ಮಾಡಿದೆ.ಇದನ್ನು ಮೊಟೊರೊಲಾ 4K ಆಂಡ್ರಾಯ್ಡ್ ಟಿವಿ ಸ್ಟಿಕ್ ಎಂದು ಹೆಸರಿಸಲಾಗಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಕಂಪೆನಿ ತನ್ನ ಹೊಸ 4K ಆಂಡ್ರಾಯ್ಡ್‌ ಟಿವಿ ಸ್ಟಿಕ್‌ ಅನ್ನು ಲಾಂಚ್‌ ಮಾಡಿದೆ. ಈ ಡಿವೈಸ್‌ನ ಬೆಲೆ 3,999 ರೂ. ಆಗಿದ್ದು, ಮಾರ್ಚ್ ಮೂರನೇ ವಾರದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಾಗಲಿದೆ. ಇದು ಅಮೆಜಾನ್‌ನ ಫೈರ್ ಟಿವಿ ಸ್ಟಿಕ್ 4K, ಮಿ ಬಾಕ್ಸ್ 4K, ಮಾರ್ಕ್ ಟರ್ಬೊಸ್ಟ್ರೀಮ್ ಗಳೊಂದಿಗೆ ಸ್ಪರ್ಧಿಸಲಿದೆ. ಇನ್ನುಳಿದಂತೆ ಈ ಟಿವಿ ಸ್ಟಿಕ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

 ಒಟಿಟಿ ಮಾರುಕಟ್ಟೆ

ಕೋವಿಡ್ -19 ಶುರುವಾದ ನಂತರ ದೇಶದಲ್ಲಿ ಒಟಿಟಿ ಮಾರುಕಟ್ಟೆ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದೇ ಕಾರಣಕ್ಕೆ ಹೊಸ ಮಾದರಿಯ ಸ್ಟ್ರೀಮಿಂಗ್‌ ಸ್ಟಿಕ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಆದರಂತೆ ಮೊಟೊರೊಲಾ ಸಂಸ್ತೆ ಹೊಸ ಸ್ಟ್ರೀಮಿಂಗ್ ಸ್ಟಿಕ್ ಅನ್ನು ಬಿಡುಗಡೆ ಮಾಡಿದೆ. ಪಿಡಬ್ಲ್ಯೂಸಿಯ ವರದಿಯ ಪ್ರಕಾರ, ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಒಟಿಟಿ ಮಾರುಕಟ್ಟೆಯಾಗಿದೆ. ನಿರೀಕ್ಷಿತ ಬೆಳವಣಿಗೆಯ ದರವು 28.6 ಶೇಕಡಾ ಸಿಎಜಿಆರ್ ಆಗಿದೆ.

ಮೊಟೊರೊಲಾ 4K

ಇನ್ನು ಮೊಟೊರೊಲಾ 4K ಆಂಡ್ರಾಯ್ಡ್ ಟಿವಿ ಸ್ಟಿಕ್ 2160p, 1080p ಮತ್ತು 720p ರೆಸಲ್ಯೂಷನ್‌ಗಳಲ್ಲಿ 60fps ನಲ್ಲಿ ಸ್ಟ್ರೀಮಿಂಗ್ ವಿಷಯವನ್ನು ಬೆಂಬಲಿಸುತ್ತದೆ. ಇದು HDR10, HLG ವಿಡಿಯೋ ಸ್ವರೂಪಗಳಿಗೆ ಬೆಂಬಲವನ್ನು ಸಹ ಹೊಂದಿದೆ. 2GHz ನಲ್ಲಿ ಗಡಿಯಾರ ಹೊಂದಿರುವ ಕಾರ್ಟೆಕ್ಸ್ ಎ 53 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಸಹ ಒಳಗೊಂಡಿದೆ. ಇದು 2GB RAM ಜೊತೆಗೆ 16 GB ಇಂಟರ್‌ ಸ್ಟೋರೇಜ್‌ ಅನ್ನು ಸಹ ಹೊಂದಿದೆ. ಈ ಡಿವೈಸ್‌ Chromecast ಮತ್ತು Google Home ಗೆ ಬೆಂಬಲದೊಂದಿಗೆ Google ನ Android 9.0 ಆಪರೇಟಿಂಗ್ ಸಿಸ್ಟಮ್ ಅನ್ನು ಚಾಲನೆ ಮಾಡುತ್ತದೆ.

ಮೊಟೊರೊಲಾ 4K

ಇದಲ್ಲದೆ ಮೊಟೊರೊಲಾ 4K ಆಂಡ್ರಾಯ್ಡ್ ಟಿವಿ ಸ್ಟಿಕ್ ಧ್ವನಿ ನಿಯಂತ್ರಣ ಶಕ್ತಗೊಂಡ ರಿಮೋಟ್‌ನೊಂದಿಗೆ ಬರುತ್ತದೆ. ಇದನ್ನು ಇಂಟರ್‌ಬಿಲ್ಟ್‌ ಗೂಗಲ್ ಅಸಿಸ್ಟೆಂಟ್‌ನೊಂದಿಗೆ ಮಾತನಾಡಲು ಬಳಸಬಹುದು. ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ಬಳಸಿ ಸ್ಟ್ರೀಮಿಂಗ್ ಸ್ಟಿಕ್ ಅನ್ನು ಸಹ ನಿಯಂತ್ರಿಸಬಹುದು. ರಿಮೋಟ್ ಗೂಗಲ್ ಅಸಿಸ್ಟೆಂಟ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, Zee 5 ಮತ್ತು ಯೂಟ್ಯೂಬ್‌ಗಾಗಿ ಹಾಟ್‌ಕೀಗಳೊಂದಿಗೆ ಬರುತ್ತದೆ. ಇನ್ನು ಈ ಡಿವೈಸ್‌ನ ಬೆಲೆ 3,999 ರೂ ಆಗಿದ್ದು, ಮಾರ್ಚ್‌ ಮೂರನೇ ವಾರದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ.

Best Mobiles in India

English summary
Motorola 4K Android TV Stick priced at Rs 3,999 launched in India. Will take on Amazon's Fire TV Stick 4K, Mi Box 4K, MarQ Turbostream and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X