Motorola: 20 ಸಾವಿರ ರೂ. ಬೆಲೆಯ ಮೊಟೊರೊಲಾದ ಈ ಸ್ಮಾರ್ಟ್‌ಟಿವಿಗೆ 45% ರಿಯಾಯಿತಿ!
ಮೊಟೊರೊಲಾ (Motorola) ಕಂಪೆನಿಯು ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಸ್ಮಾರ್ಟ್‌ಟಿವಿಗಳನ್ನೂ ಸಹ ಅನಾವರಣ ಮಾಡಿದೆ. ಈ ಸ್ಮಾರ್ಟ್‌ಟಿವಿಗಳು ಸುಧಾರಿತ ಫೀಚರ್ಸ್ ಆಯ್ಕೆಯೊಂದಿಗೆ ಬಳಕೆದಾರರಿಗೆ ಭಿನ್ನ ಅನುಭವ ನೀಡುತ್ತವೆ.
ಹೌದು, ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳಷ್ಟೇ ಮೊಟೊರೊಲಾ ಸ್ಮಾರ್ಟ್‌ಟಿವಿಗಳು ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿವೆ. ಅದರಲ್ಲೂ ಅಗ್ಗದ ದರದಲ್ಲಿ ಲಭ್ಯ ಆಗುತ್ತಿರುವುದರಿಂದ ಈ ಟಿವಿಗಳನ್ನು ಜನರು ಹೆಚ್ಚು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ. ಅದರಂತೆ ಈಗ ಪ್ರಮುಖ ಇ ಕಾಮರ್ಸ್ ಸೈಟ್‌ನಲ್ಲಿ ಮೊಟೊರೊಲಾ 80 cm (32 ಇಂಚು) ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಗೂಗಲ್ ಟಿವಿಗೆ (MOTOROLA 80 cm (32 inch) HD Ready LED Smart Google TV 32HDGDMBSXP )ಆಫರ್ ನೀಡಲಾಗಿದೆ. ಹಾಗಿದ್ರೆ, ಬನ್ನಿ ಈ ಸ್ಮಾರ್ಟ್‌ಟಿವಿ ಫೀಚರ್ಸ್ ಹಾಗೂ ಬೆಲೆ ವಿವರ ಗಮನಿಸೋಣ ಬನ್ನಿ.

ಮೊಟೊರೊಲಾ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಗೂಗಲ್ ಟಿವಿ ಆಫರ್ ಮಾಹಿತಿ: ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್ ಇದೀಗ ಈ ಸ್ಮಾರ್ಟ್‌ಟಿವಿಗೆ ಆಫರ್ ನೀಡಿದೆ. ಅಂದರೆ ಇದು 20,000 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 10,999 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಂದರೆ ಈ ಸ್ಮಾರ್ಟ್‌ಟಿವಿಗೆ 45% ರಿಯಾಯಿತಿ ನೀಡಲಾಗಿದೆ.
ಅದಾಗ್ಯೂ ನೀವು ಕೆಲವು ಬ್ಯಾಂಕ್ ಆಪರ್ ಅನ್ನೂ ಪಡೆಯಬಹುದಾಗಿದ್ದು, ಈ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಖರೀದಿ ಮಾಡಬಹುದಾಗಿದೆ. ಯುಪಿಐ ವ್ಯವಹಾರದ ಮೇಲೆ ಹೆಚ್ಚುವರಿ 1% ರಿಯಾಯಿತಿ, ಬ್ಯಾಂಕ್ ಆಫ್ ಬರೋಡಾ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಫ್ಲಿಪ್‌ಕಾರ್ಟ್ ಡಿಜಿಟಲ್ ಗಿಫ್ಟ್ ಕಾರ್ಡ್ ಖರೀದಿಯಲ್ಲಿ ಪಾರ್ಟನರ್ ಆಫರ್ ಫ್ಲಾಟ್ 1% ತ್ವರಿತ ರಿಯಾಯಿತಿ ಸೇರಿದಂತೆ ವಿವಿಧ ಕೊಡುಗೆ ಸಿಗಲಿದೆ.

ಮೊಟೊರೊಲಾ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಗೂಗಲ್ ಟಿವಿ ಫೀಚರ್ಸ್: ಈ ಸ್ಮಾರ್ಟ್‌ಟಿವಿ 32 ಇಂಚಿನ ಎಲ್ ಇ ಡಿ ಹೆಚ್‌ಡಿ ರೆಡಿ ಡಿಸ್‌ಪ್ಲೇ ಹೊಂದಿದ್ದು, 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಜೊತೆಗೆ 16:09 ಆಕಾರ ಅನುಪಾತ, 60 Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದ್ದು, ಉತ್ತಮ ವೀಕ್ಷಣೆ ಅನುಭವ ನೀಡಲಿದೆ.
7 ಪಿಕ್ಚರ್ ಮೋಟ್ ಲಭ್ಯತೆಯೊಂದಿಗೆ ಈ ಬೆಜೆಲ್-ಲೆಸ್ ಡಿಸ್‌ಪ್ಲೇಯಲ್ಲಿ ಉತ್ತಮ ವೀಕ್ಷಣೆ ಸಿಗಲಿದ್ದು, ಈ ಹೆಚ್‌ಡಿಆರ್ 10 ಟಿವಿ ಸ್ಫಟಿಕ ಸ್ಪಷ್ಟ ಡಿಸ್‌ಪ್ಲೇ ಅನುಭವ ನೀಡುತ್ತದೆ. ಅಷ್ಟೇ ಅಲ್ಲದೆ 16.7 ಮಿಲಿಯನ್ ರೋಮಾಂಚಕ ಬಣ್ಣಗಳ ಬೆಂಬಲ ನೀಡಲಿದ್ದು, 178 ಡಿಗ್ರಿ ವೀಕ್ಷಣಾ ಕೋನದೊಂದಿಗೆ, ಸ್ಮಾರ್ಟ್‌ಟಿವಿಯಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳಲು ಪ್ರೇರೀಪಿಸುತ್ತದೆ.
ಡಾಲ್ಬಿ ತಂತ್ರಜ್ಞಾನದ ಉತ್ತಮ ಆಡಿಯೋ ಅನುಭವವನ್ನು ಈ ಟಿವಿಯಲ್ಲಿ ಪಡೆಯಬಹುದಾಗಿದ್ದು, ಈ ಮೂಲಕ ತಲ್ಲೀನಗೊಳಿಸುವ ಅನುಭವವನ್ನು ಪಡೆಯಬಹುದಾಗಿದೆ. ಈ ಸ್ಮಾರ್ಟ್‌ಟಿವಿ 20-ವ್ಯಾಟ್ ಸ್ಪೀಕರ್ ಆಯ್ಕೆ ಪಡೆದಿದ್ದು ಇದರಲ್ಲಿ ಏಳು ಸೌಂಡ್ ಮೋಡ್, 3D ಆಡಿಯೊ ಇದ್ದು, ಈ ಮೂಲಕ ನಿಮ್ಮನ್ನು ಈ ಸ್ಮಾರ್ಟ್‌ಟಿವಿ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.

ಇದರೊಂದಿಗೆ ಈ ಟಿವಿ 8 GB ಇಂಟರ್ ಸ್ಟೋರೇಜ್ ಬೆಂಬಲ ಪಡೆದಿದ್ದು, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಡಿಸ್ನಿ+ಹಾಟ್‌ಸ್ಟಾರ್, ಪ್ರೈಮ್ ವಿಡಿಯೋ ಸೇರಿದಂತೆ ಅನೇಕ ಆಪ್‌ಗಳಿಗೆ ಬೆಂಬಲ ನೀಡಲಿದೆ. ಈ ಮೂಲಕ ನಿಮ್ಮಿಷ್ಟದ ಶೋಗಳನ್ನು ನೋಡಬಹುದಾಗಿದೆ. ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಈ ಟಿವಿ ರನ್ ಆಗಲಿದ್ದು, ಸ್ಕ್ರೀನ್ ಮಿರರಿಂಗ್, ಬ್ಲೂಟೂತ್, ವೈ-ಫೈ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಟಿವಿಯಲ್ಲಿ ಮೂರು ಹೆಚ್‌ಡಿಎಮ್‌ಐ ಪೋರ್ಟ್, ಎರಡು ಯುಎಸ್‌ಬಿ ಪೋರ್ಟ್ ಇದೆ.


Click it and Unblock the Notifications








